News Kannada
Saturday, October 01 2022

ನುಡಿಚಿತ್ರ

ಹನೂರಲ್ಲಿ ಸಿದ್ದಪ್ಪಾಜಿ-ಮಂಟೇಲಿಂಗಯ್ಯ ಕಂಡಾಯೋತ್ಸವ - 1 min read

Photo Credit :

ಹನೂರಲ್ಲಿ ಸಿದ್ದಪ್ಪಾಜಿ-ಮಂಟೇಲಿಂಗಯ್ಯ ಕಂಡಾಯೋತ್ಸವ

ಚಾಮರಾಜನಗರ: ಪ್ರತಿವರ್ಷ ದಂತೆ ಆಚರಿಸಲಾಗುವ ಶ್ರೀ ಮಂಟೆಸ್ವಾಮಿ ಹಾಗೂ ಸಿದ್ದಪ್ಪಾಜಿ ಕಂಡಾಯೋತ್ಸವವು ಈ ಬಾರಿಯೂ ಯುಗಾದಿ ಹಬ್ಬದ  ಸಂದರ್ಭ ಹನೂರಿನ ಡಾ. ಬಿ.ಆರ್. ಅಂಬೇಡ್ಕರ್ ನಗರ ಹಾಗೂ ಅಶೋಕ ರಸ್ತೆಯ ಬಡಾವಣೆಗಳಲ್ಲಿ ಸಡಗರ, ಸಂಭ್ರಮದಿಂದ ಆಚರಿಸಲಾಯಿತು.

ಡಾ. ಬಿ.ಆರ್. ಅಂಬೇಡ್ಕರ್ ಸಮುದಾಯ ಭವನದ ಮುಂಭಾಗದಲ್ಲಿರುವ ಶ್ರೀ ಸಿದ್ದಪ್ಪಾಜಿ ದೇವಸ್ಥಾನದಲ್ಲಿರುವ ಜೋಡಿ ಕಂಡಾಯಗಳನ್ನು ಪಟ್ಟಣದ ಹೊರ ವಲಯದಲ್ಲಿ ಸ್ವಚ್ಛಗೊಳಿಸಿ ಹೂವು ಹೊಂಬಾಳೆಗಳಿಂದ ಸಿಂಗರಿಸಿ ಸಂಪ್ರದಾಯದಂತೆ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು.ನಂತರ ಗ್ರಾಮದ ಮುಖಂಡರು ಯಜಮಾನರು ಯುವಕರ ಮುಂದಾಳತ್ವದಲ್ಲಿ ಸತ್ತಿಗೆ ಸೂರಿಪಾನಿ ದಾಳ ಮಂಗಳ ವಾದ್ಯಮೇಳಗಳೊಡನೆ ಮಲೆ ಮಹದೇಶ್ವರಬೆಟ್ಟದ ಮುಖ್ಯ ರಸ್ತೆಯ ಹೆಚ್.ನಾಗಪ್ಪ ವೃತ್ತದ ಮೂಲಕ ಹಾದು ಮಠಬೀದಿ ಸೊಪ್ಪಿನಕೇರಿ ಅಶೋಕ ರಸ್ತೆ ಮಾರ್ಗವಾಗಿ ದಲಿತರ ಹಳೆ ಬೀದಿ ಮತ್ತು ಅಂಬೇಡ್ಕರ್ ನಗರಗಳಲ್ಲಿ ಮನೆ ಮನೆಗೆ ತೆರಳಿ ಮೆರವಣಿಗೆ ನಡೆಸಲಾಯಿತು.

ಫಲಪುಷ್ಪಗಳಿಂದ ಅಲಂಕೃತಗೊಂಡು ಆಗಮಿಸಿದ ಕಂಡಾಯಗಳಿಗೆ ಮಹಿಳೆಯರು ಮನೆ ಮುಂದಿನ ರಸ್ತೆಗೆ ನೀರು ಹಾಕಿ ವಿವಿಧ ಬಗೆಯ ಬಣ್ಣ ಬಣ್ಣದ ರಂಗೋಲಿ ಚಿತ್ರಣವನ್ನಿಟ್ಟು ಕರ್ಪೂರದ ಆರತಿ ಬೆಳಗುವ ಮೂಲಕ ಪೂಜಾ ಕಾರ್ಯ ನೆರವೇರಿಸಿ ಕೃತಾರ್ಥರಾದರು. ಇನ್ನು ಶ್ರೀ ಬೆಟ್ಟಳ್ಳಿ ಮಾರಮ್ಮನ ದೇವಾಲಯದಲ್ಲಿ ಯುಗಾದಿ ಹಬ್ಬದ ಪ್ರಯುಕ್ತ ವಿಶೇಷ ಪೂಜೆ ನಡೆಯಿತು. ಪನ್ನೀರು ಜೇನುತುಪ್ಪ, ಹಾಲು, ಮೊಸರು, ಎಳನೀರು ಹಾಗೂ ಇನ್ನಿತರ ಅಭಿಷೇಕಗಳು ನಡೆದವು. ಗರ್ಭ ಗುಡಿಯಲ್ಲಿರುವ ಅಮ್ಮನ ಮೂರ್ತಿಗೆ ನೂತನ ಉಡುಪು, ಬಂಗಾರದ ವಸ್ತ್ರ ಧರಿಸಿ, ತುಳಸಿಮಾಲೆ ಸೇರಿದಂತೆ ವಿವಿಧ ಬಗೆಯ ಹೂವಿನಹಾರಗಳಿಂದ ಅಲಂಕರಿಸಿ ಪೂಜಾ ಕಾರ್ಯವನ್ನು ನೆರವೇರಿಸಲಾಯಿತು.

See also  ಗೋಡೆಗಳಲ್ಲಿ ಹಸೆಯ ಚಿತ್ತಾರ ಅನಾವರಣಗೊಳಿಸಿದ ವಿದ್ಯಾರ್ಥಿಗಳು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು