ಕಾಫೀ ನಾಡು ಚಿಕ್ಕಮಗಳೂರಿನಲ್ಲಿ ತುಂಬಾ ಅಪರೂಪದ ಮತ್ತು ಅದ್ಬುತವಾದ ಪಶು ವೈದ್ಯರಿದ್ದಾರೆ. ಇವರು ತಮ್ಮ ಈಡೀ ಜೀವನವನೇ ಪಶುಗಳ ಸೇವೆಗಾಗಿ, ಭಾರತೀಯ ಗೋವುಗಳ ಉಳಿವಿಗಾಗಿ ಮೀಸಲಿಟ್ಟಿರುವ ಮತ್ತು ನೂರಾರು ವರ್ಷಗಳ ಪಶುಗಳ ಪಳೆಯುಳಿಕೆ ವಸ್ತುಗಳ ಸಂಗ್ರಹಣೆ ಮಾಡಿದ್ದಾರೆ.
ಕಾಫೀನಾಡು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೇರೆ ತಾಲೂಕಿನ ದಾರದಹಳ್ಳಿಯಲ್ಲಿ ತುಂಬಾ ಅಪರೂಪದ ಪಶು ವೈದ್ಯರಿದ್ದಾರೆ, ಅವರು ಬೇರೆ ಯಾರು ಅಲ್ಲ ಕೃಷ್ಣರಾಜು, ಸುಮಾರು ಮೂರು ನಾಲ್ಕು ದಶಕಗಳಿಂದ ಪಶುಗಳ ಸಂರಕ್ಷಣೆ ಮತ್ತು ಅವುಗಳಿಗೆ ಉಳಿವಿಗಾಗಿ ಹೋರಾಟ ಮಾಡುತ್ತಿದ್ದಾರೆ. ವೃತ್ತಿಯಲ್ಲಿ ಇವರು ಪಶು ವೈದ್ಯರಾಗಿದ್ದು ಇಲ್ಲಿವರೆಗೂ ಲಕ್ಷಾಂತರ ಗೋವುಗಳಿಗೆ ಚಿಕಿತ್ಸೆಯನ್ನು ನೀಡಿದ್ದಾರೆ, ಇವರ ಆಸ್ವತ್ರೆಯ ಆವರಣ ಗೋ ವಿಶ್ವ ವಿದ್ಯಾಲಯದ ರೀತಿಯಲ್ಲಿ ಮಾರ್ಪಾಡು ಮಾಡಿದ್ದಾರೆ. ಸಗಣಿಯಿಂದಾ ಗೋಬರ್ ಗ್ಯಾಸ್ ,ಗಂಜಲದಿಂದಾ ಗಡಿಯಾರ, ವಿವಿಧ ಜೌಷಧಿಗಳು, ಬರಣಿಯಿಂದ ಸೊಳ್ಳೆ ಬತ್ತಿ, ನೂರಾರು ವರ್ಷದ ಗೋವುಗಳ ಪಳೆಯುಳಿಕ ವಸ್ತುಗಳ ಸಂಗ್ರಹಣೆ, ವಿವಿಧ ಮಾತ್ರೆಗಳು, ಸಿದ್ದ ಜೌಷಧಗಳು, ಗೋವುಗಳ ಉಡುಪುಗಳು, ಗೋವಿನ ಶೃಂಗಾರದ ವಸ್ತುಗಳು, ಈ ರೀತಿಯಾಗಿ ನಾನಾ ರೀತಿಯಾ ವಸ್ತುಗಳನ್ನು ಇಲ್ಲಿ ಸಂಗ್ರಹಣೆ ಮಾಡಿ ಅದರ ಪರಿಚಯವನ್ನು ಎಲ್ಲರಿಗೂ ಮಾಡಿಸುತ್ತಿದ್ದಾರೆ.
ಕೃಷ್ಣರಾಜು ಪಶುವೈದ್ಯರಾಗಿರೋದರಿಂದ ಈ ಭಾಗದಲ್ಲಿ ಯಾವುದೇ ಗೋವುಗಳಿಗೆ ಆರೋಗ್ಯ ಕೆಟ್ಟರೇ ಇವರೇ ಹೋಗಿ ನೋಡೋದು. ಎಷ್ಟೇ ದೂರವಿದ್ದರೂ ಕೂಡ ಇವರು ಹೋಗಿ ಚಿಕಿತ್ಸೆ ನೀಡುತ್ತಾರೆ, ಹೀಗಾಗಿ ಈ ಭಾಗದಲ್ಲಿಯೇ ಇವರು ಮಾದರಿ ಪಶು ವೈದ್ಯರಾಗಿ ಹೊರಹೊಮ್ಮಿದ್ದಾರೆ. ಈಗಾಗಲೇ ರಾಜ್ಯ,ರಾಷ್ಟ್ರ, ವಿದೇಶ ಗೋ ಸಮ್ಮೇಳನಾದಲ್ಲಿ ಭಾಗವಹಿಸಿ ಸಾಕಷ್ಟು ಪ್ರಶಸ್ತಿ ಪುರಸ್ಕಾರ ಪಡೆದಿದ್ದಾರೆ. ಅಲ್ಲದೇ ದೇಶಿಯ ಗೋವುಗಳನ್ನು ಉಳಿಸುವುದು ಮತ್ತು ಬೆಳೆಸುವುದು ಇವರು ಪ್ರಮುಖ ಉದ್ದೇಶ ಮತ್ತು ಧ್ಯೇಯವಾಗಿದೆ. ಒಟ್ಟಾರೆಯಾಗಿ ಕಾಫೀ ನಾಡು ಜಿಲ್ಲೆಗೇ ಕೃಷ್ಣರಾಜು ಮಾದರಿ ವೈದ್ಯರಾಗಿದ್ದು ದಿನದ 24 ಗಂಟೆಯೂ ನಿರಂತರ ಸೇವೆಯನ್ನು ನೀಡುತ್ತಿದ್ದು ಈಡೀ ಜೀವನವನ್ನೇ ಗೋವುಗಳ ಸಂರಕ್ಷಣೆ ಮತ್ತು ಉಳಿವಿಗಾಗಿ ಹೋರಾಟ ಮಾಡುತ್ತಿದ್ದು, ಪಶುಗಳ ಬಗ್ಗೆ ವಿವಿಧ ಅವಿಷ್ಕಾರಗಳನ್ನು ಮಾಡುತ್ತಿದ್ದಾರೆ.