NewsKarnataka
Sunday, October 03 2021

ನುಡಿಚಿತ್ರ

ತುಳುನಾಡಿನಲ್ಲಿ ಆಂಜನೇಯ ನೇಮ…!

ತುಳುನಾಡಿನಲ್ಲಿ ಆಂಜನೇಯ ನೇಮ...!

ತುಳುನಾಡಿನ ಪರಂಪರೆಯಲ್ಲಿ ಭೂತಾರಾಧನೆಯಲ್ಲಿ ಕಲ್ಲುರ್ಟಿ, ಗುಳಿಗ, ಪಂಜುರ್ಲಿ,ಹುಲಿಭೂತ ಹೀಗೆ ಬಹು ಬಗೆಯ ದೈವವನ್ನು ಜನರ ಆರಾಸುತ್ತಾರೆ. ತರವಾಡು ನೇಮ, ಗ್ರಾಮ ದೈವದ ನೇಮ, ಹರಕೆ ರೂಪದಲ್ಲಿ ಹೀಗೆ ನೇಮ ನಡೆಯುವುದು ಇಲ್ಲಿನ ಪದ್ಧತಿ..ಆದರೆ ಇಲ್ಲೊಂದು ವಿಶೇಷವಾದ ನೇಮ ಇದೆ.

ಮೇಲಿನ ದೈವಗಳಿಗೆ ನೇಮ ಕೊಡುವ ಜತೆಗೆ ಹನಮಂತನಿಗೆ ಕೋಲ ನೀಡಿ ಅದನ್ನು ದೈವರಾಧನೆಯ ಮೂಲಕ ಪೂಜಿಸುವ ಆಚರಣೆ ಇದೆ.ಹನುಮಂತ ಭೂತ..ಆಂಜನೇಯ ಸ್ವಾಮಿಗೂ ಕೋಲ ಕೊಡುತ್ತಾರೂ..? ಎಂದು ಹುಬ್ಬೇರಿಸಬೇಡಿ..ಯಾಕೆಂದರೆ..ದಕ್ಷಿಣ ಭಾರತದಲ್ಲಿ ಎಲ್ಲೂ ಕಾಣಸಿಗದ ಈ ಅಪರೂಪದ ಆಚರಣೆ ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕೆಯ್ಯೂರು ಗ್ರಾಮದ ಇಳಂತಾಜೆ ಎಂಬಲ್ಲಿ ಹನುಮಂತನಿಗೆ ಕೋಲ ಕೊಡುವ ಪದ್ಧತಿ ಇದೆ.

ಹಿಂದೂ ಪುರಾಣದಲ್ಲಿ ಹನುಮಂತನಿಗೇ ವಿಶಿಷ್ಟ ಸ್ಥಾನವಿದೆ. ಆಂಜನೇಯ ಸ್ವಾಮಿಯನ್ನು ವಿಶೇಷವಾಗಿ ಕೃಷಿ, ಬೇಸಾಯಧಾರಿತ ಭೂಮಿಯ ಸಂರಕ್ಷಕನಾಗಿ ಪೂಜಿಸಲಾಗುತ್ತದೆ.ಇಲ್ಲಿ ನೇಮ ನೀಡುವ, ಕಟ್ಟುವವರು ಹಲವು ಸಂಪ್ರದಾಯವನ್ನು ಪಾಲಿಸಬೇಕು. ನೇಮ ಕಟ್ಟುವ ವ್ಯಕ್ತಿ 15 ದಿನಗಳ ಕಾಲ ವೃತಾಚರಣೆ ಮಾಡಬೇಕು. ನೇಮದ ಹಿಂದಿನ ದಿನ ಊರಿನ ದೇವಸ್ಥಾನದಲ್ಲಿ ಕಲಶ ಸ್ನಾನ ಮಾಡಿ, ಬಳಿಕ ದೈವದ ಗುಡಿಗೇ ಬಂದು ನಮಸ್ಕರಿಸಿ, ನೇಮ ಕೂಡುವ ಮನೆಯ ಹಿರಿಯರ ಪಾದಕ್ಕೆ ವಂದಿಸಿ, ಫಲಹಾರ ಸೇವಿಸಬೇಕು. ಬಳಿಕ ಸಂಜೆ ಗದ್ದೆಯ ಪಕ್ಕದ ಕಾಡಲ್ಲಿ ಕಲ್ಲಿನ ಮೇಲೆ ತೆಂಗಿನ ಹಸಿ ಗರಿಯಲ್ಲಿ ಮಾಡಿದ ತಟ್ಟಿಯಲ್ಲಿ ಮಲಗಬೇಕು.ಈ ಅಂಜನೇಯ ಸ್ವಾಮಿಯ ನೇಮ ಕಟ್ಟುವ ಪಾತ್ರಧಾರಿ ಯಾರೋಂದಿಗೂ ಮಾತನಾಡಬಾರದು. ನೇಮ ಮುಗಿದ ಬಳಿಕವೆ ಮಾತುಕತೆ. ಕಾಡಿನಲ್ಲಿಯೇ ವೇಷ ಹಾಕಬೇಕು.

ನೇಮದ ವೇಳೆ ಯಾವುದೇ ಅಬ್ಬರ ಇರುವುದಿಲ್ಲ. ನೇಮ ಕಟ್ಟಿದ ವ್ಯಕ್ತಿ ಹನುಮಂತನಂತೆ ನಿಧಾನವಾಗಿ ಹಾರುತ್ತಾ ಬಂದು ನಂತರ ಕುಣಿದು ಕೊನೆಯಲ್ಲಿ ಒಂದು ಮರವನ್ನೇರಿ, ಗೆಲ್ಲುಗಳನ್ನು ಗದ್ದೆಗೇ ಹಾಕುತ್ತಾರೆ. ಇದರ ಹಿನ್ನೆಲೆಯೆಂದರೆ ಆಂಜನೇಯ ಸ್ವಾಮಿ ಎಷ್ಟು ಎಲೆಗಳನ್ನು ಗದ್ದೆಗೇ ಹಾಕುತ್ತದೆಯೋ, ಅಷ್ಟು ಪ್ರಮಾಣದ ಭತ್ತ ಮುಂದಿನ ವರ್ಷಕ್ಕೆ ಸಿಗುತ್ತದೆ ಎಂಬ ನಂಬಿಕೆಯಿದೆ. ಮರದಿಂದ ಇಳಿದು ಬಂದ ಬಳಿಕ ಹರಕೆ ರೂಪದಲ್ಲಿ ಬಂದವುಗಳನ್ನು ಸ್ವೀಕರಿಸಿ, ಕುಣಿತದಲ್ಲಿ ಸಾಗಲಾಗುತ್ತದೆ. ಭಕ್ತ ಸಮುದಾಯದ ಕಡೇ ಕೈಎತ್ತಿ ಆರ್ಶೀವದಿಸಿದ ಮೇಲೆ ನೇಮ ಕೊನೆಯಾಗುತ್ತದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

Leave a Reply

Your email address will not be published. Required fields are marked *

Subscribe to our Brand New YouTube Channel

Subscribe Newsletter

Get latest news karnataka updates on your email.

error: Content is protected !!