News Kannada
Monday, September 26 2022

ನುಡಿಚಿತ್ರ

ಮೈಸೂರು ಮೃಗಾಲಯದಲ್ಲಿ ಚಿಂಪಾಂಜಿಗಳ ವಿರಹ ವೇದನೆ - 1 min read

Photo Credit :

 ಮೈಸೂರು ಮೃಗಾಲಯದಲ್ಲಿ ಚಿಂಪಾಂಜಿಗಳ ವಿರಹ ವೇದನೆ

ಮೈಸೂರು ಮೃಗಾಲಯದ ಚಿಂಪಾಜಿಗಳು ವಿರಹ ವೇದನೆ ಅನುಭವಿಸುತ್ತಿದ್ದು ಮದವೇರಿರುವ ಚಿಂಪಾಂಜಿಗಳು ಸಂಗಾತಿಬೇಕೆಂದು ಕೊರಗುತ್ತ ಗಲಾಟೆ ಮಾಡುತ್ತಿದ್ದು ಊಟ ಬಿಟ್ಟಿವೆ.

ಮೈಸೂರಿನ ಚಾಮಾರಾಜ ಮೃಗಾಲಯವು ಪ್ರಪಂಚದಲ್ಲೆ ತನ್ನದೆ ಹೆಗ್ಗಳಿಕೆಯನ್ನ ಪಡೆದಿದ್ದು ಪ್ರತಿ ವರ್ಷ 25 ರಿಂದ 30 ಲಕ್ಷ ಪ್ರವಾಸಿಗರು ಮೃಗಾಲಯಕ್ಕೆ ಭೇಟಿ ನೀಡುತ್ತಾರೆ. ಈ ಮೃಗಾಲಯದ ಪ್ರಮುಖ ಆಕರ್ಷಣೆ ಯುವ ಚಿಂಪಾಂಜಿಗಳು. ಮೃಗಾಲಯದಲ್ಲಿ ಒಟ್ಟು ಐದು ಚಿಂಪಾಂಜಿಗಳಿದ್ದು ಅದರಲ್ಲಿ ನಾಲ್ಕು ಗಂಡು ಹಾಗೂ ಒಂದು ವಯಸ್ಸಾದ ಹೆಣ್ಣು ಚಿಂಪಾಂಜಿ ಇದೆ.

ಮೃಗಾಲಯದಲ್ಲಿ ಮೇಷನ್ (20), ಗುರು (24), ನಿಕೋಷಿ (20), ಕಿಮೋನಿ (11) ಎಂಬ ನಾಲ್ಕು ಯುವ ಚಿಂಪಾಂಜಿಗಳು ಇವೆ. ಇನ್ನೂ ಸರ್ಕಸ್ ನಿಂದ ರಕ್ಷಣೆ ಮಾಡಿ ತಂದ ಗಂಗಾ 55 ವರ್ಷ ವಯಸ್ಸಿನ ಹೆಣ್ಣು ಚಿಂಪಾಂಜಿ ಒಂದೇ ಇದೆ. ಈ ನಾಲ್ಕು ಗಂಡು ಚಿಂಪಾಂಜಿಗಳು ಮದವೇರಿದಾಗ ಗಂಗಾ ಜೊತೆ ರಾತ್ರಿ ವೇಳೆ ಬಿಡಲಾಗುತ್ತದೆ. ಆದರೆ ವಯಸ್ಸಾಗಿರವ ಗಂಗಾ, ಗಂಡು ಚಿಂಪಾಂಜಿಗಳನ್ನು ಹತ್ತಿರಕ್ಕೆ ಸೇರಿಸುತ್ತಿಲ್ಲ. ಇದು ಮೃಗಾಲಯದ ಸಿಬ್ಬಂದಿಗಳಿಗೆ ತಲೆ ನೋವಾಗಿದೆ.

ಕಳೆದ ವರ್ಷ ಅನುಮಾನಸ್ಪದವಾಗಿ ಸಾವಿಗೀಡಾದ ಮೆರೆಲ್ಲಾ ಹೆಣ್ಣು ಚಿಂಪಾಂಜಿ ಇದ್ದಿದ್ದರೆ ಈ ಗಂಡು ಚಿಂಪಾಂಜಿಗಳು ಸಂಗಾತಿಯ ಸಮಸ್ಯೆ ಇರುತ್ತಿರಲಿಲ್ಲ. ಆದರಿಂದ ತಕ್ಷಣ ಮೃಗಾಲಯದ ಅಧಿಕಾರಿಗಳು ಬೇರೆ ಕಡೆಯಿಂದ ಹೆಣ್ಣು ಚಿಂಪಾಂಜಿಯನ್ನು ತಕ್ಷಣ ತರಬೇಕು ಇಲ್ಲದಿದ್ದರೆ ಮದವೇರಿರುವ ಈ ನಾಲ್ಕು ಚಿಂಪಾಂಜಿಗಳನ್ನು ಸುಧಾರಿಸುವುದು ಕಷ್ಟ. ಅಲ್ಲದೆ ಮದವೇರಿದಾಗ ಸಂಗಾತಿ ಇಲ್ಲದಿರುವುದರಿಂದ ಸರಿಯಾಗಿ ಊಟ ತಿಂಡಿ ಮಾಡುವುದಿಲ್ಲ. ಜೊತೆಗೆ ಪ್ರವಾಸಿಗರಿಗೆ ಒಳ್ಳೆಯ ಮನರಂಜನೆಯು ಸಹ ನೀಡುವುದಿಲ್ಲ. ಎಲ್ಲಕಿಂತ ಮುಖ್ಯವಾಗಿ ದೀರ್ಘಕಾಲ ಸಂಗಾತಿ ಇಲ್ಲದಿದ್ದರೆ ಕೊರಗಿ ಬೇಗ ಸಾವನ್ನಪ್ಪುತ್ತದೆ ಎನ್ನುತ್ತಾರೆ ಚಿಂಪಾಂಜಿ ನೋಡಿಕೊಳ್ಳುವ ಸಿಬ್ಬಂದಿ.

See also  ಹಿಮಗಿರಿಯ ಹಿಮವದ್ಗೋಪಾಲಸ್ವಾಮಿ ಬೆಟ್ಟ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು