ಬಂಟ್ವಾಳ: ತಾಲ್ಲೂಕಿನ ರಾಯಿ ಗ್ರಾಮದ ಕಾರಂಬಡೆ ಎಂಬಲ್ಲಿ ಪ್ರಗತಿಪರ ಕೃಷಿಕ ಕೃಷ್ಣಪ್ಪ ಪೂಜಾರಿ ಎಂಬವರ ಮನೆಯಲ್ಲಿ ಬೆಳೆದ ಬಸಳೆ ಬಳ್ಳಿಯೊಂದು ಚಪ್ಪರ ಮೇಲೇರುತ್ತಿದ್ದಂತೆಯೇ ಒಂದಕ್ಕೊಂದು ಅಂಟಿಕೊಂಡಂತೆ ವಿಸ್ತಾರವಾಗಿ ಬೆಳೆದು ನಾಗರ ಹಾವಿನ ರೂಪ ಪಡೆದು (ನಾಗ ಬಸಳೆ) ಜನಾಕರ್ಷಣೆಗೆ ಕಾರಣವಾಗಿದೆ.
ಇದನ್ನು ರಾಯಿ ಅಂಚೆ ಪೇದೆ ರಮೇಶ ಪೂಜಾರಿ ಅವರು ತನ್ನ ಮೊಬೈಲ್ ಕ್ಯಾಮೆರಾದಲ್ಲಿ ಕ್ಲಿಕ್ಕಿಸಿ ಗಮನ ಸೆಳೆದರು.