ಮೇಲುಕೋಟೆ: ಭಗವದ್ ರಾಮಾನುಜಾಚಾರ್ಯರ ಸಹಸ್ರಮಾನೋತ್ಸವದ ಶಾಶ್ವತ ನೆನಪಿಗಾಗಿ ಆಚಾರ್ಯರ ಕರ್ಮಭೂಮಿಯಾದ ಮೇಲುಕೋಟೆಯಲ್ಲಿ ಅವರ ವಿಶೇಷ ಸ್ಮಾರಕ ನಿರ್ಮಿಸಲಾಗಿದೆ.
ಸುಮಾರು 60 ಲಕ್ಷ ರೂ. ವೆಚ್ಚದ ಗುಜರಾತ್ ಕಲಾಶೈಲಿಯ ರಾಮಾನುಜರನ್ನೊಳಗೊಂಡ ಈ ಮಂಟಪ ಆಕರ್ಷಕವಾಗಿದ್ದು ಗಮನಸೆಳೆಯುತ್ತಿದೆ. ಮಂಟಪವನ್ನು ಗುಜರಾತ್ನ ಸುಮಾರು 15ಕ್ಕೂ ಹೆಚ್ಚು ಕಲಾಕಾರರು ಸತತ ಒಂದು ತಿಂಗಳಿಗೂ ಹೆಚ್ಚು ಕಾಲ ಶ್ರಮಿಸಿ ನಿರ್ಮಿಸಿದ್ದು. ಇಡೀ ಮಂಟಪವನ್ನು ಕೆಂಪುಮಾರ್ಬಲ್ ನಲ್ಲಿ ನಿರ್ಮಾಣ ಮಾಡಲಾಗಿದೆ.
ಮಂಟಪವು ಎಂಟು ಕಂಬಗಳು, ಶಾಶ್ವತವಾದ ವಿದ್ಯುತ್ ದೀಪಾಲಂಕಾರ, ಮಂಟಪದ ಸುತ್ತ ವಿಶೇಷ ಶೈಲಿಯ ನೀರಿನ ಕಾರಂಜಿ ಹಾಗೂ ಆಕರ್ಷಕ ರಕ್ಷಣಾಗೋಡೆಯನ್ನು ಹೊಂದಿದ್ದು, ಮೇಲುಕೋಟೆಯ ಅಕ್ಕತಂಗಿ ಕೊಳದ ನಂತರ ಧನುಷ್ಕೋಟಿಗೆ ಹೋಗುವ ಮಾರ್ಗ ಮಧ್ಯೆ ಈ ಮಂಟಪವನ್ನು ನಿರ್ಮಾಣ ಮಾಡಲಾಗಿದೆ.
ಇದನ್ನು ವಿಶ್ವ ಆರ್ಥಿಕ ತಜ್ಞೆ ಕುಮಾರಿ ವೇದವಲ್ಲಿ ಅವರು ಕೊಡುಗೆಯಾಗಿ ನೀಡಿದ್ದು, ಮೇಲುಕೋಟೆಗೆ ಇದೊಂದು ಆಕರ್ಷಕ ಮತ್ತು ಗಮನಾರ್ಹವಾಗಿದೆ ಎಂದರೆ ತಪ್ಪಾಗಲಾರದು.