News Kannada
Thursday, July 07 2022

ನುಡಿಚಿತ್ರ

ಹೂವೂ…… ಚೆಲುವೆಲ್ಲಾ…. ನಂದೆಂದಿತ್ತು …… ! - 1 min read

Photo Credit :

ಹೂವೂ...... ಚೆಲುವೆಲ್ಲಾ.... ನಂದೆಂದಿತ್ತು ...... !

ಮಡಿಕೇರಿ: ಮಡಿಕೇರಿಯಿಂದ ಸುಮಾರು 8 ಕಿ.ಲೋ ಮೀಟರ್ ದೂರದ ಬೋಯಿಕೇರಿಯಲ್ಲಿ ಬಲ್ಯಾಟ್ರಿ ಎಂಬ ಕಾಫಿ ತೋಟವಿದೆ, ಅದರೊಳಗೆ ಒಂದು ಸುಂದರವಾದ ಹೂದೋಟವಿದ್ದು, ಅಲ್ಲಿ ಎಲ್ಲಾ ಹೂವೂಗಳು ನಳನಳಿಸುತ್ತ ಬೀಸುವ ಗಾಳಿಗೆ ಹೂವೂ ಚೆಲುವೆಲ್ಲಾ ನಂದೆನ್ನುತ್ತ ಬೀಗುತ್ತ ನೋಡುಗರನ್ನು ಹಾಯ್… ಎಂದು  ನಗುತ್ತ ಕೈ ಬೀಸಿ ಕರೆಯುತ್ತಿವೆಯೇನೋ ಎಂಬಂತೆ ಭಾಸವಾಗುತ್ತದೆ.


ಕೊಡಗಿನವರಿಗೆ ಮನೆ ಮುಂದೆ ಹೂದೋಟ ಮಾಡುವುದು ಕೇವಲ ಹವ್ಯಾಸ ಮಾತ್ರವಲ್ಲ, ಒಂದು ಫ್ಯಾಷನ್ ಕೂಡ ಹೌದು. ಮಡಿಕೇರಿ ಸಮೀಪದ ಬೋಯಿಕೇರಿ ಬಳಿ ಇರುವ ರಾಜ್ಯ ಸಭಾ ಮಾಜಿ ಸದಸ್ಯ ಎಫ್. ಎಂ. ಖಾನ್ ಅವರ ಹೂದೋಟ ಜಿಲ್ಲೆಯಲ್ಲಿಯೇ ಅತ್ಯಂತ ಶ್ರೀಮಂತಿಕೆಯ ಪುಷ್ಪೋದ್ಯಾನವನವಾಗಿದೆ. ಶತಮಾನ ಕಂಡ ತೋಟದ ಮನೆಯ ಮುಂದಿನ ಉದ್ಯಾನವನ ಅಕ್ಷರಶಃ ಪುಷ್ಪ ಕಾಶಿಯಂತಿದೆ.

ಬಲ್ಯಾಟ್ರಿ ಕಾಫಿ ತೋಟದ ನಡುವೆ ಅಡಗಿರುವ ಬಂಗಲೆ ಎದುರಿನ  ಹೂದೋಟದಲ್ಲಿ ಸಾವಿರಾರು ಬಗೆಬಗೆಯ ಹೂಗಿಡಗಳಲ್ಲಿ ಹೂಗಳು ಅರಳಿವೆ. ಮುಖ್ಯವಾಗಿ ಸುಮಾರು 100ರಷ್ಟು ಹೆಸರಿಸುವ ಹೂವುಗಳಿದ್ದರೂ ಮತ್ತೆ ಸಹಸ್ರಾರು ಸಂಖ್ಯೆಯಲ್ಲಿ ವಿವಿಧ ಪ್ರಭೇದದ ದೇಶ- ವಿದೇಶಗಳ ಪುಷ್ಪ ತಳಿಗಳಿವೆ. 50 ರಿಂದ 80 ವರ್ಷ ವಯೋಮಾನದ ಕ್ಯಾಕ್ಟಸ್ ಗಿಡ ಗಗನ ಚುಂಬಿಯಂತೆ ಬೆಳೆದು ನಿಂತಿದೆ, ಇದು ಮಳೆ ಗಾಳಿಯನ್ನು ಲೆಕ್ಕಿಸದೆ ಚಿರ ಯೌವನದಂತೆ ಸೆಟೆದು ನಿಂತಿದೆ. ಎತ್ತರಕ್ಕೆ , ಬೆಳೆದಿರುವ ಕ್ಯಾಕ್ಟಸ್ ಹೂದೋಟದ ಜೀವಾಳ. ಮೈಯಿಡಿ ಮುಳ್ಳನ್ನು ಹೊಂದಿದ್ದರೂ ಇದರ ಸೌಂದರ್ಯ ಮಾತ್ರ ಆಹಾ… ಎಂಥಹ ಕಠಿಣ ಮನಸ್ಸನ್ನು ನಾಟಿ ಮೆಚ್ಚಿಸದೆ ಇರದು.

ಪ್ರಸಕ್ತ ವರ್ಷ ಆಕರ್ಷಕವುಳ್ಳ ವಿವಿಧ ಬಗೆಯ ಹೂವುಗಳೊಂದಿಗೆ ವಿಶೇಷವಾಗಿ ಬಣ್ಣಬಣ್ಣದ ಡೇಲಿಯಾ ಸೇರಿದಂತೆ ಅನೇಕ ಹೂಗಳಂತೂ ತನ್ನ ಶಾಶ್ವತ ಅಸ್ತಿತ್ವವನ್ನು ನೆಲೆಯೂರಿಸಿಕೊಂಡಿದೆ, ಇನ್ನು ಹಚ್ಚ ಹಸಿರಿನ ಹೂವು ಮತ್ತು ಗಿಡಗಳ ಮಧ್ಯೆ ಅರಳಿ ನಿಂತಿರುವ ನಾನಾ ಜಾತಿಯ ಗುಲಾಬಿ,ಚೆಂಡು ಹೂವುಗಳು ವರ್ಷವಿಡಿ ಹೂ ಅರಳಿ ಬಂಗಲೆಯ ಸೌಂದರ್ಯಕ್ಕೆ ಮೆರಗನ್ನು ಮೂಡಿಸಿವೆ. ಆಂಥೋರಿಯಂ, ಪೆರೇನಿಯಲ್, ಫಾಲೀಯೇಜ್ ಸೇರಿದಂತೆ ದೇಶ ವಿದೇಶದ ಬಣ್ಣ ಬಣ್ಣದ ಹೂ ತೋಟದ ಶ್ರೀಮಂತಿಕೆಯನ್ನು ಎತ್ತಿ ಹಿಡಿದಿವೆ.

ಬಂಗಲೆಯ ಸುತ್ತಲೂ ಅಲ್ಲದೆ ಮನೆಯ ಒಳಗೂ ಕೂಡ ನಾನಾ ರೀತಿಯ ಹೂ ಬಳ್ಳಿಗಳನ್ನು ನೇತು ಬಿಡಲಾಗಿದೆ. ಬೃಹದಾಕಾರದ ಭೂತಾಳೆ, ಹಚ್ಚ ಹಸಿರಿನ ಲಾನ್, ವಿಶ್ರಾಂತಿ ಬೆಂಚ್, ಚಿಮ್ಮುವ ಕಾರಂಜಿ ಉದ್ಯಾನವನಕ್ಕೆ ಇನ್ನಷ್ಟು ಮೆರಗು ನೀಡಿದೆ. ಸಾವಿರಕ್ಕೂ ಹೆಚ್ಚು ಕುಂಡಗಳಲ್ಲಿ ಹೂ ಗಿಡಗಳನ್ನು ಬೆಳೆಸಲಾಗಿದ್ದು, ಇವುಗಳ ನಿರ್ವಹಣೆಗಾಗಿಯೇ ವರ್ಷವಿಡೀ ಹತ್ತಾರು ಮಂದಿ ಕಾರ್ಮಿಕರು ಶ್ರಮಿಸುತ್ತಿರುತ್ತಾರೆ.

ಸುಮಾರು ಅರ್ಧ ಎಕರೆಯಲ್ಲಿ ಹೂ ಅರಳಿ ಸುವಾಸನೆ ಬೀರುತ್ತಿದ್ದು, ಪುಷ್ಪ ಪ್ರೀಯರನ್ನು ಕೈ ಬೀಸಿ ಕರೆಯುತ್ತಿದೆ. ಸಾರ್ವಜನಿಕ ಪ್ರದರ್ಶನ ಹಿನ್ನೆಲೆಯಲ್ಲಿ ಉದ್ಯಾನವನಕ್ಕೆ ಲೈಟಿಂಗ್ಸ್ ಅಳವಡಿಸಿ ಇನ್ನಷ್ಟು ಆಕರ್ಷಣೀಯಗೊಳಿಸಲಾಗಿದೆ.

ಖಾನ್ ಅವರ ಅಜ್ಜನ ಕಾಲದಿಂದ ಉದ್ಯಾನವನ ನಿರ್ವಹಿಸಿಕೊಂಡು ಬರಲಾಗುತ್ತಿದ್ದು, ಬ್ರಿಟಿಷರು ಕೂಡ ಉದ್ಯಾನವನವನ್ನು ನೋಡಿ ಮೆಚ್ಚಿದ್ದರಂತೆ. ಅಂದಿನಿಂದಲೂ ಸತತವಾಗಿ ಪುಷ್ಪೋದ್ಯಮದಲ್ಲಿ ವಿವಿಧ ಪ್ರಶಸ್ತಿಗಳನ್ನು ಪಡೆದುಕೊಂಡು ಬರುತ್ತಿದ್ದಾರೆ. ದೇಶದ ಎಲ್ಲೇ ಪುಷ್ಪ ಪ್ರದರ್ಶನ ನಡೆದರೂ ಅಲ್ಲಿ ಖಾನ್ ಅವರ ಹೂದೋಟದ ಒಂದಷ್ಟು ಹೂ ಗಿಡಗಳು ರಾರಾಜಿಸುತ್ತಿರುತ್ತವೆ.

See also  ಕೊಡಗಿನಲ್ಲಿ ನಾಶವಾದ ಶ್ರೀಗಂಧದ ಕತೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು