News Kannada
Tuesday, July 05 2022

ನುಡಿಚಿತ್ರ

ನಿಸರ್ಗ ಸೃಷ್ಠಿಸಿದ ಕ್ರಿಸ್ಮಸ್ ಸ್ಟಾರ್ - 1 min read

Photo Credit :

ನಿಸರ್ಗ ಸೃಷ್ಠಿಸಿದ ಕ್ರಿಸ್ಮಸ್ ಸ್ಟಾರ್

ಕ್ರಿಸ್ಮಸ್ ಎಂದಾಗ ಇಡೀ ಜಗತ್ತಿನಲ್ಲಿ ಸಂಭ್ರಮ ಮನೆಮಾಡುತ್ತದೆ. ಹಬ್ಬದ ಆಚರಣೆಗೆ ಕೇವಲ ಜನ ಮಾತ್ರವಲ್ಲ ನಿಸರ್ಗವೂ ಸಿದ್ಧವಾಗುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ದೊಡ್ಡ, ದೊಡ್ಡ ಬೃಂದಾವನಗಳಲ್ಲಿ, ತೋಟದ ಅಂಚಿನ ಬೇಲಿಯಲ್ಲಿ, ಕುಂಡಗಳಲ್ಲಿ ಕುಬ್ಜ(ಬೋನ್ಸಾಯ್)ವಾಗಿ ಬೆಳೆದು ವಿವಿಧ ಬಣ್ಣಗಳಲ್ಲಿ ಹೂ ಬಿಟ್ಟು ಕ್ರಿಸ್ಮಸ್ ಸ್ಟಾರ್ ಕಂಗೊಳಿಸುತ್ತದೆ.


ಕ್ರಿಸ್ಮಸ್ ಸ್ಟಾರ್ ಅನ್ನು ನೋಡದವರು ವಿರಳವೇ ಎನ್ನಬೇಕು. ಮೊದಲು ಇದನ್ನು ಕೆಲವರು ಕೆಂಪು ಹೂ ಎಂದು ಕರೆಯುತ್ತಿದ್ದರು. ಈಗ ಇದರ ತಳಿಯನ್ನು ಅಭಿವೃದ್ಧಿ ಪಡಿಸಲಾಗಿದ್ದು, ಕೆಂಪು ಮಾತ್ರವಲ್ಲದೆ ಬೇರೆ, ಬೇರೆ ಬಣ್ಣಗಳಿಂದ ಆಕರ್ಷಿಸುತ್ತಿದೆ. ತೋಟಗಳ ಬೇಲಿ ಅಂಚಿನಲ್ಲಿ, ಖಾಲಿ ಜಾಗಗಳಲ್ಲಷ್ಟೆ ಸ್ಥಾನ ಪಡೆದಿದ್ದ ಹೂ ಇದೀಗ ಉದ್ಯಾನವನಕ್ಕೂ ಕಾಲಿಟ್ಟಿದೆ. ಕ್ರಿಸ್ಮಸ್ ಸ್ಟಾರ್ ಎಂದೇ ಜನಪ್ರಿಯವಾಗಿರುವ ಇದು ಪಾಯಿನ್ಸೆಟಿಯ ಪಲ್ಚರಿಮ ಯಫೋರ್ಬಿಯೇಸಿ ಎಂಬ ಸಸ್ಯ ಕುಟುಂಬಕ್ಕೆ ಸೇರಿದೆ.  ಕ್ರಿಸ್ಮಸ್ ಫ್ಲವರ್ ಪೇಯಿಂಟೆಡ್ ಲೀಫ್, ಲಾಬ್ಸ್ಟರ್ ಪ್ಲಾಂಟ್, ಮೆಕ್ಸಿಕಿನ್ ಫ್ಲೇಮ್ ಲೀಫ್ ಮುಂತಾದ ಹೆಸರುಗಳು ಇದಕ್ಕಿದೆ.

ಸುಮಾರು ನಾಲ್ಕೆದು ಮೀಟರ್ ನಷ್ಟು ಎತ್ತರಕ್ಕೆ ಬೆಳೆಯುವ ಈ ಸಸ್ಯ ಮಧ್ಯ ಅಮೆರಿಕದ್ದು ಎಂದು ಹೇಳಲಾಗಿದೆ. ತನ್ನ ವಿಶಿಷ್ಟ ಸೌಂದರ್ಯದಿಂದಾಗಿ ಇತರ ಕಡೆಗಳಿಗೆ ಅಲ್ಲಿಂದ ವರ್ಗಾಯಿಸಲ್ಪಟ್ಟು ಈಗ ಪ್ರಪಂಚದಾದ್ಯಂತ ಬೆಳೆಯುತ್ತಿದೆ. ಕಡು ಹಸಿರು ಬಣ್ಣದಎಲೆಗಳ ಹೊಂದಿದ್ದು, ಮೇಲ್ನೋಟಕ್ಕೆ ಅಂಡಾಕಾರವಾಗಿರುತ್ತದೆ. ಗಿಡದಲ್ಲಿ ಬಿಳಿ ಬಣ್ಣದಿಂದ ಕೂಡಿದ ರಾಸಾಯನಿಕ ದ್ರವವಿದ್ದು ಇದು ವಿಷಕಾರಿಯಾಗಿದೆ. ಸಾಮಾನ್ಯವಾಗಿ ಈ ಸಸ್ಯವು ಅಕ್ಟೋಬರ್ ಅಥವಾ ನವೆಂಬರ್ ನಿಂದ ಹೂ ಬಿಡಲು ಪ್ರಾರಂಭಿಸಿ ಕ್ರಿಸ್ಮಸ್ ವೇಳೆಗೆ ಎಲ್ಲೆಡೆಯೂ ಹೂವಿನಿಂದ ಕಂಗೊಳಿಸುತ್ತಾ ಫೆಬ್ರವರಿ ತನಕವೂ ಇರುತ್ತದೆ.

ಹೂ ಬಿಡುವಿಕೆಯಲ್ಲಿ ಇದು ಇತರೆ ಸಸ್ಯಗಳಿಕ್ಕಿಂತ ಭಿನ್ನವಾಗಿದ್ದು, ಹೂಗಳು ಸಹ ವಿಶೇಷತೆಯಿಂದ ಕೂಡಿರುತ್ತದೆ. ಗಿಡದ ಕೊಂಬೆಗಳ ತುದಿಯಲ್ಲಿ ಕೆಂಪು ಬಣ್ಣದ ಎಲೆಗಳನ್ನೊಳಗೊಂಡ ಪುಷ್ಪಗುಚ್ಛಗಳು ಸೃಷ್ಟಿಯಾಗಿ ಗಿಡ ಪೂರ್ತಿ ಕೆಂಪಾಗಿ ಕಂಗೊಳಿಸುತ್ತವೆ. ಪುಷ್ಪಗಳು (ಹೂ) ಚಿಕ್ಕದಾಗಿದ್ದು, ಹೆಣ್ಣು ಹಾಗೂ ಗಂಡು ಹೂವುಗಳು ಜೊತೆಯಾಗಿ ಸಯಾಥಿಯಮ್ ಎನ್ನುವಂತಹ ವಿಶಿಷ್ಟ ಪುಷ್ಪಗುಚ್ಛ ಉಂಟಾಗಿರುತ್ತದೆ. ನೋಡಲು ಬಟ್ಟಲಿನಾಕಾರದಲ್ಲಿರುವ ಸಯಾಥಿಯಮ್ ನ ಮೇಲೆ ಹಳದಿ ಬಣ್ಣದ ಮಕರಂದದ ತಟ್ಟೆಗಳು ಇರುತ್ತವೆ. ಈ ರೀತಿಯ ಹಲವಾರು ಸಯಾಥಿಯಮ್ಗಳ ಸುತ್ತ ಕೃತಕವಾಗಿ ತಯಾರು ಮಾಡಿದ ಹೂಗುಚ್ಛವಿದ್ದು, ಇದರ ಅಡಿಯಲ್ಲಿ ಕೆಂಪು ಬಣ್ಣದ ಎಲೆಗಳು ಸೇರಿಕೊಂಡಿರುತ್ತವೆ. ಈ ಎಲೆಗಳೇ ಸಸ್ಯಕ್ಕೂ ಹೂಗಳಿಗೂ ಮೆರಗು ನೀಡಿರುವುದು ಎಂದರೆ ತಪ್ಪಾಗಲಾರದು. ಕೆಂಪು ಎಲೆಗಳ ಆಕರ್ಷಣೆಗೆ ಒಳಗಾದ ಕೀಟಗಳು ಹೂವಿನೆಡೆಗೆ ಬರುತ್ತವೆ. ಕೆಂಪು ಎಲೆಗಳ ಮಾರ್ಪಾಟು ಕೀಟಾಕರ್ಷಣೆಗಾಗಿ ಸಸ್ಯವೇ ಮಾಡಿಕೊಂಡಿರುವುದು ಎಂದು ಕೆಲವರು ಅಭಿಪ್ರಾಯ ಪಡುತ್ತಾರೆ.

ಕ್ರಿಸ್ಮಸ್ ಸ್ಟಾರ್ ಅನ್ನು ಸೌಂದರ್ಯಕ್ಕೆ ಮಾರು ಹೋದ ವಿಜ್ಞಾನಿಗಳು ಈ ಸಸ್ಯದ ಮೇಲೆ ವಿವಿಧ ರೀತಿಯ ಪ್ರಯೋಗಗಳನ್ನು ನಡೆಸಿ ಬೇರೆಬೇರೆ ರೀತಿಯ ತಳಿಗಳನ್ನು ತಯಾರು ಮಾಡಿದ್ದಾರೆ. ಇವುಗಳಲ್ಲಿ ಹೂವಿನ ಸುತ್ತಲೂ ಕೆಂಪು ಎಲೆಯ ಬದಲಾಗಿ ಬಿಳಿಯ ಎಲೆಗಳನ್ನು ಸೃಷ್ಟಿಸಲಾಗಿದ್ದು, ಇದಕ್ಕೆ ಬಿಳಿ ಪಲ್ಚರಿಮ ಎಂದು ಹೆಸರಿಡಲಾಗಿದೆ. ಅಲ್ಲದೆ, ಗುಲಾಬಿ ಬಣ್ಣವನ್ನೂ ಸೃಷ್ಟಿಸಿದ್ದಾರೆ. 1972ರಲ್ಲಿ ಹಾಲಿವುಡ್ನಲ್ಲಿ ಪಾಯಿನ್ಸೆಟಿಯ ಪಲ್ಚರಿಮ ಹೆನ್ರಿಯಟಕ್ ಡಬಲ್ ಪಾಯಿನ್ಸೆಟ್ಯ ಎನ್ನುವಂತಹ ತಳಿಯನ್ನು ಕಂಡು ಹಿಡಿಯಲಾಗಿದ್ದು, ಈ ಗಿಡದ ತುದಿಯಲ್ಲಿ ಬಿಡುವ ಹೂವಿನ ಸುತ್ತಲೂ ಎರಡು ರೀತಿಯ ಎಲೆಗಳು ಇರುತ್ತವೆ. ಹೊರಭಾಗದಲ್ಲಿ ಅಗಲವಾಗಿ ಮಿರುಗುವ

See also  ಮುಂಗಾರು ಮಳೆಗೆ ಮೈಮರೆಸುವ ಜಲಧಾರೆಗಳು

ಕುಂಕುಮ ಬಣ್ಣದ ಎಲೆಗಳಿದ್ದರೆ, ಒಳಭಾಗದಲ್ಲಿ ಬಣ್ಣದ ಸಣ್ಣ ಸಣ್ಣ ಎಲೆಗಳು ಇವೆ. ಈ ಜಾತಿಯ ಹೂಗಳು ಗಾತ್ರದಲ್ಲಿ ಹಿರಿದಾಗಿಯೂ ದಪ್ಪವಾಗಿಯೂ ಇರುತ್ತವೆ. ಸಾಕಷ್ಟು ಬಿಸಿಲು ಬೀಳುವ ಸ್ಥಳದಲ್ಲಿ ಯಥೇಚ್ಛವಾಗಿ ಈ ಸಸ್ಯಗಳು ಬೆಳೆಯುತ್ತವೆ ಅಲ್ಲದೆ, ಉತ್ತಮವಾದ  ಹೂಗಳನ್ನು ಸಹ ಬಿಡುತ್ತವೆ. ಸಸ್ಯಾಭಿವೃದ್ಧಿಯನ್ನು ಕಾಂಡದ ತುಂಡುಗಳನ್ನು ನೆಡುವ ಮೂಲಕ ಮಾಡಬಹುದಾಗಿದೆ. ಇತ್ತೀಚೆಗಿನ ದಿನಗಳಲ್ಲಿ ಇದರ ಬಗ್ಗೆ ಇನ್ನಷ್ಟು ಸಂಶೋಧನೆಗಳು ನಡೆಯುತ್ತಿರುವುದನ್ನು ಕಾಣಬಹುದು. ಕ್ರಿಸ್ಮಸ್ ಹಬ್ಬದ ಅಲಂಕಾರದಲ್ಲಿ ಇದಕ್ಕೊಂದು ಮಹತ್ವದ ಸ್ಥಾನ ನೀಡಲಾಗುತ್ತದೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು