News Kannada
Saturday, September 24 2022

ನುಡಿಚಿತ್ರ

ಪಾಳು ಬಿದ್ದಿರುವ ಕಟ್ಟಡದಂತಿದೆ ಶೃಂಗೇರಿ ಸರ್ಕಾರಿ ಕಾಲೇಜು! - 1 min read

Photo Credit :

ಪಾಳು ಬಿದ್ದಿರುವ ಕಟ್ಟಡದಂತಿದೆ ಶೃಂಗೇರಿ ಸರ್ಕಾರಿ ಕಾಲೇಜು!

ಚಿಕ್ಕಮಗಳೂರು: ನಮ್ಮ ಊರಲ್ಲೂ ಒಂದ್ ಕಾಲೇಜು ಇದ್ದಿದ್ರೆ ಎಷ್ಟು ಚಂದ ಅಲ್ವಾ,ಯಾರಪ್ಪ ಅಷ್ಟೂ ದೂರ ಹೋಗ್ತಾರೆ ಅಂತ ತಿಳಿದುಕೊಳ್ಳೊದು ಕಾಮನ್. ಆದರೆ ನಾವೀಗ ನಿಮಗೆ ತೋರಿಸೋ ಸ್ಟೋರಿ ಕೊಂಚ ಡಿಫರೆಂಟ್. ಯಾಕಪ್ಪ ಇಲ್ಲಿ ಸೇರ್ಕೊಂಡ್ವೀ ಸುಮ್ನೆ ಪ್ರವೈಟ್ ಕಾಲೇಜಿಗೆ ಹೋಗಿದ್ರೆ ಚೆನ್ನಾಗಿರೋದು ಅಂತ ವಿದ್ಯಾರ್ಥಿಗಳು ಪರಿತಪಿಸುತ್ತಿದ್ದಾರೆ.

ಸುಣ್ಣ ಬಣ್ಣ ಕಾಣದ ಗೋಡೆಗಳು. ಪುಡಿ ಪುಡಿಯಾಗಿರುವ ಕಿಟಕಿಗಳು.ಕಾಲೇಜು ಸುತ್ತ ಮುತ್ತ ಬಿದ್ದಿರುವ ಕಸಕಡ್ಡಿಗಳು. ಒಮ್ಮೆ ಈ ಕಟ್ಟಡನ ನೋಡಿ ಯಾವದಪ್ಪ ಇದು ಪಾಳು ಬಿದ್ದಿರುವ ಕಟ್ಟಡ ಅಂತ ಅಂದುಕೊಂಡಿದ್ದೀರಾ. ಆದರೆ ಇದು ಪಾಳು ಬಿದ್ದಿರುವ  ಕಟ್ಟಡ ಅಲ್ಲ ಬದಲಾಗಿ 880 ವಿದ್ಯಾರ್ಥಿಗಳ ಓದುತ್ತಿರುವ ಕಾಲೇಜು. ಅಂದಹಾಗೆ ಇದು ಶೃಂಗೇರಿಯ ಮೆಣಸೆ ಗ್ರಾಮದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜು. 2007 ರಲ್ಲಿ ನಿರ್ಮಾಣವಾದ ಕಾಲೇಜಿಗೆ ಇದುವರೆಗೂ ಸುಣ್ಣ ಬಣ್ಣವನ್ನು ಕಟ್ಟಡಗಳು ನೋಡೆ ಇಲ್ಲ. ಅಷ್ಟೇ ಯಾಕೆ ಇದುವರೆಗೂ ಕಸ ಕಡ್ಡಿ ಕೂಡ ತೆಗೆದಾಕಿಲ್ಲ. ಶೃಂಗೇರಿಯ ಸುತ್ತಮುತ್ತ ಇರೋದು ಇದೊಂದೇ ಕಾಲೇಜು. ಆದ್ರೆ ಏನ್ ಪ್ರಯೋಜನ ಹೆಸರಿಗೆ ಮಾತ್ರ ಕಾಲೇಜು ಇದೆ. ಆದ್ರೇ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಯಾವುದೇ ಮೂಲಭೂತ ಸೌಕರ್ಯವಿಲ್ಲ. ಈ ಸಂಬಂಧ ಈ ಹಿಂದೆ ಎರಡು ಬಾರಿ ದೊಡ್ಡ ಮಟ್ಟದ ಪ್ರತಿಭಟನೆ ಕೂಡ ಮಾಡಿದ್ದಾರೆ.ಆದ್ರೆ ಯಾವುದೇ ಪ್ರಯೋಜನವಾಗಿಲ್ಲ. ಇನ್ನು ಆಶ್ಚರ್ಯ ಅಂದ್ರೆ ಇರುವ 880 ವಿದ್ಯಾರ್ಥಿಗಳಿಗೆ ಇರೋದು ಕೇವಲ ಇಬ್ರೇ ಉಪನ್ಯಾಸಕರು ಇನ್ನುಳಿದವರೆಲ್ಲ ಅತಿಥಿ ಉಪನ್ಯಾಸಕರು.

ಕಿಟಕಿಗಳು ಸಹ ಈಗಾಗಲೇ ಪುಡಿ ಪುಡಿಯಾಗಿದೆ. ನೀರಿನ ವ್ಯವಸ್ಥೆ ಇಲ್ಲ. ಆಟದ ಮೈದಾನ ಇಲ್ಲ. ಪಠೇತ್ಯರ ಚಟುವಟಿಕೆಗಳು ಸಹ ನಡಿಯುತ್ತಿಲ್ಲ. ಮುಂದಿನ ದಿನಗಳಲ್ಲಿ ಇವೆಲ್ಲವೂ ಸರಿಹೋಗದಿದ್ರೆ ಉಗ್ರವಾದ ಹೋರಾಟ ನಡೆಸಲು ತೀರ್ಮಾನಿಸಿದ್ದಾರೆ. ಇನ್ನು ಈ ಕಾಲೇಜು ಶಾಸಕ ಜೀವರಾಜ್ ವ್ಯಾಪ್ತಿಗೆ ಸೇರುತ್ತದೆ. ಅವ್ರೇ ಈ ಕಾಜೇಜು ಕಮಿಟಿಯ ಅಧ್ಯಕ್ಷರು ಸಹ ಆಗಿದ್ದಾರೆ.ಆದ್ರೇ ಇದುವರೆಗೂ ಕಾಲೇಜಿನ ಕುಂದು ಕೊರತೆ ಬಗ್ಗೆ ಚಕರ್ ಎತ್ತಲಿಲ್ಲ.ಒಂದೇ ಒಂದೂ ಮೀಟಿಂಗ್ ಸಹ ಮಾಡಿಲ್ಲ. ಕೇವಲ ರಾಜಕೀಯ ಕೆಸರೆರೆಚಾಟ ಮಾತ್ರ ನಡೆಯುತ್ತಿದೆ. ಇದರ ಮಧ್ಯೆ ಬಲಿಯಾಗುತ್ತಿರೋದು ನೂರಾರು ವಿದ್ಯಾರ್ಥಿಗಳು. ಇನ್ನು ಈಗಾಗಲೇ ಕೇಂದ್ರ ಸರ್ಕಾರ ಕೂಡ ಅಭಿವೃದ್ಧಿ ಪಡಿಸಲು 50 ಲಕ್ಷ ರುಪಾಯಿ ಬಿಡುಗಡೆ ಮಾಡಿದೆ. ಆದ್ರೇ ದೇವ್ರೂ ವರ ಕೊಟ್ರು ಪೂಜಾರಿ ವರ ಕೊಟ್ಟಿಲ್ಲ ಅಂದಹಾಗೆ ಶಿಕ್ಷಣ ಇಲಾಖೆ ಆಯುಕ್ತರು ಮಾತ್ರ ಬಂದಿರುವ ಚಕ್ನ ತಮ್ಮ ಕಚೇರಿಯಲ್ಲೇ ಇಟ್ಕೊಂಡು ಪೂಜೆ ಮಾಡ್ತಿದ್ದಾರೆ ಅಂತ ಜನಪ್ರತಿನಿಧಿಗಳು ಆರೋಪ ಮಾಡ್ತಿದಾರೆ. ಆದ್ರೇ ಅಪ್ಪ ಅಮ್ಮ ಜಗಳದಲ್ಲಿ ಕೂಸು ಬಡವಾಯ್ತು ಅನ್ನೋ ಹಾಗೆ ವಿದ್ಯಾರ್ಥಿಗಳು ಮಾತ್ರ ಇತ್ತ ಕಾಲೇಜಿಗೆ ಬರಲು ಆಗದೇ ಬೇರೆ ಕಾಜೇಜಿಗೆ ಸೇರಿಕೊಳ್ಳಲಾಗದೆ ಪರಿತಪಿಸುತ್ತಿದ್ದಾರೆ. ಇಷ್ಟಿದ್ರು ಕಾಲೇಜಿನ ವಿದ್ಯಾರ್ಥಿನಿ ಬಿ.ಎ ಪರೀಕ್ಷೆಯಲ್ಲಿ ಪ್ರಥಮ ರ್ಯಾಂಕ್ ಬಂದಿರೋದು ವಿಶೇಷ.

See also  ಕಲ್ಲರಳಿ ಹೂವಾಗಿ!

ಒಟ್ಟಾರೆಯಾಗಿ ಕೇಂದ್ರ ಸರ್ಕಾರವೇನೊ 50 ಲಕ್ಷ ಹಣ ಬಿಡುಗಡೆ ಮಾಡಿದೆ. ಆದ್ರೇ ವರ್ಷ ಕಳೆದ್ರೂ ಸಹ ಇನ್ನು ಕಾಲೇಜು ಅಭಿವೃದ್ಧಿಯಾಗಿಲ್ಲ ಅಂದ್ರೆ ನಿಜಕ್ಕೂ ಖಂಡನೀಯ. ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿಗಳ ದಾಖಲಾತಿಗಳು ಸಹ ಇಳಿಮುಖವಾಗುತ್ತಿದೆ. ಈ ರೀತಿಯ ರಾಜಕೀಯ ಕೆಸರೆರಚಾಟದಿಂದ ಮುಂದಿನ ದಿನಗಳಲ್ಲಿ ಸರ್ಕಾರಿ ಶಾಲೆ,ಕಾಲೇಜುಗಳು ಮುಚ್ಚುವಂತಹ ಪರಿಸ್ಥಿತಿ ನಿರ್ಮಾಣವಾಗಬಹುದು. ಆದಷ್ಟೂ ಬೇಗ ಸಂಬಂಧ ಪಟ್ಟವರು ಸಮಸ್ಯೆ ಬಗೆಹರಿಸಲು ಅನ್ನೋದೆ ನಮ್ಮ ಆಶಯ ಕೂಡ…

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು