News Kannada
Saturday, October 01 2022

ನುಡಿಚಿತ್ರ

ಕಾವೇರಿ ಕಣಿವೆಯಲ್ಲಿ ಮಳೆ ಕೊರತೆ - 1 min read

Photo Credit :

ಕಾವೇರಿ ಕಣಿವೆಯಲ್ಲಿ ಮಳೆ ಕೊರತೆ

ಮೈಸೂರು: ಕಾವೇರಿ ಕಣಿವೆಯಲ್ಲಿ ಮಳೆ ಕಡಿಮೆಯಾಗಿದೆ. ಈ ಬಾರಿ ಕೊಡಗಿನಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಲೇ ಪರಿಣಾಮ ಕಾವೇರಿ ಕಣಿವೆಯಲ್ಲಿ ನೀರು ಹರಿಯಲಿಲ್ಲ. ಹೀಗಾಗಿ ಕೆಆರ್ ಎಸ್ ಜಲಾಶಯ ತುಂಬಲೇ ಇಲ್ಲ. 100 ಅಡಿ ತಲುಪಿದ್ದ ನೀರು ಇದೀಗ ನಾಲೆ ಮತ್ತು ತಮಿಳುನಾಡಿಗೆ ನೀರು ಹರಿಸಿದ್ದರಿಂದ 95 ಅಡಿಗೆ ಬಂದು ನಿಂತಿದೆ. ಪರಿಣಾಮ ಆತಂಕ ಈಗಿನಿಂದಲೇ ಆರಂಭವಾಗಿದೆ.

ಕೊಡಗಿನಲ್ಲಿ ಹೆಚ್ಚಿನವರು ಮಳೆಯ ನೀರನ್ನೇ ನಂಬಿ ಭತ್ತ ಬೆಳೆಯುತ್ತಿದ್ದು. ಮಳೆ ಹೆಚ್ಚು ಸುರಿದು ಭೂಮಿ ಅಡಿಯಿಂದ ಹೊರ ಬರುವ ಅಂತರ್ಜಲ ತೊರೆಯಾಗಿ, ಹೊಳೆಯಾಗಿ ಹರಿಯುತ್ತದೆ. ಅದನ್ನೇ ಬಳಸಿಕೊಂಡು ಭತ್ತ ಬೆಳೆಯುವುದು ಹಿಂದಿನಿಂದಲೂ ನಡೆದು ಬಂದಿದೆ. ಆದರೆ ಈ ಬಾರಿ ಉತ್ತಮ ಮಳೆಯಾಗದ ಕಾರಣ ತೊರೆಗಳಲ್ಲಿ ನೀರು ಕಡಿಮೆಯಾಗಿದೆ. ಅದನ್ನು ನಂಬಿ ಭತ್ತದ ಕೃಷಿ ಸಾಧ್ಯವಿಲ್ಲದಾಗಿದೆ. ನಾಟಿಕಾರ್ಯ ಮಾಡಿದರೂ ಬೆಳೆಗೆ ಕೊನೆಯವರೆಗೆ ನೀರು ಸಿಗುತ್ತಾ ಎಂಬ ಸಂಶಯ ಕೃಷಿಕರದ್ದಾಗಿದೆ.

ಕಳೆದ ವರ್ಷ ಮಳೆ ಕಡಿಮೆಯಾಗಿದ್ದರಿಂದ ಕಾವೇರಿ ಕಣಿವೆಯ ಪ್ರಮುಖ ಜಲಾಶಯ ಕೆಆರ್ ಎಸ್ ಭರ್ತಿಯಾಗಲಿಲ್ಲ. ಈ ಬಾರಿ ಕಳೆದ ವರ್ಷಕ್ಕಿಂತಲೂ ಕಡಿಮೆ ಮಳೆ ಸುರಿದಿರುವುದು ಇದುವರೆಗಿನ ಮಳೆಯ ಪ್ರಮಾಣವನ್ನು ಗಮನಿಸಿದರೆ ತಿಳಿದು ಬರುವ ಸತ್ಯ. ಕನಿಷ್ಠ ಮೂರ್ನಾಲ್ಕು ಬಾರಿಯಾದರೂ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗುವಷ್ಟರ ಮಟ್ಟಿಗೆ ಮಳೆ ಸುರಿಯಬೇಕಿತ್ತು. ಆದರೆ ಈ ವರ್ಷ ಒಮ್ಮೆ ಮಾತ್ರ ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿದ್ದನ್ನು ಹೊರತು ಪಡಿಸಿದರೆ ಅಂಥ ಭಾರೀ ಮಳೆ ಸುರಿದಿಲ್ಲ.

ಜಿಲ್ಲೆಯಲ್ಲಿ ಸುರಿದ ಮಳೆಯ ಬಗ್ಗೆ ಗಮನಿಸಿದರೆ ಜನವರಿಯಿಂದ ಇಲ್ಲಿಯವರೆಗೆ ಸುರಿದ ಮಳೆಯ ಪ್ರಮಾನ ಕಳೆದ ವರ್ಷಕ್ಕಿಂತ ಸುಮಾರು 300ಮಿ.ಮೀ ಕಡಿಮೆಯಿದೆ. ಕಳೆದ ವರ್ಷ ಇದೇ ವೇಳೆಗೆ ಸುಮಾರು 1836.55  ಮೀಮೀ ಮಳೆ ಸುರಿದಿತ್ತು. ಜಿಲ್ಲೆಯಲ್ಲಿ ಅತಿ ಹೆಚ್ಚು ಮಳೆ ಸುರಿಯುವ ತಲಕಾವೇರಿ ಮತ್ತು ಭಾಗಮಂಡಲದಲ್ಲಿ ಸಮರ್ಪಕವಾಗಿ ಮಳೆಯಾಗುತ್ತಿಲ್ಲ. ಇದರಿಂದಾಗಿ ಕಾವೇರಿ ನದಿಯಲ್ಲಿ ನೀರಿನ ಪ್ರಮಾಣ ತಗ್ಗುತ್ತಿದೆ.

ಮೊದಲು ದಿನಕ್ಕೆ ಕನಿಷ್ಠ ಏನಿಲ್ಲ ಎಂದರೂ ದಿನಕ್ಕೆ 50 ಮಿ.ಮೀ. ಮಳೆ ಸುರಿಯುತ್ತಿತ್ತು. ಆದರೆ ಈ ವರ್ಷ ಕೇವಲ 10 ಮಿ.ಮೀ ತಲುಪುತ್ತಿಲ್ಲ. ಮುಂಗಾರು ಮಳೆಯ ಅವಧಿ ಕೂಡ ಕಡಿಮೆಯಾಗುತ್ತಾ ಬರುತ್ತಿದೆ. ಇರುವ ದಿನಗಳಲ್ಲಿ ಮಳೆ ಸುರಿಯುತ್ತದೆಯಾ? ಅದರಿಂದ ಜಲಾಶಯ ತುಂಬುವಷ್ಟು ನೀರನ್ನು ನಿರೀಕ್ಷೆ ಮಾಡಲು ಸಾಧ್ಯನಾ ಎಂಬ ಲೆಕ್ಕಾಚಾರಗಳನ್ನು ರೈತರು ಹಾಕುತ್ತಿದ್ದಾರೆ.

ಜಿಲ್ಲೆಯ ಮೂರು ತಾಲೂಕಿನ ಮಳೆಯ ಪ್ರಮಾಣವನ್ನು ಗಮನಿಸಿದರೆ ಜನವರಿಯಿಂದ ಇಲ್ಲಿಯವರೆಗೆ ಮಡಿಕೇರಿ ತಾಲೂಕಿನಲ್ಲಿ  2315.92 ಮಿ.ಮೀ ಮಳೆ ಸುರಿದಿದ್ದರೆ, ಕಳೆದ ವರ್ಷ ಇದೇ ಅವಧಿಯಲ್ಲಿ 2779.49 ಮಿ.ಮೀ. ಮಳೆಯಾಗಿತ್ತು.  ವಿರಾಜಪೇಟೆ ತಾಲೂಕಿನಲ್ಲಿ  1073.05  ಮಿ.ಮೀ. ಮಳೆಯಾಗಿದೆ.  ಕಳೆದ ವರ್ಷ ಇದೇ ವೇಳೆ 1440.04 ಮಿ.ಮೀ. ಮಳೆಯಾಗಿತ್ತು. ಸೋಮವಾರಪೇಟೆ ತಾಲೂಕಿನಲ್ಲಿ  1193.91 ಮಿ.ಮೀ.  ಕಳೆದ ವರ್ಷ 1290.15 ಮಿ.ಮೀ. ಮಳೆ ಸುರಿದಿತ್ತು. ಇದೆಲ್ಲವನ್ನು ಗಮನಿಸಿದರೆ ಮುಂದಿನ ದಿನಗಳಲ್ಲಿ ಉತ್ತಮ ಮಳೆ ಸುರಿದರೆ ಮಾತ್ರ ಜನ ನೆಮ್ಮದಿಯುಸಿರು ಬಿಡಲು ಸಾಧ್ಯ. ಇಲ್ಲದಿದ್ದರೆ ನೀರಿನ ಸಮಸ್ಯೆ ಕಾಡುವುದಂತು ಖಚಿತ. ಕಾವೇರಿ ಕಣಿವೆಯಲ್ಲಿ ಪ್ರಪ್ರಥಮವಾಗಿ ತುಂಬುವ ಜಲಾಶಯ ಕಬಿನಿ ಈ ಬಾರಿ ತುಂಬಿಲ್ಲ. ಹೇಮಾವತಿ ಜಲಾಶಯವೂ ಭತರ್ಿಯಾಗಿಲ್ಲ. ಇರುವ ಜಲಾಶಯಗಳ ಪೈಕಿ ಹಾರಂಗಿ ಜಲಾಶಯ ಮಾತ್ರ ತುಂಬಿದೆ ಎನ್ನುವುದು ಸಮಾಧಾನದ ಸಂಗತಿ.

See also  ಮೈಸೂರಲ್ಲಿ ಪ್ರವಾಸಿಗರ ಸೆಳೆಯುವ ವ್ಯಾಕ್ಸ್ ಮ್ಯೂಸಿಯಂ

ಗರಿಷ್ಠ ಮಟ್ಟ 2,859 ಅಡಿ ಹೊಂದಿರುವ ಜಲಾಶಯದಲ್ಲಿ 2856.03 ಅಡಿಯಷ್ಟು ನೀರಿದೆ. ಒಳ ಹರಿವು 1542ಕ್ಯೂಸೆಕ್ ಇದ್ದು ನದಿಗೆ 691, ನಾಲೆಗೆ 1900 ಕ್ಯೂಸೆಕ್ ನೀರನ್ನು ಬಿಡಲಾಗುತ್ತಿದೆ.
 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು