ಆಧುನಿಕತೆಯ ಹೆಸರಿನಲ್ಲಿ ನಾವು ಬಳಸುತ್ತಿರುವ ಎಷ್ಟೋ ವಿಷಯಗಳು ಹಿಂದಿನವರು ನೀಡಿದ ಬಳುವಳಿ. ಟೆಕ್ನಾಲಜಿ ಬೆಳೆದಿದೆ, ಕೃತಕವಾಗಿ ಏನನ್ನು ಬೇಕಾದರೂ ಮಾಡಬಲ್ಲೇವೂ ಎನ್ನುವ. ಆದರೆ ಯಾವ ಆಧುನಿಕ ಉಪಕರಣಗಳು ಇಲ್ಲದೆ, ಪ್ರಕೃತಿ ಸಹಜವಾಗಿ ಸಿಗುವ ವಸ್ತುಗಳನ್ನೇ ಬಳಸಿ ಹಲವಾರು ಅಚ್ಚರಿ ಮೂಡಿಸುವಂತಹ ಕಟ್ಟಡಗಳನ್ನು ಶತಮಾನಗಳ ಹಿಂದೆಯೇ ನಿರ್ಮಿಸಿದ್ದಾರೆ. ಹಾಗೂ ಅದು ಇಂದಿಗೂ ನಶಿಸದೆ ನಮ್ಮೆದುರು ಅಂದಿನ ಕೌಶಲ್ಯಕ್ಕೆ ಸಾಕ್ಷಿಯಾಗಿ ನಿಂತಿದೆ.
ಮಹಮದ್ ಆದಿಲ್ ಶಾ 1656ರಲ್ಲಿ ಕಟ್ಟಿಸಿದ ವಿಶ್ವದ ಎರಡನೇ ವಿಸ್ಮಿತ ಕಟ್ಟಡ ಗೋಲ ಗುಮ್ಮಟ. ಇದರಲ್ಲಿ ಅಚ್ಚರಿ ಮೂಡಿಸುವಂತಹ ವಾಸ್ತುಶಿಲ್ಪವಿದೆ. ಒಂದು ಸಣ್ಣ ಪಿಸುಮಾತೂ ಏಳು ಬಾರಿ ಪ್ರತಿಧ್ವನಿಸುತ್ತದೆ. ವಿರುದ್ದ ದಿಕ್ಕಿನಲ್ಲಿರುವ ಗೋಡೆಗಳ ಬಳಿ ನಿಂತು ಮಾತನಾಡಿದರೆ ಪಕ್ಕದಲ್ಲೇ ಮಾತನಾಡಿದ ಹಾಗೆ ಕೇಳುತ್ತದೆ. ಯಾವೂದೇ ಒಂದು ಪಿಲ್ಲರ್ ನ ಸಹಾಯ ಇಲ್ಲದೆ ಆ ಗುಮ್ಮಟ ಶತಮಾನಗಳಿಂದಲೇ ನಿಂತಿದೆ. ಇವೆಲ್ಲದರ ಮಧ್ಯೆ ನನಗೆ ಆಸಕ್ತಿ ಹುಟ್ಟಿಸಿದ ವಿಷಯ, ಆ ಕಟ್ಟಡದೊಳಗೆ ಮಾತ್ರ ಇದ್ದ ತಂಪು ವಾತಾವರಣ.
ಇಂದು ನಾವೂ ಬಿಸಿಲಿನ ದಾಹದಿಂದ ತಪ್ಪಿಸಿಕೊಳ್ಳಲು ಫ್ಯಾನ್, ಏಸಿ, ಕೂಲರ್ ಮುಂತಾದವುಗಳನ್ನು ಬಳಸುತ್ತೇವೆ. ಇವೆಲ್ಲವೂ ಪ್ರಕೃತಿಗೆ ಹಾಗೂ ಮನುಷ್ಯನ ಆರೋಗ್ಯದ ಮೇಲೆ ಒಂದಲ್ಲಾ ಒಂದು ರೀತಿಯ ಹಾನಿಯನ್ನು ಮಾಡುತ್ತದೆ. ಆದರೆ ಯಾರಿಗೂ ಯಾವ ಹಾನಿಯೂ ಆಗದೆ ಇಡೀ ಕಟ್ಟಡವನ್ನು ತಂಪಾಗಿರಿಸುವ ವಿಧಾನ ಅಲ್ಲಿ ನೋಡಿದೆ. ಆದು ತುಂಬಾ ಸುಲಭವಾಗಿ, ಯಾವ ಉಪಕರಣವೂ ಇಲ್ಲದೆ.
ಗೋಲ ಗುಮ್ಮಟ 50 ಮೀ. ಸುತ್ತಳತೆಯನ್ನು ಹೊಂದಿರುವ ಕಲ್ಲಿನ ಈ ಕಟ್ಟಡವು ಭೂಗತ ವ್ಯವಸ್ಥೆಯನ್ನು ಹೊಂದಿದೆ. ಹಾಗೂ ಅದಕ್ಕೆ ಹೋಗಲು ಬಾಗಿಲು ಮತ್ತು ಗಾಳಿಗಾಗಿ ಕಿಟಕಿಗಳೂ ಇವೆ. ಈ ಕಿಟಕಿಗಳಿಂದ ನುಸುಳುವ ಗಾಳಿ ಕಲ್ಲಿನ ಪ್ರಭಾವದಿಂದ ತಂಪಾಗಿ ಗುಮ್ಮಟದ ಒಳಗಿನ ತಳದಲ್ಲಿ ಮಾಡಿರುವ ಕಿಂಡುಗಳಿಂದ ಮೇಲೆ ಬರುತ್ತದೆ. ಇದರಿಂದ ಇಡೀ ಕಟ್ಟಡ ತಂಪಾಗಿರುತ್ತದೆ. ಹಾಗೂ ಯಾರೀಗೂ ಹಾನಿಯೂ ಆಗುವುದಿಲ್ಲ.
ಇದನ್ನು ನೋಡಿದಾಗ ನನಗನಿಸಿದ್ದು ಹಿಂದಿನವರ ಕೌಶಲ್ಯದ ಎದುರು ಇಂದಿನವರು ಏನೂ ಅಲ್ಲ. ಅವರ ಹಲವಾರು ಕೆಲಸಗಳ ಮೂಲವನ್ನು ಇಳಿಯಲೂ ಇಂದೂ ಆಗಿಲ್ಲ ಮತ್ತು ಅವುಗಳನ್ನು ಮರುಕಳಿಸಲೂ ಸಾಧ್ಯವಾಗಿಲ್ಲ.