News Kannada
Sunday, October 02 2022

ನುಡಿಚಿತ್ರ

ಮೈಸೂರು ಅರಮನೆಗೆ ಕಳೆ ಕಟ್ಟಿದ ದ್ವಾರಗಳು - 1 min read

Photo Credit :

ಮೈಸೂರು ಅರಮನೆಗೆ ಕಳೆ ಕಟ್ಟಿದ ದ್ವಾರಗಳು

ಮೈಸೂರು: ಮೈಸೂರು ಅರಮನೆಯೇ ವಿಶಿಷ್ಟ ಮತ್ತು ವಿಭಿನ್ನ. ಹೀಗಾಗಿಯೇ ಇದು ಜಗದ್ವಿಖ್ಯಾತವಾಗಿ ಗಮನಸೆಳೆಯುತ್ತಿದೆ. ಇಲ್ಲಿರುವ ಪ್ರತಿಯೊಂದು ವಸ್ತು, ಕಟ್ಟಡ, ಆಯುಧ, ಸಿಂಹಾಸನ ಎಲ್ಲದಕ್ಕೂ ತನ್ನದೇ ಆದ ಮಹತ್ವ ಮತ್ತು ಇತಿಹಾಸ ಇರುವುದನ್ನು ನಾವು ಕಾಣಬಹುದಾಗಿದೆ.

ಈ ಪೈಕಿ ಮೈಸೂರು ಅರಮನೆಯ ಹೆಬ್ಬಾಗಿಲು ಆನೆ ಬಾಗಿಲು ನಿಜಕ್ಕೂ ಅದ್ಭುತ ದಸರಾದ ಎಲ್ಲ ಧಾರ್ಮಿಕ ಕಾರ್ಯಗಳು ಇಲ್ಲಿಯೇ ನಡೆಯುತ್ತದೆ. ಇಲ್ಲಿಯೇ ಗಜಪಡೆಗಳನ್ನು ಸ್ವಾಗತಿಸಲಾಗುತ್ತದೆ. ದಸರಾ ಜಂಬೂಸವಾರಿಯ ರೂವಾರಿ ಅರ್ಜುನನಿಗೆ ಇಲ್ಲಿಯೇ ಅಂಬಾರಿ ಕಟ್ಟಲಾಗುತ್ತದೆ. ಆನೆಬಾಗಿಲು ಅರಮನೆಯ ಪೂರ್ವ ದಿಕ್ಕಿನಲ್ಲಿದೆ. ಇಲ್ಲಿ ಕಂಚಿನ ಬಾಗಿಲಿದೆ. ಇಲ್ಲಿನ ಮತ್ತೊಂದು ವಿಶೇಷ ಎಂದರೆ ಎರಡು ಕಂಬಗಳಲ್ಲಿ ನಿಜವಾದ ಆನೆಗಳ ತಲೆಯನ್ನೇ ಅಲಂಕಾರಕ್ಕಾಗಿ ಅಳವಡಿಸಿರುವುದು. ಇವುಗಳನ್ನು ಜಯ ಚಾಮರಾಜ ಒಡೆಯರ್ ಸೈನ್ಯದೊಡನೆ ಬೇಟೆಗೆ ತೆರಳಿ ಅಲ್ಲಿ ಬೇಟೆಯಾಡಿ ತಂದಿದ್ದು ಎಂದು ಹೇಳಲಾಗಿದೆ.

ಇನ್ನು ಅರಮನೆಗೆ ಇರುವ ಐದು ದ್ವಾರಗಳು ಕೂಡ ವಿಶೇಷತೆಯನ್ನು ಹೊಂದಿವೆ. ಇವುಗಳ ಪೈಕಿ ಅರಮನೆಯ ಎದುರಿನ ಪೂರ್ವಕ್ಕೆ ದೊಡ್ಡ ಕೆರೆ ಮೈದಾನ ಕಡೆಗಿನ ಜಯ ಮಾರ್ತಾಂಡ ದ್ವಾರ ಪ್ರಮುಖವಾಗಿದೆ. ದ್ವಾರದ ಎರಡು ಬದಿ ಹೂ ತೋಟವಿದೆ ಬುರುಜುಗಳಿದ್ದು ಗಮನ ಸೆಳೆಯುತ್ತದೆ. ಅರಮನೆಯ ಉತ್ತರಕ್ಕೆ ಬಲರಾಮ ದ್ವಾರವಿದೆ. ಇದರ ಮೂಲಕವೇ ಜಂಬೂಸವಾರಿ ಸಾಗುತ್ತದೆ. ದ್ವಾರದ ಬದಿಯಲ್ಲಿ  ಕೋಟೆ ಆಂಜನೇಯ ಸ್ವಾಮಿ, ಗಣಪತಿ ದೇವಾಲಯವಿದೆ. ದ್ವಾರಕ್ಕೆ ಸೇರಿಕೊಂಡಂತೆ ಅರಮನೆ ಆವರಣದ ಒಳಭಾಗದಲ್ಲಿ ದೊಡ್ಡ ಕನ್ನಡಿಯನ್ನಿಡಲಾಗಿದ್ದು ಇದರಲ್ಲಿ ಅರಮನೆಯ ಭವ್ಯದೃಶ್ಯವನ್ನು ವೀಕ್ಷಿಸಬಹುದಾಗಿದೆ.

ಅರಮನೆ ದಕ್ಷಿಣ ಭಾಗದಲ್ಲಿ ವರಹಾ ದ್ವಾರವಿದ್ದು,  ಈ ದ್ವಾರದ ಮೂಲಕವೇ ಪ್ರವಾಸಿಗರಿಗೆ ಅರಮನೆಗೆ ಪ್ರವೇಶ ನೀಡಲಾಗುತ್ತದೆ. ಕರಿಕಲ್ ತೊಟ್ಟಿ ದ್ವಾರವು ನಗರ ಪಾಲಿಕೆ ಕಡೆಗೆ ಅರ್ಥಾತ್ ಸಯ್ಯಾಜಿರಾವ್ ರಸ್ತೆ ಕಡೆಗೆ ಇದೆ. ಈ ದ್ವಾರದ ಮೂಲಕ ಸಾರ್ವಜನಿಕರಿಗೆ ಪ್ರವೇಶ ಇಲ್ಲ.ಬ್ರಹ್ಮಪುರಿ ದ್ವಾರವು ನಗರ ಬಸ್ ನಿಲ್ದಾಣದ ಬಳಿ ಇದೆ ಈ ದ್ವಾರದ ಮೂಲಕ ಎಲ್ಲ ದಿನಗಳಲ್ಲಿ ಪ್ರವೇಶ ಇಲ್ಲ. ದಸರಾ ಸಂದರ್ಭ ದ್ವಾರ ತೆಗೆಯಲಾಗುತ್ತದೆ.

ಅರಮನೆ ಎಷ್ಟು ಸುಂದರವೋ ಅಷ್ಟೇ ವಿಶೇಷತೆಯನ್ನು ಕೂಡ ಹೊಂದಿದೆ. ಹೀಗಾಗಿಯೇ ವಿಶ್ವ ವಿಖ್ಯಾತವಾಗಿ ಗಮನ ಸೆಳೆಯುತ್ತದೆ. ದಸರಾ ಸಂದರ್ಭದಲ್ಲಿ ಅರಮನೆ ವಿದ್ಯುತ್ ದೀಪಗಳಿಂದ ಮಿನುಗುತ್ತಿದ್ದರೆ ಇಂದ್ರನ ಅಮರಾವತಿಯೇ ಧರೆಗಿಳಿದು ಬಂದಿದೆ ಏನೋ ಎಂಬ ಭಾವ ಮೂಡುತ್ತದೆ.

See also  ಅಂಬಿಗರಹಳ್ಳಿಯಲ್ಲಿ ಕಾವೇರಿ ಸಂಗಮ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು