News Kannada
Thursday, December 08 2022

ನುಡಿಚಿತ್ರ

ಕೇರಳದಲ್ಲೂ ಆರಂಭವಾಗಲಿದೆ ಪಕ್ಷಿ ಭೂಪಟ: ಭಾರತದಲ್ಲೇ ಇದು ಮೊದಲ ಪ್ರಯೋಗ…

Photo Credit :

ಕೇರಳದಲ್ಲೂ ಆರಂಭವಾಗಲಿದೆ ಪಕ್ಷಿ ಭೂಪಟ: ಭಾರತದಲ್ಲೇ ಇದು ಮೊದಲ ಪ್ರಯೋಗ...

ಕಾಸರಗೋಡು: ಅಭಿವೃದ್ಧಿಯ ಭರದಲ್ಲಿ ಪ್ರಾಣಿ, ಪಕ್ಷಿ ಸಂಕುಲ ನಾಶದತ್ತ ಸಾಗುತ್ತಿದೆ. ಆದರೆ ಪಕ್ಷಿ ಪ್ರೇಮಿಗಳ ಸಹಕಾರದೊಂದಿಗೆ ಅರಣ್ಯ ಇಲಾಖೆ ಹೊಸ ಇತಿಹಾಸ ಬರೆಯಲು ಹೊರಟಿದೆ.

ಪಕ್ಷಿ ಭೂಪಟವನ್ನು ತಯಾರಿಸಲು ಮುಂದೆ ಬಂದಿದ್ದು, ಪಾಶ್ಚಾತ್ಯ ದೇಶಗಳಲ್ಲಿ ಇರುವಂತೆ ಕೇರಳದಲ್ಲೂ ಪಕ್ಷಿ ಭೂಪಟಕ್ಕೆ ಮುಂದೆ ಬಂದಿದ್ದು, ಇದು ಭಾರತದಲ್ಲೇ ಮೊದಲ ಪ್ರಯೋಗವಾಗಿದೆ.

ಎರಡು ಹಂತಗಳಲ್ಲಿ ಪಕ್ಷಿಗಳ ಸರ್ವೇ ನಡೆಯಲಿದೆ. ಮಳೆಗಾಲ ಮತ್ತು ಬೇಸಿಗೆಕಾಲದಲ್ಲಿ ಸರ್ವೇ ನಡೆಯಲಿದೆ. ಮೊದಲ ಹಂತದ ಸರ್ವೇ ಜುಲೈ 15 ರಿಂದ ಸೆಪ್ಟ೦ಬರ್ 13ರ ತನಕ ಹಾಗೂ ಎರಡನೇ ಹಂತದ ಸರ್ವೇ ಜನವರಿ 13ರಿಂದ ಮಾರ್ಚ್ 13ರ ತನಕ ನಡುವೆ ನಡೆಯಲಿದೆ. ಈ ಸರ್ವೇ ಮೂಲಕ ಹಕ್ಕಿಗಳ ಪ್ರಮಾಣ, ಹಕ್ಕಿಗಳ ವಿಧ, ವಲಸೆ ಹಕ್ಕಿಗಳು, ವಾಸ ಸ್ಥಳ ಮೊದಲಾದವುಗಳ ಅಂಕಿ ಅಂಶ ತಯಾರಿಸಲಿದೆ.

ಬೆಳಿಗ್ಗೆ ಆರರಿಂದ ಹತ್ತು ಗಂಟೆ, ಸಂಜೆ 4 ರಿಂದ 6 ರ ನಡುವಿನ ಅವಧಿಯಲ್ಲಿ ಪಕ್ಷಿಗಳ ಸರ್ವೇ ಹಾಗೂ ವೀಕ್ಷಣೆ ನಡೆಯಲಿದೆ. 187 ವಿದ್ಯಾರ್ಥಿಗಳು, ಅಧ್ಯಾಪಕರು, ಯುವಕರು, ಪಕ್ಷಿ ತಜ್ಞರು, ಅಧಿಕಾರಿಗಳನ್ನು ಒಳಗೊಂಡ ಸಾರ್ವಜನಿಕರ ಸಹಭಾಗಿತ್ವದಲ್ಲಿ ಜಿಲ್ಲೆಯ ವಿವಿಧ ಕಡೆಗಳಲ್ಲಿ ಪಕ್ಷಿಗಳ ಚಿತ್ರೀಕರಣ ನಡೆಸಲಾಗುತ್ತಿದೆ. ಪಕ್ಷಿಗಳ ಹಾರಾಟ, ಧ್ವನಿ ಮೊದಲಾದ ಮಾಹಿತಿ ಸಂಗ್ರಹಿಸಲಾಗುವುದು. ಜಿಲ್ಲೆಯ ಕೆಲ ಕೇಂದ್ರಗಳನ್ನು ಕೇಂದ್ರೀಕರಿಸಿ ಸರ್ವೇ ನಡೆಸಲಾಗುತ್ತಿದೆ.

ವರ್ಷಾರಂಭದಲ್ಲಿ ಪಕ್ಷಿ ಪ್ರೇಮಿಗಳು ಸರ್ವೇ ನಡೆಸಿ ಕೆಲ ಪಕ್ಷಿಗಳ ಚಿತ್ರೀಕರಣ ನಡೆಸಿದ್ದರು. ಈ ಸಂದರ್ಭದಲ್ಲಿ ಕೆಲ ಅಪೂರ್ವ ಪಕ್ಷಿಗಳು ಕಂಡು ಬಂದಿದ್ದವು. ಮೂರು ವರ್ಷಗಳ ಅವಧಿಯಲ್ಲಿ ಪಕ್ಷಿ ಭೂಪಟ ತಯಾರಿಸುವ ಗುರಿ ಹೊಂದಲಾಗಿದೆ. ಪಕ್ಷಿ ಭೂಪಟ ತಯಾರಾಗುವುದರೊಂದಿಗೆ ಪಕ್ಷಿ ಪ್ರೇಮಿ, ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರಿಗೆ ಸಾಕಷ್ಟು ಸಹಕಾರಿಯಾಗಲಿದೆ.

ಪಕ್ಷಿಗಳ ಬಗ್ಗೆ ತಿಳಿಯಲು ಒಂದೇ ಕೇಂದ್ರದಲ್ಲಿ ನೆರವಾಗಲಿದೆ. ಇಂದು ವಂಶ ನಾಶ ಎದುರಿಸುತ್ತಿರುವ ಪಕ್ಷಿಗಳ ಸಂರಕ್ಷಣೆ ಜೊತೆಗೆ ಪಕ್ಷಿಗಳ ಬಗ್ಗೆ ತಿಳುವಳಿಕೆ ಪಡೆಯಲು ಭೂಪಟ ಹೆಚ್ಚು ನೆರವಾಗಲಿದೆ.

 

ಅರಣ್ಯ ನಾಶ, ಕಾಂಕ್ರೀಟ್ ಕಾಡುಗಳು ಬೆಳೆಯುತ್ತಿರುವುದು, ಮೊಬೈಲ್ ಟವರ್ ಹಾಗೂ ಮಾನವನ ಸ್ವಾರ್ಥಕ್ಕೆ ಪಕ್ಷಿಗಳು ವಂಶ ನಾಶದಲ್ಲಿದೆ. ಗುಬ್ಬಚ್ಚಿಯಂತಹ ಹಕ್ಕಿಗಳು ಕಾಣಸಿಗುತ್ತಿಲ್ಲ. ಈ ನಿಟ್ಟಿನಲ್ಲಿ ಪಕ್ಷಿ ಪ್ರೇಮಿಗಳ ಈ ಯೋಜನೆ ಪಕ್ಷಿಗಳ ಸಮಗ್ರ ಅಧ್ಯಯನ, ಸಂರಕ್ಷಣೆ , ಮುಂದಿನ ಪೀಳಿಗೆಗೆ ಅವಕಾಶ ಮಾಡಿಕೊಡಲಿದೆ. ಪಕ್ಷಿ ಭೂಪಟ ಹಕ್ಕಿಗಳ ಕಲರವ ಪಕ್ಷಿ ಪ್ರೇಮಿಗಳ ಮುಂದಿಡಲಿದೆ.

 

See also  ಕಾನನದ ಅಜ್ಞಾತ ಜಲಧಾರೆ ಹಾಲೇರಿ ಫಾಲ್ಸ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು