News Kannada
Monday, September 26 2022

ನುಡಿಚಿತ್ರ

ಸೆಪ್ಟಂಬರ್ ನಲ್ಲಿ ಕಾವೇರಿ ಪುಷ್ಕರವೆಂಬ ತೀರ್ಥಸ್ನಾನ! - 1 min read

Photo Credit :

ಸೆಪ್ಟಂಬರ್ ನಲ್ಲಿ ಕಾವೇರಿ ಪುಷ್ಕರವೆಂಬ ತೀರ್ಥಸ್ನಾನ!

ಮೈಸೂರು: ಭಕ್ತಾದಿಗಳು ತಮ್ಮ ರಾಶಿಗನುಗುಣವಾಗಿ ಕಾವೇರಿ ನದಿ ತಟದ ಕ್ಷೇತ್ರಗಳಲ್ಲಿ ವಿಶೇಷ ಪೂಜಾ ವಿಧಿವಿಧಾನಗಳೊಂದಿಗೆ ಪುಣ್ಯಸ್ನಾನ ಮಾಡುವ ಕಾವೇರಿ ಪುಷ್ಕರ ಕಾರ್ಯಕ್ರಮವು ಸೆಪ್ಟಂಬರ್ 12ರಿಂದ ಆರಂಭವಾಗಿ ಸುಮಾರು 12 ದಿನಗಳ ಕಾಲ ನಡೆಯಲಿದೆ ಎಂದು ತಿಳಿದು ಬಂದಿದೆ.

ಈ ಸಂಬಂಧ ಈಗಾಗಲೇ ಶ್ರೀರಂಗಪಟ್ಟಣದ ಶಾಶ್ವತಿ ಧಾರ್ಮಿಕ ಕೇಂದ್ರದಲ್ಲಿ ಕಾವೇರಿ ನದಿ ಸ್ವಚ್ಛತಾ ಆಂದೋಲನದ ರಾಜ್ಯ ಹಾಗೂ ತಮಿಳುನಾಡು ಪ್ರಾಂತ್ಯದ ಸಂಯೋಜಕ ವೇ.ಬ್ರ. ಡಾ. ಭಾನುಪ್ರಕಾಶ್ ಶರ್ಮ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆದಿದ್ದು, ತಮಿಳುನಾಡು ಮತ್ತು ಕರ್ನಾಟಕದ ಸಾಧು-ಸಂತರು, ಪ್ರಮುಖರು ಪಾಲ್ಗೊಂಡು ಹಲವು ಸಲಹೆಗಳನ್ನು ನೀಡಿದ್ದಾರೆ. ಅದರಂತೆ ಸೆಪ್ಟಂಬರ್ 12 ರಿಂದ ಕಾರ್ಯಕ್ರಮ ಆರಂಭಗೊಳ್ಳಲಿದೆ ಎನ್ನಲಾಗಿದೆ.

ಕಾವೇರಿ ಪುಷ್ಕರ ಕಾರ್ಯಕ್ರಮ 12 ವರ್ಷಗಳಿಗೊಮ್ಮೆ 12 ದಿನಗಳ ಕಾಲ ನಡೆಯುವ ಕಾರ್ಯಕ್ರಮವಾಗಿದ್ದು, ಕಾವೇರಿ ನದಿ ತಟದ ವಿವಿಧ ಕ್ಷೇತ್ರಗಳಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು, ಕೊಡಗಿನ ಭಾಗಮಂಡಲ, ಬಲಮುರಿ, ಹಾಸನದ ರಾಮನಾಥಪುರ, ಮಂಡ್ಯದ ಶ್ರೀರಂಗಪಟ್ಟಣ ಹೀಗೆ ಹಲವು ಕಡೆಗಳಲ್ಲಿ ಪೂಜಾ ಕೈಂಕರ್ಯಗಳು ನಡೆಯುವುದರೊಂದಿಗೆ ಭಕ್ತಾಧಿಗಳು ತಮ್ಮ ರಾಶಿಗನುಗುಣವಾಗಿ ಕಾವೇರಿ ನದಿ ತಟದ ಕ್ಷೇತ್ರಗಳಲ್ಲಿ ವಿಶೇಷ ಪೂಜಾ ವಿಧಿವಿಧಾನಗಳೊಂದಿಗೆ ಪುಣ್ಯಸ್ನಾನ ಮಾಡ ಬಹುದಾಗಿದೆ.

ಈ ಕಾರ್ಯಕ್ರಮದಲ್ಲಿ ಕರ್ನಾಟಕ ಮತ್ತು ತಮಿಳುನಾಡಿನ ಎಲ್ಲ ಸಾಧು-ಸಂತರು ಆಗಮಿಸಲಿದ್ದು ಬೃಹತ್ ಕಾರ್ಯಕ್ರಮಗಳು ಕಾವೇರಿ ನದಿ ತಟ್ಟದ ಪುಣ್ಯ ಕ್ಷೇತ್ರಗಳಲ್ಲಿ ನಡೆಯಲಿವೆ. ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ರೂಪುರೇಷೆಗಳನ್ನು ತಯಾರಿಸಲಾಗುತ್ತಿದೆ. ಕಾವೇರಿ ಪುಷ್ಕರ ನಡೆಯುವ 12 ದಿನಗಳ  ಅವಧಿಯಲ್ಲಿ ಶ್ರೀರಂಗ ಪಟ್ಟಣದ ನಿಮಿಷಾಂಭ ದೇವಾಲಯದ ಬಳಿ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ಸಂತ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಇದರಲ್ಲಿ ಕಂಚಿ ಕಾಮಕೋಟಿ ಶ್ರೀಗಳು, ಪೇಜಾವರ ಶ್ರೀಗಳು, ಶೃಂಗೇರಿ ಮಠಾಧೀಶರು, ಆದಿಚುಂಚನಗಿರಿ ಮಠಾಧೀಶರು, ಸುತ್ತೂರು ಶ್ರೀಗಳು ಸೇರಿದಂತೆ  ಸುಮಾರು 500 ಕ್ಕೂ ಅಧಿಕ ಸಾಧು-ಸಂತರು, ಮಠಾಧೀಶರು ಪಾಲ್ಗೊಳ್ಳಲಿದ್ದಾರೆ ಎನ್ನಲಾಗಿದೆ.

ಈಗಾಗಲೇ ವೇ.ಬ್ರ. ಡಾ. ಭಾನುಪ್ರಕಾಶ್ ಶರ್ಮ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಅಖಿಲ ಭಾರತ ಸಾಧುಸಂತರ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀ ರಮಾನಂದ ಸ್ವಾಮೀಜಿ, ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ಸ್ಥಾಪಕರಾದ ಗಣೇಶಸ್ವರೂಪಾನಂದ ಸ್ವಾಮೀಜಿ, ಸಮಿತಿಯ ರಾಜ್ಯ ಸಂಚಾಲಕ ಎಂ.ಎನ್. ಚಂದ್ರಮೋಹನ್, ತಮಿಳುನಾಡು ಪ್ರಾಂತ್ಯದ ಸಂಚಾಲಕ ವಾಸು ರಾಮಚಂದ್ರನ್, ರಾಮನಾಥಪುರ ವಿಭಾಗದ ಸಂಚಾಲಕ ಕುಮಾರಸ್ವಾಮಿ ಮೊದಲಾದವರು ಪಾಲ್ಗೊಂಡು ಹಲವು ಸಲಹೆಗಳನ್ನು ನೀಡಿದ್ದಲ್ಲದೆ, ಕಾರ್ಯಕ್ರಮದ ಹಲವು ಜವಬ್ದಾರಿಗಳನ್ನು ಹೊತ್ತುಕೊಂಡು ಯಶಸ್ವಿಯಾಗಿ ನಡೆಸಲು ಮುಂದಾಗಿದ್ದಾರೆ.

See also  ಬರಿಗಾಲಲ್ಲೇ 3000ಅಡಿ ಎತ್ತರದ ಬೆಟ್ಟವನ್ನೇರಿ ಹರಕೆ ತೀರಿಸುವ ದೇವಿರಮ್ಮನ ಭಕ್ತರು!
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು