News Kannada
Tuesday, November 29 2022

ನುಡಿಚಿತ್ರ

ಕೊಡಗಿನಲ್ಲೊಂದು ಅಪರೂಪದ ಬೇಲ್ ನಮ್ಮೆ - 1 min read

Photo Credit :

ಕೊಡಗಿನಲ್ಲೊಂದು ಅಪರೂಪದ ಬೇಲ್ ನಮ್ಮೆ

ಒಂದೆಡೆ ಜಿಟಿ..ಜಿಟಿ..ಮಳೆ, ಮತ್ತೊಂದೆಡೆ ಸುಯ್ಯೆಂದು ಬೀಸುವ ಕುಳಿರ್ಗಾಳಿ…ಇದರ ನಡುವೆ ಸಣ್ಣಗೆ ನಡುಕ ಹುಟ್ಟಿಸುವ ಚಳಿ…ಅದೆಲ್ಲವನ್ನು ಮರೆಯಿಸಲೇನೋ ಎಂಬಂತೆ ಅಲೆ ಅಲೆಯಾಗಿ ತೇಲಿ ಬಂದು ಕಿವಿಗೆ ಬಡಿಯುವ ಸಾಂಪ್ರದಾಯಿಕ ಕೊಡವ ವಾಲಗದ ಸದ್ದು.. ಆಗೊಮ್ಮೆ ಈಗೊಮ್ಮೆ ಹರಹೊ ಎಂಬ ಗದ್ದೆ ಉಳುಮೆ ಮಾಡುವ ರೈತನ ಬಾಯಿಂದ ಬರುವ ಸದ್ದು…

ಸೂಟು ಬೂಟು ತೊಟ್ಟು ಸಭೆ, ಸಮಾರಂಭಗಳಲ್ಲಿ ಬಿಜ್ಹಿಯಾಗಿದ್ದವರು ತಮ್ಮ ದೈನಂದಿನ ಬದುಕಿನ ಜಂಜಾಟವನ್ನೆಲ್ಲಾ ಬದಿಗೊತ್ತಿ ಅಪ್ಪಟ ರೈತರಾಗಿ ಬಿಡುತ್ತಾರೆ. ಇವರ ಪೈಕಿ ಕೆಲವರು ನೇಗಿಲು ಹಿಡಿದು ಉಳುಮೆ ಮಾಡಿದರೆ, ಮಹಿಳೆಯರು ಪೈರು ಕಿತ್ತುಕೊಡುತ್ತಾರೆ. ಪುರುಷರು ಪೈರು ಹಿಡಿದು ಕೆಸರು ಗದ್ದೆಯಲ್ಲಿ ನಾಟಿ ಮಾಡುತ್ತಾರೆ…ಇಂತಹದೊಂದು ಅಪರೂಪದ ದೃಶ್ಯ ವರ್ಷಕ್ಕೊಮ್ಮೆ ಕೊಡಗಿನ ಗದ್ದೆಯಲ್ಲಿ ನೋಡಲು ಸಿಗುತ್ತದೆ. ಇಂತಹದೊಂದು ಅಪರೂಪದ ಕಾರ್ಯಕ್ರಮವನ್ನು ಆಯೋಜಿಸುತ್ತಾ ಬಂದ ಹೆಮ್ಮೆ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಗೆ ಸಲ್ಲುತ್ತದೆ.

ಕಳೆದ ಕೆಲವು ದಶಕಗಳ ಹಿಂದೆ ಅವಿಭಕ್ತ ಕುಟುಂಬಗಳಿದ್ದ ಕಾಲದಲ್ಲಿ ಭತ್ತದ ಕೃಷಿಯನ್ನು ಒಂದು ಹಬ್ಬದಂತೆ ಎಲ್ಲರೂ ಸೇರಿ ಮಾಡುತ್ತಿದ್ದರು. ಭತ್ತದ ಕೃಷಿ ಕಠಿಣವಾಗಿದ್ದರೂ ಅದನ್ನು ಎಲ್ಲರೂ ಒಂದೆಡೆ ಸೇರಿ ಮಾಡುತ್ತಿದ್ದರಿಂದ ಒಂಥರಾ ಮಜಾ ಇರುತ್ತಿತ್ತು. ಗದ್ದೆ ಬಳಿ ಬಂದವರು ಹಾಗೆ ಹೋಗುತ್ತಿರಲಿಲ್ಲ. ಕೆಸರುಗದ್ದೆಗಿಳಿದು ನಾಟಿ ನೆಟ್ಟು ಹೋಗುತ್ತಿದ್ದರು. ಇನ್ನು ಕೆಲವರು ಯಾವುದೇ ಫಲಾಫೇಕ್ಷೆಯಿಲ್ಲದೆ ನಾಟಿ ನೆಡಲೆಂದೇ ಬರುತ್ತಿದ್ದರು.

ಸೇನೆಯಲ್ಲಿದ್ದವರು, ಹೊರ ಊರುಗಳಲ್ಲಿ ಕೆಲಸ ಮಾಡುತ್ತಿದ್ದವರು, ಮದುವೆ ಮಾಡಿಕೊಟ್ಟ ಹೆಣ್ಣುಮಗಳು ಮೊದಲ ವರ್ಷದಲ್ಲಿ ಮಳೆಗಾಲದ ನಾಟಿಕೆಲಸದ ಸಮಯಕ್ಕೆ ಮನೆಗೆ ಬರುತ್ತಿದ್ದರು. ಗದ್ದೆಯಲ್ಲಿ ಎಲ್ಲರೂ ಸೇರಿ ನಾಟಿ ನೆಟ್ಟು ಖುಷಿ ಪಡೆಯುತ್ತಿದ್ದರು. ಕುಂಭದ್ರೋಣ ಮಳೆ ಸುರಿದರೂ ಲೆಕ್ಕಿಸದೆ ಕೆಸರುಗದ್ದೆಯಲ್ಲಿ ನಾಟಿ ಕಾರ್ಯ ಮಾಡುತ್ತಿದ್ದರು. ದೊಡ್ಡ ದೊಡ್ಡ ಗದ್ದೆಗಳಲ್ಲಿ ನಾಟಿ ಮಾಡಲು ಜನ ಇಳಿದರೆಂದರೆ ಅವರು ನಾಟಿ ಮಾಡುವ ಉತ್ಸಾಹವನ್ನು ನೋಡುವುದೇ ಸಂಭ್ರಮ.

ನಾಟಿ ಮಾಡುವುದರಲ್ಲಿ ನಿಫುಣನೆಂಬ ಸುತ್ತಮುತ್ತಲಿನ ಗ್ರಾಮಗಳಲ್ಲಿ ಹೆಸರು ಪಡೆದವರೂ ಇದ್ದರು. ಮಳೆ ಚಳಿಯನ್ನು ಬದಿಗೊತ್ತಿ ಕೆಲಸ ನಿರ್ವಹಿಸುವ ಸಲುವಾಗಿ ಒಯ್ಯ ಹಾಕುತ್ತಿದ್ದರು. ಇದು ದೊಡ್ಡ ನಾಟಿಯ ಸಂದರ್ಭ ನಡೆಯುತ್ತಿತ್ತು. ಗದ್ದೆಯಲ್ಲಿ ನಾಟಿ ಮುಗಿಯುತ್ತಾ ಬರುತ್ತಿದ್ದಂತೆಯೇ ಯಾವುದಾದರೂ ಒಂದು ವಿಷಯವನ್ನಿಟ್ಟುಕೊಂಡು ಒಯ್ಯ ಹಾಕಿದರೆ ಅದಕ್ಕೆ ಉಳಿದವರು ದನಿಗೂಡಿಸುತ್ತಿದ್ದರು. ಇದಾದ ಬಳಿಕ ಓಟ ನಡೆದು ಅದರಲ್ಲಿ ಗೆದ್ದವರಿಗೆ ಬಹುಮಾನಗಳನ್ನು ನೀಡಲಾಗುತ್ತಿತ್ತು. ಬಳಿಕ ಊಟೋಪಚಾರ ನಡೆಯುತ್ತಿತ್ತು.

ಈಗ ಕೊಡಗಿನಲ್ಲಿ ಎಲ್ಲವೂ ಬದಲಾಗಿದೆ. ಭತ್ತದ ಕೃಷಿ ಮಾಯವಾಗುತ್ತಿದೆ. ಯುವಕ ಯುವತಿಯರಿಗೆ ನಾಟಿ ನೆಡುವುದು, ಪೈರು ಕೀಳುವುದು ಗೊತ್ತೇ ಇಲ್ಲದಾಗಿದೆ. ಜತೆಗೆ ಸಂಪ್ರದಾಯಬದ್ಧವಾಗಿ ಕೃಷಿ ಮಾಡುವುದನ್ನು ಜನ ಮರೆತು ಬಿಟ್ಟಿದ್ದಾರೆ. ಹೀಗಾಗಿ ಮತ್ತೆ ಆ ಹಳೆಯ ನೆನಪುಗಳನ್ನು ಮರುಕಳಿಸುವ ಮತ್ತು ಯುವಕ ಯುವತಿಯರಿಗೆ, ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಭತ್ತದ ಕೃಷಿಯ ಮಹತ್ವ ಸಾರುವ ನಿಟ್ಟಿನಲ್ಲಿ ಬೇಲ್ ನಮ್ಮೆ(ಕೃಷಿಹಬ್ಬ)ಯನ್ನು ಹಮ್ಮಿಕೊಳ್ಳಲಾಗಿದೆ.

See also  ಮಕ್ಕಳಿಗಿದು ಶಾಲೆಯಲ್ಲ... ಕಲಿಯುವ ಮನೆ

ಈ ಬಾರಿ ನಾಪೋಕ್ಲುವಿನ ಬಿದ್ದಾಟಂಡ ಕುಟುಂಬದ ದಿ.ದೇವಯ್ಯ ಅವರ ಬುಟ್ಟಿ ಆಕತೆಂವ(ಗದ್ದೆ)ಯಲ್ಲಿ ಜುಲೈ 22 ರಂದು ಬೆಳಗ್ಗೆ 9.30 ರಿಂದ ಬೇಲ್ ನಮ್ಮೆ ಆರಂಭವಾಗಲಿದೆ.

ಬೇಲ್ ನಮ್ಮೆಯಲ್ಲಿ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ವಿವಿಧ ಸ್ಪರ್ಧೆ ಹಾಗೂ ತರಬೇತಿ ಕಾರ್ಯಕ್ರಮ ನಡೆಯಲಿದೆ. ಸ್ಪರ್ಧೆಗಳಲ್ಲಿ ಭಾಗವಹಿಸುವ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಅಕಾಡೆಮಿ ವತಿಯಿಂದ ಪ್ರಶಂಸನಾ ಪತ್ರ ಹಾಗೂ ಬಹುಮಾನ ನೀಡಲಾಗುತ್ತದೆ.

ಇದೇ ವೇಳೆ ವಿದ್ಯಾರ್ಥಿನಿಯರಿಗೆ ಪೈರು ತೆಗೆಯುವ ತರಬೇತಿ, ವಿದ್ಯಾರ್ಥಿಗಳಿಗೆ ಪೈರು ನೆಡುವ (ನಾಟಿ) ತರಬೇತಿಯೂ ನಡೆಯಲಿದೆ. ಇದರೊಂದಿಗೆ ಪೈರು ಕೀಳುವ, ನಾಟಿ ನೆಡುವ ಸ್ಪರ್ಧೆ, ಕೆಸರು ಗದ್ದೆ ಓಟ. ಶಕ್ತಿಕೋಲ್ ಪೈಪೋಟಿ, ಹಗ್ಗಜಗ್ಗಾಟ ಸೇರಿದಂತೆ ಹಲವು ಸ್ಪರ್ಧೆ ಮತ್ತು ಮನೋರಂಜನಾ ಕಾರ್ಯಕ್ರಮಗಳು ನಡೆಯಲಿವೆ.

ಈ ಕುರಿತ ಹೆಚ್ಚಿನ ಮಾಹಿತಿಗೆ ಅಕಾಡೆಮಿ ಕಚೇರಿ ದೂರವಾಣಿ-08272-229074 ಮತ್ತು ಮಣವಟ್ಟಿರ ದಯಾ ಕುಟ್ಟಪ್ಪ-9448904785, ಬಿದ್ದಾಟಂಡ ಪಾಪ ಮುದ್ದಯ್ಯ-9481773039 ನ್ನು ಸಂಪರ್ಕಿಸಬಹುದು ಎಂದು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಬಿದ್ದಾಟಂಡ ಎಸ್.ತಮ್ಮಯ್ಯ ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು