News Kannada
Tuesday, July 05 2022

ನುಡಿಚಿತ್ರ

ಪರಿಣೀತಾ - 1 min read

Photo Credit :

ಪರಿಣೀತಾ

‘ನನಗೆ ಇದೆಲ್ಲಾ ಇಷ್ಟ ಇಲ್ಲ, ತಟಸ್ಥವಾಗಿ ನಿಲ್ಲುವಂತ ಯಾವುದರಲ್ಲೂ ಆಸಕ್ತಿಯಿಲ್ಲ, ಮೇಲಾಗಿ ಒಂದು ಚೌಕಟ್ಟು ಕಟ್ಟಿಕೊಂಡು ಅದರೊಳಗೆ ಬಾವಿಯ ಕಪ್ಪೆಯಂತಿರುವುದು ನನಗೆ ಆಗಿ ಬರುವುದಿಲ್ಲ. ನಾನು ಚಿಕ್ಕಂದಿನಿಂದಲೂ ಹೀಗೇಯೆ. ನೇರಾನೇರ ಮಾತಾಡಿ, ಹೆದರದೆ,ಸೋತರೂ ಸೋಲದೆ ಬೆಳೆದವಳು’ ಎಂದು ಕೋರ್ಟಿನಲ್ಲಿ ಆಕೆ ಹೇಳಿದ ಮಾತುಗಳು ನನ್ನೊಳಗಿರುವ ಗಂಡಸನ್ನೇ ಉತ್ತರವಿಲ್ಲದ ಪ್ರಶ್ನೆಯಲ್ಲಿ ಮುಳುಗಿಸಿವೆ. ಅವಳ ಮಾತು,ನಡತೆ ಮತ್ತು ಸೌಂದರ್ಯಕ್ಕೆ ಆನೆ-ಇರುವೆಯ ವ್ಯತ್ಯಾಸವಿದೆ. ಮೊನಚುಮಾತಿನ ಸೌಂದರ್ಯದ ಗಣಿ ಅವಳು ‘ಪರಿಣೀತಾ’. ನನ್ನ ಮೊಟ್ಟಮೊದಲ ಮತ್ತು ಕಟ್ಟಕಡೆಯ ಕ್ರಷ್. ಬುದ್ಧಿವಂತೆ, ದಿಟ್ಟೆ, ಗಂಡುಬೀರಿ, ಚಂಚಲೆಯಂತ ಪರಿಣೀತಾಳಲ್ಲಿ ಏನೂ ಇಲ್ಲದಂತೆ ಕಂಡರೂ ಎಲ್ಲಾನೂ ಇರುವ ಚಂದನದ ಬೊಂಬೆ ಅವಳು. ಅವಳ ಬಗ್ಗೆ ತಿಳಿದಿರುವವರು ತುಂಬಾ ಕಮ್ಮಿ ಆದರೆ ನಾನಂತೂ ಅವಳ ವಿಷಯದಲ್ಲಿ ಡಿಗ್ರಿನೇ ಪಡೆದಿದ್ದೇನೆ. ಅವಳ ಬಗ್ಗೆ ನಾನು ಗೀಚದ ಕವನಗಳಿಲ್ಲ, ಕಲ್ಪಿಸದ ಕಲ್ಪನೆಗಳಿಲ್ಲ. ನನ್ನದು ಏಕಮುಖ ಪ್ರೀತಿ. ಆದರೂ ಕಾಲೇಜಿನಿಂದ ಶುರುವಾಗಿ ಅವಳ ಮದ್ವೆಯಾಗಿ, ಹೆಣ್ಣುಮಗು ಹುಟ್ಟೋವರೆಗೂ ನನ್ನ ಏಕಮುಖ ಪ್ರೀತಿ ಅವಳ ಕಡೆಗೆ ಕಾವೇರಿಯಂತೆ ಹರಿಯುತ್ತಲೇ ಇತ್ತು. ಏಕಲವ್ಯ ದ್ರೋಣಾಚಾರ್ಯರನ್ನು ಪೂಜಿಸಿದಂತೆ ನಾನವಳನ್ನು ಪೂಜಿಸಿದ್ದೇನೆ, ಪ್ರೇಮಿಸಿದ್ದೇನೆ. ಆ ಏಕಮುಖ ಪ್ರೀತಿಗೆ ಪೂರ್ಣವಿರಾಮ ಬಿದ್ದದ್ದು ನನ್ನ ಬಾಳಿನಲ್ಲಿ ದಿವ್ಯ ಬಂದ ಮೇಲೆ.
ಆದರೂ ಪರಿಣೀತಾ ಮೇಲಿನ ಆ ಒಂದು ಸೆಳೆತ ಇಂದಿಗೂ ಮೂರು ವರುಷಗಳಿಂದೀಚೆಗೂ ಬೂದಿಮುಚ್ಚಿದ ಕೆಂಡದಂತೆ ಇದೆ. ಹೆಣ್ಣು ಸ್ವಭಾವತ ಚಂಚಲೆ. ಆದರೆ ಇವಳು ಎಲ್ಲರಿಗಿಂತಲೂ ಒಂಚೂರು ವಿಚಿತ್ರ. ಅವಳಪ್ಪ ಕಾಫಿ ಉದ್ಯಮಿ, ತಾಯಿ ಬ್ಯಾಂಕ್ ಊದ್ಯೋಗಿ, ಇದ್ದೊಬ್ಬ ತಮ್ಮ ಸಾಫ್ಟ್ವೇರ್, ತಂಗಿ ಅಶ್ಮಿತಾ ಮೆಡಿಕಲ್ ಸ್ಟೂಡೆಂಟ್. ತಂದೆ ಎಲ್ಲಾ ವಿಷಯಗಳನ್ನು ಲೆಕ್ಕಾಚಾರ ಮಾಡಿ ನಿರ್ಣಯ ತೆಗೆದುಕೊಳ್ಳುವ ವ್ಯಕ್ತಿ. ಒಂದಿನ ನಾವು ಇಪ್ಪತ್ತು ಜನ ಗೆಳೆಯರು ಪರಿಣೀತಾ ಮನೆಗೆ ಹಬ್ಬದ ಊಟಕ್ಕೆ ಹೋಗಿದ್ದೆವು. ಅಲ್ಲಿ ಅವರ ಆತಿಥ್ಯ ಸತ್ಕಾರ ನೋಡಿನೇ ಮನದಲ್ಲಿ ಅವರ ಮನೆ ಅಳಿಯನಾಗಿ ಹೋಗಿದ್ದೆ. ಅವಳಿಗೆ ಬುಲೆಟ್ ಬೈಕ್ ಓಡಿಸುವುದೆಂದರೆ, ಅದರಲ್ಲಿ ದೂರ ಪ್ರಯಾಣ ಮಾಡುವುದೆಂದರೆ ಭಯಂಕರ ಖುಷಿ. ಬಹುಷ: ಆಕೆ ಈ ಜಗತ್ತಿನಲ್ಲಿ ಹೆಚ್ಚಾಗಿ ಪ್ರೀತಿಸುತ್ತಿದ್ದ ವಸ್ತುವೆಂದರೆ ಅದೇ ‘ಗೋಲ್ಡನ್ ಕಲರ್’ ಬುಲೆಟ್. ಜೀವಮಾನದಲ್ಲಿ ಸೀರೆ ಉಟ್ಟವಳೇ ಅಲ್ಲ ಅವಳು, ಸೀರೆ ಅಂತ ಅಲ್ಲ ಸಲ್ವಾರ್ ಕೂಡ. ಅವಳ ಬಟ್ಟೆ ಜೀನ್ಸ್ ಮತ್ತು ಟೀ-ಶರ್ಟ್. ಮೊದಲೇ ಅಂದಗಾತಿ. ಇನ್ನು ಆ ಉಡುಗೆಯಲ್ಲಿ ಆಕೆಯನ್ನು ಕಂಡಾಗ ನನ್ನ ಹೃದಯ ಬಾಯಿಂದ ಹೊರಬಂದು ಜೊಲ್ಲು ಸುರಿಸುತ್ತಿತ್ತು. ಕ್ರಿಕೆಟ್ ನಲ್ಲಿ ಇಂಡಿಯಾ ಗೆದ್ದಾಗ, ಶಾರುಖ್ ಖಾನ್ ಹೀರೋಯಿಮನ್ ಗೆ ಕಿಸ್ ಕೊಟ್ಟಾಗ, ಬ್ರೂಸ್ಲೀ ಖಳರನ್ನು ಹೊಡೆದಾಗ ಶಿಳ್ಳೆ ಹೊಡೆದು ಕುಣಿಯುವುದು, ಗಂಡು-ಹೆಣ್ಣೆನ್ನದೆ ಗೆಳೆಯರನ್ನು ಅಪ್ಪಿ ಹಿಡಿದು ಮುದ್ದಿಸುವುದು ಅವಳಿಗೆ ಎಲ್ಲಿಲ್ಲದ ಹುಚ್ಚು.

ನನ್ನ ಹುಟ್ಟುಹಬ್ಬದ ದಿನ ನನ್ನನ್ನು ಉಸಿರುಗಟ್ಟುವಷ್ಟು ತಬ್ಬಿಹಿಡಿದು ಮುತ್ತಿಡುವಾಗ ಅವಳ ಸೌಂದರ್ಯದ ಗುಲಾಮನಾಗಿರುವ ನನ್ನ ಮನಸ್ಸು ಕಲ್ಪಿಸುತ್ತಿದ್ದದ್ದು ನನ್ನ ಎದೆಗೆ ಒತ್ತಿ ಅಪ್ಪಚ್ಚಿಯಾಗಿರುವ ಅವಳ ಎದೆ ಸೌಂದರ್ಯ. ಒಂದಿನ ಹುಚ್ಚುಕಾಮನೆಯನ್ನು ತಡೆಹಿಡಿಯಲಾಗದೆ ಜೊತೆ ರಾತ್ರಿ ಬೈಕಲ್ಲಿ ಹಿಂದೆ ಕೂತು ಪಯಣಿಸುತ್ತಿರುವಾಗ ಅವಳ ತುಂಬಿದೆದೆಗೆ ಕೈ ಹಾಕಿದ್ದೆ. ಆದರೂ ಆಕೆ ಒಂಚೂರು ಮುನಿಸದೆ ‘ಅರು ನೀನು ಕೆಟ್ಟವನಲ್ಲ ಕಣೋ’ ಅಂದಿದ್ದು ನನ್ನ ಕೆಟ್ಟದೃಷ್ಟಿಯ ಕಪಾಳಕ್ಕೆ ಬಾರಿಸಿದಂತ್ತಿತ್ತು. ಆದರೆ ಎಲ್ಲಾರ ಜೊತೆ ಹಾಗೆ ಇಲ್ಲ ಅವಳು. ಒಮ್ಮೆ ನಮ್ಮದೆ ಗುಂಪಿನ ಗೆಳೆಯ ಪ್ರೀತಂ ಅಶ್ಲೀಲ ಸಂದೇಶ ಕಳಿಸಿದ್ದಕ್ಕೆ ಕಾಲೇಜಿನಲ್ಲಿ ಅವನ ಕಪಾಳಕ್ಕೆ ಬಾರಿಸಿ ರಂಪಾಟ ಮಾಡಿದ್ದಳು. ಮತ್ತೊಮ್ಮೆ ಯಾರೋ ಸೀನಿಯರ್ ಒಬ್ಬ ಪ್ರಪೋಸ್ ಮಾಡಿದ್ದಕ್ಕೆ ಅವನಿಗೆ ಇಡೀ ದಿನ ಲೆಕ್ಚರ್ ತಗೊಂಡಿದ್ದಳು. ಅವಳು ಹಾಗೇನೆ. ಅವಳಿಗೆ ಈ ಕ್ಷಣ ಏನೋ ಇಷ್ಟ ಆಗುವಂಥದ್ದು ಮರುಕ್ಷಣ ಇಷ್ಟ ಆಗಿರುವುದಿಲ್ಲ. ಆಕೆಯಲ್ಲಿ ಯಾವುದಕ್ಕೂ ಇತಿ-ಮಿತಿಗಳಿಲ್ಲ. ಕುಣಿಯೋರ ಜೊತೆ ಕುಣಿಯ್ತಾಳೆ, ಕುಡಿಯೋರ ಜೊತೆ ಕುಡಿಯ್ತಾಳೆ, ಪಡ್ಡೆ ಹುಡುಗರಂತೆ ಹೊಡೆದಾಡ್ತಾಳೆ, ಬಿಕಿನಿಯಲ್ಲ್ಲಿ ಫೋಟೊಗೆ ಪೋಸ್ ಬೇಕಾದ್ರೂ ಕೊಡ್ತಾಳೆ ಹಾಗಂತ ಅವಳನ್ನು ಬೋಲ್ಡ್ ಬ್ಯೂಟಿಯೆಂದು ಕರೆದ್ರೆ ಸಿಕ್ಕಾಪಟ್ಟೆ ರೇಗ್ತಾಳೆ. ಉತ್ತರವಿಲ್ಲದ ಪ್ರಶ್ನೆ ಅವಳು, ಅರ್ಥಗಳಿಲ್ಲದ ಶಬ್ದಕೋಶ ಅವಳು. ನನ್ನನ್ನು ಪ್ರೀತಿಯಿಂದ ‘ಅರು’ ಅಂತ ಕರೆಯುವಳು. ಹಾಗೆಲ್ಲ ಅವಳು ಕರೆದಾಗ ನನ್ನ ಗಂಡು ಹೃದಯ ಉದ್ರೇಕವಾಗಿ ಹಸ್ತಮೈಥುನ ಮಾಡುತ್ತಿತ್ತು. ಒಂದಿನ ಅವಳನ್ನು ಖಾಸಗಿಯಾಗಿ ಕರೆದು ‘ನೋಡು ಪರಿ, ಕೆಲವೊಮ್ಮೆ ನೀನು ಮೈಮರೆತು ಹುಚ್ಚುಚ್ಚಾಗಿ ಆಡುವುದು ನನಗೆ ನೋವಾಗುತ್ತೆ, ನಿನ್ನನ್ನು ತುಂಬಾ ಪ್ರೀತಿಸ್ತಾ ಇದ್ದೇನೆ, ಅರ್ಥ ಮಾಡ್ಕೊ ಪ್ಲೀಸ್. ನೀನು ಪ್ರೀತಿಸೊಲ್ಲ, ಸಿಗೊಲ್ಲ ಅಂದರೆ ಇದೇ ಕ್ಷಣ ಊರಲ್ಲದ ಊರಿಗೆ, ಜನರಿಲ್ಲದ ನಾಡಿಗೆ ಹೊರಟ್ಹೋಗಿ ಹುಚ್ಚನಂತೆ ಇದ್ದು ಸತ್ತೋಗ್ತೇನೆ, ಕಾರಣ ನೀನಾಗ್ತೀಯ’ ಅಂತ ಹೇಳಿದ್ದೆ. ಅಷ್ಟಕ್ಕೆ ಸುಮ್ಮನಾಗಿ ನನ್ನ ಮುಖ ನೋಡದೆ ಹೊರಟ್ಹೋದವಳು ಹತ್ತು ದಿನ ಕಾಲೇಜಿಗೆ ಬಂದಿರಲಿಲ್ಲ. ನನಗೆ ಗಾಬರಿಯಾಗಿ ಹೋಗಿತ್ತು. ಆದರೆ ಅವಳು ಮಾತ್ರ ಯಾವುದರ ಪರಿವೆಯೂ ಇಲ್ಲದೆ ಫ್ಯಾಮಿಲಿ ಟೂರ್ ಹೋಗಿದ್ದಳಂತೆ. ಕಾಲೇಜಿಗೆ ಬಂದ ಮೇಲೆನೂ ಯಾರ ಹತ್ರನೂ ಮಾತಡ್ತಾ ಇರ್ಲಿಲ್ಲ ಸುಮ್ಮನೆ ಡೆಸ್ಕ್ ಮೇಲೆ ತಲೆ ಇಟ್ಟು ಮಲಗ್ತಿದ್ಳು. ಅವಳ ಆ ಥರದ ನಡವಳಿಕೆ ತುಂಬಾ ಹೊಸತು ನಮಗೆ. ಆಮೇಲೆ ನನಗೆ ಕಿಡ್ನಿಸ್ಟೋನ್ ಆಗಿ ಆಸ್ಪತ್ರೆಯಲ್ಲಿದ್ದ ಸಮಯದಲ್ಲಿ ತಾಯಿ ಜೊತೆ ನನ್ನ ಆರೈಕೆಯನ್ನು ಮಾಡಿದ್ದಳು. ಆದರೆ ನಾನು ಮಾತ್ರ ಮಾತಡ್ಲಿಲ್ಲ ಅವಳ ಜೊತೆ ಆಗ ಅವಳೇ ಬಂದು ಮುತ್ತಿಟ್ಟು ‘ಲವ್ಯೂ ಕಣೋ idiot ಅಂದಿದ್ಳು. ನನ್ನ ಖುಷಿಯನ್ನು ನೋಡಿ ‘ ನಾನು ನಿನ್ಗೆ ಸರಿಯಾದ ಜೋಡಿ ಅಲ್ಲ ಕಣೋ ಗುಗ್ಗು, ನನಗೆ ನಿನ್ನ ಥರ ಸಂಸಾರಿಯಾಗೋಕೆ ಇಷ್ಟ ಇಲ್ಲ, ಇದ್ದರೂ ಅದು ಕ್ಷಣಿಕ. ಆಮೇಲೆ ನಾನು ದೂರ ಇರ್ಬೇಕು. ನನ್ನನ್ನು ಏಲಿಯನ್ ಥರ ಟ್ರೀಟ್ ಮಾಡು, ಅದೇ ಸರಿ. ನನಗೆ ಈ ನೆಲದ ಕಾನೂನುಗಳು ಕಟ್ಟಿ ಹಾಕ್ಬಾರ್ದು, ಚಿಟ್ಟೆಯಂತೆ ಹಾರಾಡ್ತಾ ಇರ್ಬೇಕು ನಾನು, ಕಲ್ಪನಾ ಚಾವ್ಲಾ ಥರ ಆಕಾಶದಲ್ಲೇ ಕೊನೆಯಾಗ್ಬೇಕು ನಾನು’ ಎಂದು ಏನೇನೊ ವಿಚಿತ್ರವಾಗಿ ಮಾತಾಡಿ ‘ನಾನು ಕೈ ಕೊಟ್ರೆ ಬೇಸರಿಸ್ಬೇಡ, just chill,take life as it happens’ ‘ ಅನ್ನುತ್ತಾ ನನಗೆ ಹುಚ್ಚನ್ನೂ ಹಿಡಿಸಿದ್ದಳು. ನನ್ನ ಅಪ್ಪ-ಅಮ್ಮ ಒಮ್ಮೆ ಅವಳಲ್ಲೇ ಕೇಳಿದ್ದಿದೆ. ನೀನೇನು ‘ಹೆಣ್ಣಾ?? ಅಥವಾ ಗಂಡಾಗಿ ಹುಟ್ಟಬೇಕಾದವಳು ತಪ್ಪಿ ಹೆಣ್ಣಾಗಿ ಹುಟ್ಟಿದ್ದಿಯಾ’ ಅಂತ. ಅದಕ್ಕೆ ಜೋರಾಗಿ ನಕ್ಕು ಸುಮ್ಮನಾಗಿದ್ದಾಳೆ.

See also  ಮುಂಗಾರು ಮಳೆಗೆ ಮೈಮರೆಸುವ ಜಲಧಾರೆಗಳು

ಕಾಲೇಜು ದಿನಗಳು ಮುಗಿದ ಮೇಲೆ ಒಮ್ಮೆ ನಮ್ಮನೆಗೆ ಬಂದು ಅಡುಗೆಮನೆ ಹೊಕ್ಕು ಏನೋ ಒಂದು ವಿಶೇಷವಾದ ಪಾಯಸ ಮಾಡಿ ಬಡಿಸಿದ್ದಳು. ನನಗೂ ಅವಳಿಗೂ ಪಾಯಸ ಅಂದ್ರೆ ಇಷ್ಟ. ನನ್ನ ಜೊತೆ ಕೂತು ಪಾಯಸ ಹೀರುವಾಗ ತನ್ನ ಕಾಲಬೆರಳಿಂದ ನನ್ನ ಕಾಲಬೆರಳ ಜೊತೆ ಆಟ ಆಡುತ್ತಾ ‘ನನ್ನ ಹಾಲು ಹಾಕಿದ ಪಾಯಸ ಹೇಗಿದೆ’ ಎಂದು ಪೋಲಿ ಜೋಕು ಹೊಡೆಯುತ್ತಾ ನನ್ನ ತೋಳು ಚಿವುಟಿ, ಪಾಯಸ ಮೆತ್ತಿದ ತುಟಿಯಿಂದ ನನ್ನ ಗಲ್ಲಕ್ಕೆ ಮುತ್ತಿಕ್ಕಿದ್ದಳು. ಅದೇ ದಿನ ಮಧ್ಯಾಹ್ನ ರೊಮ್ಯಾನ್ಸ್ ಮಾಡೋಣ ಎಂದು ಮಿತಿಮೀರಿ ರೊಮ್ಯಾನ್ಸ್ ಮಾಡಿ ಇದೇ ಕಣೋ ಲವ್, ಇಷ್ಟೇ ಲವ್ ಎಂದು ಸಂಪೂರ್ಣ ಉಪೇಂದ್ರ ಶೈಲಿಯಲ್ಲಿ ಡೈಲಾಗ್ ಬಿಟ್ಟಿದ್ದಳು. ಆಮೇಲೆ ಹೊರಟು ಹೋದ ಹುಡುಗಿ ತಿಂಗಳಾನುಗಟ್ಟಳೆ ಪತ್ತೆ ಇರಲಿಲ್ಲ. ಎರಡು ತಿಂಗಳ ನಂತರ ಬಂದು ಕೆಲಸ ಸಿಕ್ಕಿತೆಂದು ಹೇಳಿ ಸಿಹಿ ಹಂಚಿ ಸಂಭ್ರಮಿಸಿದ್ದಳು. ನನಗಂತೂ ಅವಳ ಸಹವಾಸ ಮಾಡಿದ್ದಕ್ಕೆ ಸಾಕಾಗಿ ಹೋಗಿತ್ತು. ಮನೆಗೆ ಬಂದ ಒಂದೆರಡು ದಿನ ಸರಾಗವಾಗಿ ಸುಮ್ಮಸುಮ್ಮನೆ ಫೋನ್ ಮಾಡಿದ್ದಳು. ನನಗೆ ಕೆಲಸ ಸಿಕ್ಕ ತಕ್ಷಣ ಒಬ್ಬನೇ ಮಗನಾದ್ದರಿಂದ ಮನೆಯಲ್ಲಿ ಮದುವೆಯ ಒತ್ತಡ ಹೇರೋಕೆ ಶುರುಮಾಡಿದರು. ಪರಿಯನ್ನು ಮನೆಗೆ ಕರೆದು ತಂದೆ ತಾಯಿ ಸಮ್ಮುಖದಲ್ಲಿ ಮಾತಾಡೋದು ಎಂದು ಯೋಜನೆ ಹಾಕಿ ಎಲ್ಲಿದ್ದರೂ ಆದಷ್ಟು ಬೇಗ ಮನೆಗೆ ಬರಬೇಕೆಂದು ಅವಳಿಗೆ ಈಮೇಲ್ ಹಾಕಿದ್ದೆ. ಒಮ್ಮೆ ಅವಳ ಮನೆ ಕಡೆಗೂ ಹೋಗಿದ್ದೆ ಆಗವಳ ತಾಯಿ ಮೀನ ಆಂಟಿ ಬಂದು ಪರಿ ಬರೋವಾಗ ರಾತ್ರಿ ಲೇಟ್ ಆಗುತ್ತೆ ಬಂದ ಮೇಲೆ ಫೋನು ಮಾಡಲು ಹೇಳ್ತೇನೆ ಎಂದು ನಿಂಬೆ ಹಣ್ಣಿನ ಶರಬತ್ತು ಕುಡಿಸಿ ಕಳಿಸಿದ್ದರು. ಆದರೂ ಆ ದಿನ ರಾತ್ರಿ ಫೋನಿಲ್ಲ, ಮಾರನೇ ದಿನ ಸಂಜೆ ಆರು ಗಂಟೆಗೆ ಬುಲೆಟ್ ಏರಿ ಮನೆಗೆ ಬಂದವಳು ‘ಬಾರೋ ಅರು, ಸಕಲೇಶಪುರಕ್ಕೆ ಹೋಗೊಣ, ನನಗ್ಯಾಕೋ ಇವತ್ತು ಹೋಗ್ಲೇಬೇಕು ಅಲ್ಲಿಗೆ ಎಂದು ಕರೆಸಿ ತಡರಾತ್ರಿ ಸಕಲೇಶಪುರ ತಲುಪಿ ರೂಂ ಮಾಡಿ, ಬಿಯರ್ ಕುಡಿದು, ತಿಂದು, ಕುಣಿದು ಕೇಕೆ ಹಾಕಿ ಗಮ್ಮತ್ತು ಮಾಡಿ ಮತ್ತೆ ಮೈಮರೆತು ಮಜಾ ಮಾಡಿದ್ಮೇಲೆ ಬೆರಳಲ್ಲಿನ ರಿಂಗ್ ತೋರಿಸಿ ‘ನನಗೆ ಎಂಗೆಜ್ಮೆಂಟ್ ಆಯ್ತು ಕಣೋ’ ಎಂದು ಹೇಳಿ ಒಂದೇ ಸಮನೆ ಸಿಡಿಲು ಬಡಿಸಿದ್ದಳು. ಆದರೂ ನಾನು ನಂಬ್ಲಿಲ್ಲ. ಆಮೇಲೆ, ‘ತಂದೆ ಒತ್ತಾಯಕ್ಕೆ ಬಿದ್ದು ಅವರು ತೋರಿಸಿದ ಹುಡುಗನ ಜೊತೆ ಸಿಂಪಲ್ಲಾಗ್ ಮೊನ್ನೆ ದಿನ ಎಂಗೇಜ್ಮೆಂಟ್ ಮಾಡ್ಕೊಂಡೆ’ ಎಂದು ಸಮಜಾಯಿಷಿ ಬೇರೆ ನೀಡಿದ್ದಳು. ಅದೇ ರಾತ್ರಿ ಅವಳಿಗೆ ಬುದ್ಧಿ ನೀಡಿದ ದೇವರಿಗೂ, ಅವಳಿಗೂ ಬೇಕಾಬಿಟ್ಟಿ ಬೈದು ಅವಳನ್ನು ಅಲ್ಲೇ ಬಿಟ್ಟು ನಾನು ಭಾರವಾದ ಹೆಜ್ಜೆಗಳಿಂದ ಕೆಎಸ್ಆರ್ ಟಿಸಿ ಬಸ್ಸೇರಿ ಮನೆ ತಲುಪಿದ್ದೆ. ಪ್ರತಿ ಹೆಜ್ಜೆಯಲ್ಲೂ ಅವಳು ಹೇಳಿದ ಒಂದೊಂದು ಮಾತುಗಳು ನನ್ನ ಮನದ ಮೂಲೆ ಮೂಲೆಯಲ್ಲೂ ಪ್ರತಿಧ್ವನಿಸುತ್ತಿದ್ದವು. ಕೋಪದಲ್ಲಿ ಮನೆಗೆ ಹೋಗಿ ಕೋಣೆ ಬಾಗಿಲು ಹಾಕಿ ಜೋರಾಗಿ ‘ಪರಿ you are bitch’ ಎಂದು ಬೊಬ್ಬೆ ಹೊಡೆದು ನನ್ನ ಪಾಕೆಟ್ ನಲ್ಲಿದ್ದ ಅವಳ ಪಾಸ್ಪೋರ್ಟ್ ಸೈಜ್ ಭಾವಚಿತ್ರಕ್ಕೆ ಉಗುಳಿಬಿಟ್ಟಿದ್ದೆ. ಸ್ವಲ್ಪ ಹೊತ್ತಿನ ಬಳಿಕ ಅವಳು ಹೇಳಿದ ‘ನಾನು ಕೈ ಕೊಟ್ರೆ ಬೇಸರಿಸ್ಬೇಡ, ನನಗೆ ಬಂಧಿಯಾಗೋಕೆ ಇಷ್ಟವಿಲ್ಲ. Just chill’’ ಎಂಬಂತಹ ಮಾತುಗಳು ನನ್ನನ್ನು ಸಮಾಧಾನಿಸಿ ಮತ್ತೆ ನನ್ನ ಏಕಮುಖ ಪ್ರೀತಿಯನ್ನು ನನಗೇ ಗೊತ್ತಿಲ್ಲದೆ ಮುಂದುವರೆಸಿದ್ದೆ. ಅವಳ ನೆನಪುಗಳಿಂದ, ಅವಳ ದೇಹದ ವಾಸನೆಯಿಂದ ಹೊರಬರಲಾಗಿ ಮೂರು ತಿಂಗಳೊಳಗಾಗಿ ನಾನು ದಿವ್ಯಳನ್ನು ವರಿಸಿದೆ.

See also  ಪರಿಸರ ಸಂರಕ್ಷಣೆಗೆ ನೆಟ್ಟ ಗಿಡ ಕಾಪಾಡುವವರು ಬೇಕು

ಸುಮಾರು ಮೂರು ವರುಷದ ನಂತರ ಒಂದಿನ ನಾನು ಆಫೀಸಿನಲ್ಲಿರುವಾಗ ಅಪರಿಚಿತ ನಂಬರಿಂದ ಒಂದು ಕರೆ ಬಂತು. ಅಪರಿಚಿತ ಕರೆಗಳನ್ನು ನಾನು ಮೊದಲ ಪ್ರಯತ್ನದಲ್ಲಿ ಸ್ವೀಕರಿಸುವುದಿಲ್ಲ. ಎರಡನೆ ಸಲ ಅದೇ ನಂಬರಿಂದ ಕರೆ ಬರುವಾಗ ಸ್ವೀಕರಿಸಿ ಹಲೋ ಎಂದೆ. ಆ ಕಡೆಯಿಂದ ಹೆಣ್ಣು ದನಿ ‘ಹಲೋ ಅರು’ ಎಂದಾಗ ಮತ್ತೆ ಪರಿಣೀತಾ ರೂಪ ನನ್ನೆದುರು ಬಂದು ಮರೆಯಾದಂತೆ ಭಾಸವಾಯಿತು. ನನ್ನ ಜೀವನದಲ್ಲಿ ಅವಳು ಬಿಟ್ಟ ಒಂದೇ ಒಂದು ಆಸ್ತಿ ಎಂದರೆ ನನ್ನ ಅರುಣ್ ಹೆಸರಿನ ಮೊದಲೆರಡು ಅಕ್ಷರಗಳಿಂದ ಆಯ್ದ ‘ಅರು’ ನಾಮಪದ. ಆ ಹೆಸರನ್ನು ಮದುವೆ ನಂತರ ನನ್ನಾಕೆ ಸ್ವಂತ ಮಾಡಿಕೊಂಡಿದ್ದಳು. ಮೂರು ವರುಷದಿಂದ ನಾನು ಸಂಪೂರ್ಣವಾಗಿ ಮರೆತ ಆ ದನಿ,ಆ ಫೋನ್ ಸಂಖ್ಯೆ, ಆ ರೂಪ ಮತ್ತೆ ನನ್ನೊಳಗೆ ಜೀವ ಪಡೆಯಿತು. ಅವಳು ಮುಂದುವರೆಸುತ್ತಾ ‘ಅರು this is Pari, need your help, you should come to court tomorrow morning at 10,don’t miss’ ‘ ಎಂದು ಒಂದೇ ಉಸಿರಿನಲ್ಲಿ ಮುಗಿಸಿ ಫೋನ್ ಕಟ್ ಮಾಡಿದ್ದಳು. ನಾನು ಬೆವೆತು ಹೋದೆ. ಅವಳಿಗೆ ಮದ್ವೆಯಾಗಿ ಗಂಡ ಇರೋವಾಗ ಮತ್ತೆ ನನ್ನ ಸುದ್ದಿಗೆ ಯಾಕೆ ಬಂದ್ಳು? ನನ್ನ ಸಂಸಾರದಲ್ಲಿ ಹುಳಿ ಹಿಂಡಿದರೇ? ಎಂದು ಯೋಚಿಸತೊಡಗಿದೆ. ಆದರೂ ತಣಿಯದ ಕುತೂಹಲದಿಂದ ಮಾರನೇ ದಿನ ಬೆಳಗ್ಗೆ ಅವಳು ಹೇಳಿದ ಸಮಯಕ್ಕೆ ಸರಿಯಾಗಿ ಕೋರ್ಟಿಗೆ ಹಾಜರಾದೆ. ಕೋರ್ಟಿನಲ್ಲಿ ಮೊದಲ ಗತ್ತನ್ನೇ ಇಟ್ಟುಕೊಂಡಿದ್ದ ಅವಳು, ಜೊತೆಯಲ್ಲಿ ಮುದ್ದಾದ ಹೆಣ್ಣುಮಗು, ಸ್ಪುರದ್ರೂಪಿ ಚೆಲುವ ಗಂಡ, ಅತ್ತೆ-ಮಾವ ಮತ್ತು ತಂದೆ-ತಾಯಿ ಇಷ್ಟೇ ಜನ. ನನಗೆ ಅಲ್ಲಿ ಏನಾಗ್ತ ಇದೆ, ಏನು ವಿಷಯ, ಇವರ ನಡುವೆ ನಾನ್ಯಾಕೆ ಅನ್ನೋದು ಒಂದೂ ತಿಳಿಯಲಿಲ್ಲ. ನನ್ನ ಜೊತೆ ಅಷ್ಟೊಂದು ಪರಿಚಯವಿರುವ ಅವಳ ತಂದೆ-ತಾಯಿ ಒಂದು ಮಾತು ಆಡಲಿಲ್ಲ, ಒಂದು ನಗು ಕೂಡ ಎಸೆಯಲಿಲ್ಲ. ಕೋರ್ಟ್ ಅವಧಿ ಬಂದಾಗಲೇ ತಿಳಿದದ್ದು ‘ವಿಚ್ಛೇದನ’ ಸಂಗತಿಯೆಂದು. ಮತ್ತೆ ಅವಳ ಮೇಲೆ ನನಗೆ ಅಸಹ್ಯ ಹುಟ್ಟಿತು. ಎಲ್ಲದರಲ್ಲೂ ಅನುಕೂಲವಿರುವ ಗಂಡನ ಜೊತೆ ಬಾಳಲು ಆಗದ ಇವಳೆಂಥ ಹುಡುಗಿಯೆಂದುಕೊಂಡೆ. ಇವಳಾಗಿಯೇ ವಿಚ್ಛೇದನ ಕೋರಿದ್ದಳಂತೆ. ಯಾವುದೇ ಕಾರಣಗಳು ಇಲ್ಲದೆ. ಎಲ್ಲಾ ಇವಳ ಹುಚ್ಚಾಟ, ಕೋರ್ಟಿನಲ್ಲಿ ಅವಳದೇ ವಾದ ಮಂಡಿಸಿದ್ದಳು. ಪಾಪ ಆ ಬಡಪಾಯಿ ಗಂಡ ಇವಳಿಂದ ಅವಮಾನಿತನಾಗಿ ತನಗೂ ಆಕೆ ಬೇಡವೆಂದು ಹೇಳಿಬಿಟ್ಟ. ಎಲ್ಲರೂ ಕೋಪೋದ್ರಿಕ್ತರಾಗಿ ಅವಳನ್ನೇ ದಿಟ್ಟಿಸುತ್ತಿದ್ದರು. ಅವಳ ಈ ಹಲ್ಕ ಕೆಲಸಕ್ಕೆ ನನ್ನನ್ನ್ಯಾಕೆ ನನ್ನ ಸಮಯ ಹಾಳು ಮಾಡಿಬಿಟ್ಟಳು ಎಂದು ನನ್ನ ಕೋಪ ನೆತ್ತಿಗೇರಿತು. ಮಗುವನ್ನು ನೋಡಿಕೊಳ್ಳುವ ಪ್ರಶ್ನೆಗೂ ‘ನನ್ನ ಮಗುವನ್ನು ನಾನು ನೋಡಿಕೊಳ್ತೇನೆ ನನಗೆ ಯಾರ ಪರಿಹಾರನೂ ಬೇಕಿಲ್ಲ’ ಎಂದುಬಿಟ್ಟಳು. ಕೋರ್ಟ್ ಸಮಯ ಮುಗಿದ ಮೇಲೆ ಮಗುವನ್ನು ಎತ್ತಿಕೊಂಡು ಯಾರಿಗೂ ಕ್ಯಾರೆ ಅನ್ನದೇ ನಡೆದೇಬಿಟ್ಟಳು. ಹೊರಗಡೆ ಅವಳನ್ನು ತಡೆದು ನಿಲ್ಲಿಸಿ ‘ನನ್ನನ್ನ್ಯಾಕೆ ತಮಾಷೆಗೆ ಕರೆದ್ಯಾ?’ ಎಂದು ಕೇಳಿದ್ದಕ್ಕೆ ಸುಮ್ಮನೆ ಆತ್ಮೀಯವಾಗಿ ದಿಟ್ಟಿಸಿದಳು. ನಾನು ಮುಂದುವರೆಸಿ ‘ಅಲ್ಲ ಕಣೇ ಆ ಮುಗ್ಧ ಮಗುವಿಗೆ ತಂದೆ ಇಲ್ಲದಂತೆ ಮಾಡಲು ಹೇಗೇ ನಿನಗೆ ಮನಸು ಬಂತು’ ಎಂದು ಕೇಳಿದೆ. ಕೇವಲವಾಗಿ ನಕ್ಕು ‘ಇವಳಪ್ಪ ನೀನು ಅರು, ನಿನಗೆ ತೊಂದರೆ ಕೊಡದೆ ನಾನೆ ನೋಡಿಕೊಳ್ತೇನೆ don’t worry just chill’ ಎಂದು ನಡೆದೇಬಿಟ್ಟಳು. ನಾನು ಮೇಣದ ಮೂರ್ತಿಯಂತೆ ಗಟ್ಟಿಯಾದೆ. ದೇಹದಲ್ಲಿ ರಕ್ತ ಪರಿಚಲನೆ ನಿಂತಂತಾಯಿತು. ಪರಿ ಭುಜದ ಮೇಲೆ ತಲೆ ಇಟ್ಟ ಮಗು ನನ್ನನ್ನು ನೋಡುತ್ತಲೇ ಇದ್ದಳು, ಬಾಲೆಯ ಕಂಗಳು ನನ್ನನ್ನು ಪಪ್ಪ ಎಂದು ಕರೆದಂತಾಯಿತು. ಬುಲೆಟ್ ಏರಿ ಹೊರಟ ಪರಿಣೀತಾಳನ್ನು ತಡೆಯಲಾಗದೆ ಕಣ್ಣಿಂದ ಒಂದ್ಹನಿ ನೀರು ಜಿನುಗಿತು. ಕೋರ್ಟ್ ಕಟ್ಟಡ, ಗಿಡಮರಗಳು, ಓಡಾಡುತ್ತಿದ್ದ ಜನಗಳು, ಕರಿಕೋಟು ತೊಟ್ಟ ವಕೀಲರು, ಅಡ್ಡಾಡುತ್ತಿದ್ದ ಶ್ವಾನಗಳು ನನ್ನನ್ನೇ ದ್ರೋಹಿ ಎಂದು ಬೊಟ್ಟು ಮಾಡಿದಂತಾಯಿತು. ಕಿಸೆಯಲ್ಲಿಟ್ಟ ಫೋನ್ ರಿಂಗಾಗಿ ದಿವ್ಯ ಕಾಲಿಂಗ್ ಎಂದು ತೋರಿಸುತ್ತಿತ್ತು.

 
 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು