News Kannada
Friday, December 09 2022

ನುಡಿಚಿತ್ರ

ರಾಷ್ಟ್ರೀಯ ಉದ್ಯಾನವನದಲ್ಲಿ ನೀರಿಗಾಗಿ ಪ್ರಾಣಿಗಳ ಪರದಾಟ: ಮನಕಲಕುವ ದೃಶ್ಯಗಳು

Photo Credit :

ರಾಷ್ಟ್ರೀಯ ಉದ್ಯಾನವನದಲ್ಲಿ ನೀರಿಗಾಗಿ ಪ್ರಾಣಿಗಳ ಪರದಾಟ: ಮನಕಲಕುವ ದೃಶ್ಯಗಳು

ಮೈಸೂರು: ಬಂಡೀಪುರ-ನಾಗರಹೊಳೆಯ ರಾಷ್ಟ್ರೀಯ ಉದ್ಯಾನವನದಲ್ಲಿ ಉಂಟಾಗಿರುವ ಭೀಕರ ಬರಗಾಲದಿಂದ ಮತ್ತು ಕಾಳ್ಗಿಚ್ಚಿನಿಂದ ಪ್ರಾಣಿ ಪಕ್ಷಿಗಳಿಗೆ ಆಹಾರ, ಕುಡಿಯುವ ನೀರಿಗೂ ಹಾಹಾಕಾರ ಉಂಟಾಗಿದ್ದು ಇವುಗಳ ಅರಣ್ಯ ರೋಧನ ಕೇಳುವವರು ಇಲ್ಲದಂತಾಗಿದೆ. ಇಂತಹ ಪ್ರಾಣಿಗಳ ರೋಧನದ ದೃಶ್ಯ ಎಂತಹವರ ಮನ ಕಲುಕವಂತಿದ್ದು ಇಂತಹ ದೃಶ್ಯದ ಫೋಟೋಗಳು ಇಲ್ಲಿವೆ.

ಕಳೆದ ಮೂರು ವರ್ಷಗಳಿಂದ ವಾಡಿಕೆಗಿಂತ ಕಡಿಮೆ ಮಳೆಯಾಗಿದ್ದು ಇದರಿಂದ ಕಾಡು ಪ್ರಾಣಿಗಳಿಗೆ ಹಾಗೂ ಪಕ್ಷಿಗಳಿಗೆ ಆಹಾರ ನೀರಿನ ಕೊರತೆ ಉಂಟಾಗಿದ್ದು, ರಾಷ್ಟ್ರೀಯ ಉದ್ಯಾನವನದಲ್ಲಿರುವ ಸುಮಾರು 370 ಕೆರೆಗಳಿದ್ದು, ಅದರಲ್ಲಿ 10 ಕೆರೆಗಳಲ್ಲಿ ಮಾತ್ರ ಕುಡಿಯಲು ನೀರಿದೆ. ಜೊತೆಗೆ ಹೆಚ್.ಡಿ ಕೋಟೆ ಬಳಿಯ ಕಬಿನಿ ಜಲಶಾಯದ ಹಿನ್ನಿರಿನಲ್ಲಿ ನೀರು ಖಾಲಿಯಾಗಿದ್ದು ಪ್ರತಿನಿತ್ಯ ನೀರು ಕುಡಿಯಲು ತಮ್ಮ ಮರಿಗಳೊಂದಿಗೆ ಬರುವ ಆನೆಗಳು ನೀರಿಲ್ಲದೆ ಕಂಗಾಲಗಿದ್ದು, ಜಿಂಕೆ ಪಕ್ಷಿಗಳು, ಗುಟುಕು ನೀರಿಗಾಗಿ ಹಾತೊರೆಯುತ್ತಿವೆ.

ಇದರ ನಡುವೆಯೇ ಅರಣ್ಯ ಇಲಾಖೆಯು ಕಾಡಿನ ಮಧ್ಯ ಬಾಗದಲ್ಲಿ ಇರುವ ಕೆರೆ ಹೊಂಡಗಳಲ್ಲಿ  ಬೋರ್ ವೆಲ್ ತೆಗೆದು ನೀರನ್ನ ಹರಿಸಲು ಪ್ರಯತ್ನ ನಡೆಸುತ್ತಿದ್ದು ಅದು ಸಹ  ಕಷ್ಟವಾಗುತ್ತಿದ್ದು, ಈ ನಡುವೆ ಬಂಡೀಪುರ ಅರಣ್ಯ ವ್ಯಾಪ್ತಿಯ ನಾಲ್ಕು ವಲಯಗಳಲ್ಲಿ ಉಂಟಾದ ಕಾಳ್ಗಿಚ್ಚು ಅರಣ್ಯ ಸಂಪತ್ತಿನಿ ಜೊತೆಗೆ ಹಲವು ಪ್ರಾಣಿ ಪಕ್ಷಿಗಳು ಕಾಳ್ಗಿಚ್ಚಿಗೆ ಸಾವ್ನಪ್ಪಿವೆ.
 

See also  ಕೇರಳದಲ್ಲೂ ಆರಂಭವಾಗಲಿದೆ ಪಕ್ಷಿ ಭೂಪಟ: ಭಾರತದಲ್ಲೇ ಇದು ಮೊದಲ ಪ್ರಯೋಗ...
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು