News Kannada
Wednesday, February 08 2023

ನುಡಿಚಿತ್ರ

ಹನಿಮಳೆಯ ನಡುವೆ ಗಮನ ಸೆಳೆದ ‘ಪುತ್ತರಿ ಅರಮನೆ ಕೋಲ್’

Photo Credit :

ಹನಿಮಳೆಯ ನಡುವೆ ಗಮನ ಸೆಳೆದ 'ಪುತ್ತರಿ ಅರಮನೆ ಕೋಲ್'

ಧಾನ್ಯ ಲಕ್ಷ್ಮಿಯನ್ನು ಮನೆಗೆ ತುಂಬಿಸಿಕೊಳ್ಳುವ ಹುತ್ತರಿಯ ಸಂಭ್ರಮದ ಹಿನ್ನೆಲೆಯಲ್ಲೆ ದೇವರನ್ನು ಸ್ಮರಿಸಿ ಕೊಂಡಾಡುವ ‘ಹುತ್ತರಿ ಕೋಲಾಟ್’ ಐತಿಹಾಸಿಕ ಹಿನ್ನೆಲೆಯ ಕೋಟೆ ಆವರಣದಲ್ಲಿ ಮೇಳೈಸುವ ಮೂಲಕ ಅಂದಿನ ಗತ ವೈಭವವನ್ನು ನೆನಪಿಸಿತು.

ಹಾಲೇರಿ ರಾಜವಂಶಸ್ಥ ಲಿಂಗರಾಜೇಂದ್ರನ ಆಡಳಿತದ ಅವಧಿಯಲ್ಲಿ ಕೋಟೆ ಆವರಣದಲ್ಲಿ ಹುತ್ತರಿಯ ಮರುದಿನ ನಾಡಿನ ಜನತೆಯ ಸಮ್ಮುಖದಲ್ಲಿ ನಡೆಯುತ್ತಿದ್ದ ಹುತ್ತರಿ ಕೋಲಾಟ್ ಕಾಲ ಕ್ರಮೇಣ ಸ್ಥಗಿತಗೊಂಡಿತ್ತು. ಆದರೆ, ಕಳೆದ ಕೆಲವು ವರ್ಷಗಳಿಂದ ಶ್ರೀ ಓಂಕಾರೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಆಡಳಿತ ಮಂಡಳಿಯ ಮುತುವರ್ಜಿಯಿಂದ ಮತ್ತೆ ಆರಂಭಗೊಂಡು ಈ ನೆಲದ ಸಂಪದ್ಭರಿತ ಜಾನಪದ ಸಂಸ್ಕೃತಿಯ ಬೆಳವಣಿಗೆಗೆ ಇಂಬು ನೀಡಿತು.

ಮಡಿಕೇರಿಯ ಶ್ರೀಓಂಕಾರೇಶ್ವರ ದೇವಾಲಯ ವ್ಯವಸ್ಥಾಪನಾ  ಸಮಿತಿಯೊಂದಿಗೆ ಈ ಬಾರಿ ಧಾರ್ಮಿಕ ದತ್ತಿ ಇಲಾಖೆ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಮತ್ತು ಅರೆಭಾಷಾ ಸಾಹಿತ್ಯ ಅಕಾಡೆಮಿಗಳು ಕೈಜೋಡಿಸುವುದರೊಂದಿಗೆ ಕೋಟೆ ಆವರಣದಲ್ಲಿ ಅತ್ಯಂತ ಆಕರ್ಷಕವಾಗಿ ಕೊಡಗಿನ ಸಾಂಸ್ಕೃತಿಕ ವೈಭವ ಅನಾವರಣಗೊಂಡಿತು.
ದೇವಸ್ಥಾನ ವ್ಯವಸ್ಥಾಪನಾ ಸಮಿತಿ, ಕೊಡವ ಸಾಹಿತ್ಯ ಅಕಾಡೆಮಿ ಹಾಗೂ ಅರೆಭಾಷೆ ಸಾಹಿತ್ಯ ಅಕಾಡೆಮಿಯ ಪ್ರಮುಖರು ಮತ್ತು ನಾಗರಿಕರು ವಿಶೇಷ  ಪೂಜೆ ಸಲ್ಲಿಸಿದ ಬಳಿಕ ಹುತ್ತರಿ ಕೋಲಾಟಕ್ಕೆ ಚಾಲನೆ ನೀಡಲಾಯಿತು.

‘ಪುತ್ತರಿ ಅರಮನೆ ಕೋಲ್’ ಮಂಜು ಮುಸುಕಿದ ತುಂತುರು ಮಳೆಯ ವಾತಾವರಣದ ನಡುವೆಯೆ ಉತ್ಸಾಹದಿಂದ ನಡೆಯುವ ಮೂಲಕ ಜನ ಮನವನ್ನು ಸೆಳೆಯಿತು. ನಾಲ್ಕನೇ ವರ್ಷದ ಪುತ್ತರಿ ಕೋಲಾಟ್ನ್ನು ವಿಧಾನ ಪರಿಷತ್ ಸದಸ್ಯರಾದ ವೀಣಾ ಅಚ್ಚಯ್ಯ ಉದ್ಘಾಟಿಸಿದರು. ತುಂತುರು ಮಳೆಯೊಂದಿಗೆ ಚಳಿಯ ನಡುವೆಯೆ ಮಡಿಕೇರಿ ತಾಲ್ಲೂಕಿನ ಹೆಬ್ಬೆಟ್ಟಗೇರಿ ಗ್ರಾಮದ ಪಾಂಡೀರ ಕುಟುಂಬಸ್ಥರು ದೇವತಕ್ಕ ಪಾಂಡೀರ ಮೊಣ್ಣಪ್ಪ, ಪಟ್ಟೆದಾರರಾದ ಪಾಂಡೀರ ಮುತ್ತಪ್ಪ ಅವರ ನೇತೃತ್ವದಲ್ಲಿ ಸಾಂಪ್ರದಾಯಿಕ ಉಡುಪಿನೊಂದಿಗೆ ದುಡಿಯ ನಾದಕ್ಕೆ ತಕ್ಕಂತೆ ಹೆಜ್ಜೆ ಹಾಕಿ ನಡೆಸಿಕೊಟ್ಟ ಕೋಲಾಟ್, ಬೊಳಕಾಟ್, ಸಮರಕಲೆಯಾದ ಪರೆಯ ಕಳಿ, ಮಹಿಳೆಯರ ಉಮ್ಮತ್ತಾಟ್ ಪ್ರದರ್ಶನ ಅತ್ಯಾಕರ್ಷಕ ರೀತಿಯಲ್ಲಿ ಪ್ರದರ್ಶನಗೊಂಡಿತು.

ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ತಂಡದಿಂದ ಬೊಳಕಾಟ್, ಕೋಲಾಟ್, ಕತ್ತಿಯಾಟ್ ಅತ್ಯಂತ ಮನಮೋಹಕವಾಗಿ ಮೂಡಿ ಬಂದರೆ, ಕರ್ನಾಟಕ ಅರೆ ಭಾಷಾ ಸಾಹಿತ್ಯ ಅಕಾಡೆಮಿಯ ತಂಡದ ಮಹಿಳೆಯರಿಂದ ಕೋಲಾಟ ಪ್ರದರ್ಶನ ಗಮನ ಸೆಳೆಯಿತು. ಮಡಿಕೇರಿ ಕೊಡವ ಸಮಾಜದ ಕೋಲಾಟ್  ಆಕರ್ಷಕವಾಗಿ ಮೂಡಿ ಬಂದಿತು.

ಕಾರ್ಯಕ್ರಮದಲ್ಲಿ ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ, ಅಪರ ಜಿಲ್ಲಾಧಿಕಾರಿ ಸತೀಶ್ ಕುಮಾರ್, ಅರೆ ಭಾಷಾ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಕೊಲ್ಯದ ಗಿರೀಶ್, ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷರಾದ ಕೆ.ಎಸ್. ದೇವಯ್ಯ, ಕೊಡವ ಸಮಾಜದ ನಿರ್ದೇಶಕರಾದ ತಾಪಂಡ ಸರಸು ತಮ್ಮಯ್ಯ, ಶ್ರೀ ಓಂಕಾರೇಶ್ವರ ದೇವಾಲಯ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ಕೆ.ಎಸ್.ರಮೇಶ್ ಹೊಳ್ಳ  ಮೊದಲಾದ ಗಣ್ಯರು ಉಪಸ್ಥಿತರಿದ್ದು ಹುತ್ತರಿ ಕೋಲಾಟಕ್ಕೆ ಸಾಕ್ಷಿಯಾದರು. ಶ್ರೀ ಓಂಕಾರೇಶ್ವರ ದೇವಾಲಯ ವ್ಯವಸ್ಥಾಪನಾ ಸಮಿತಿಯ ಆಡಳಿತಾಧಿಕಾರಿ ಸಂಪತ್ ಕುಮಾರ್, ಶ್ರೀ ಓಂಕಾರೇಶ್ವರ ದೇವಾಲಯದ ಪಾರುಪತ್ತೆಗಾರ ಚಿ.ನಾ.ಸೋಮೇಶ್ ಕಾರ್ಯಕ್ರಮವನ್ನು ನಿರೂಪಿಸಿದರು.

See also  ತುತ್ತೂರಿ ಹೂ... ಮನೆಗೂ ಬೃಂದಾವನಕ್ಕೂ ಶೋಭೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು