News Kannada
Thursday, October 06 2022

ನುಡಿಚಿತ್ರ

ಹಿರಿಯರ ಅಂತರರಾಷ್ಟ್ರೀಯ ದಿನ 2020: ಹಿರಿಯರನ್ನು ಗೌರವಿಸಲು ಕಲಿಯೋಣ - 1 min read

Photo Credit :

ಹಿರಿಯರ ಅಂತರರಾಷ್ಟ್ರೀಯ ದಿನ 2020: ಹಿರಿಯರನ್ನು ಗೌರವಿಸಲು ಕಲಿಯೋಣ

ವಯಸ್ಸಾದವರ ಅಂತರರಾಷ್ಟ್ರೀಯ ದಿನವನ್ನು ಪ್ರತಿವರ್ಷ ಅಕ್ಟೋಬರ್ 1 ರಂದು ಆಚರಿಸಲಾಗುತ್ತದೆ. ವಯಸ್ಸಾದ ಜನರ ಯೋಗಕ್ಷೇಮ ಮತ್ತು ಅಗತ್ಯತೆಗಳ ಬಗ್ಗೆ ಗಮನಹರಿಸಲು ಮತ್ತು ಜಾಗೃತಿ ಮೂಡಿಸಲು ವಿಶ್ವಸಂಸ್ಥೆಯು ಡಿಸೆಂಬರ್ 14, 1990ರಂದು ಸಾಮಾನ್ಯ ಸಭೆಯಲ್ಲಿ ಅಕ್ಟೋಬರ್ 1 ಅನ್ನು ಅಂತರರಾಷ್ಟ್ರೀಯ ಹಿರಿಯರ ದಿನವಾಗಿ ಸ್ಥಾಪಿಸಲು ಹಾಗೂ ರೆಸಲ್ಯೂಶನ್ 45/106 ರಲ್ಲಿ ದಾಖಲಿಸಲಾಯಿತು.

ತಜ್ಞರ ಪ್ರಕಾರ, ಈ ವರ್ಷ ಹಿರಿಯ ನಾಗರಿಕರು ಕೊರೋನಾ ವೈರಸ್ ನಿಂದ ಹೆಚ್ಚು ಹಾನಿಗೊಳಗಾಗಿದ್ದಾರೆ. ಯಾಕೆಂದರೆ ಅವರು ಹೆಚ್ಚು ದುರ್ಬಲರಾಗಿದ್ದಾರೆ. ವಯಸ್ಸಾದ ಜನರ ಮಾನಸಿಕ ಆರೋಗ್ಯ ಸಮಸ್ಯೆಗಳು ಮತ್ತು ಒಂಟಿತನಕ್ಕೆ ವಿಶೇಷ ಗಮನ ಬೇಕು ಎಂದು ಹೇಳುತ್ತಿದ್ದಾರೆ.

2019ರ ಸರ್ವೆಯ ಪ್ರಕಾರ ವಿಶ್ವದಾದ್ಯಂತ 65 ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ 703 ಮಿಲಿಯನ್ ಜನರು ಇದ್ದರು. ಇದು 2019 ರಲ್ಲಿ 11ರಲ್ಲಿ ಒಬ್ಬರಿಂದ ಹಿರಿಯರು ಸಂಖ್ಯೆ, ಹಾಗೂ 2050ರ ಹೊತ್ತಿಗೆ ವಿಶ್ವಾದ್ಯಂತ ಆರು ಜನರಲ್ಲಿ ಒಬ್ಬರು ಅಂದರೆ 65 (16%) ಕ್ಕಿಂತ ಹೆಚ್ಚಾಗಲಿದೆ.

ಪಾಲಿಸಿ-ಪೋಷಿಸಿದ ಪೋಷಕರನ್ನು ಅಥವಾ ಮನೆಯ ಹಿರಿಯರ ಭಾವನೆಗಳಿಗೆ ಬೆಲೆಕೊಡದೆ ವೃದ್ಧಾಶ್ರಮದಲ್ಲಿ ಬಿಡುವುದು ವಾಡಿಕೆಯಾಗಿದೆ. ಇದೇ ಕಾರಣದಿಂದಾಗಿ ವೃದ್ಧಾಶ್ರಮಗಳ ಹಾಗೂ ಅನಾಥಾಶ್ರಮ ಸಂಖ್ಯೆ ದಿನೇದಿನೇ ಹೆಚ್ಚುತ್ತಿದ್ದು, ಭಾವನೆಗಳ ಮೌಲ್ಯ ಕಡಿಮೆಯಾಗುತ್ತಿದೆ.

ಸಂಸ್ಕೃತಿ ಹಾಗೂ ಸಂಪ್ರದಾಯಗಳ ಸೇತುವೆಯಂತಿರುವ ಹಳೆ ತಲೆಮಾರುಗಳು ವೃದ್ಧಾಶ್ರಮ ಸೇರುತ್ತಿರುವುದು ಆತಂಕದಾಯಕವಾಗಿದ್ದು, ಮುಂಬರುವ ದಿನಗಳಲ್ಲಿ ಇದು ಬಹುದೊಡ್ಡ ಆತಂಕಕಾರಿ ವಿಷಯವಾಗಿ ಪರಿವರ್ತನೆಯಾಗಬಹುದು ಎನ್ನಲಾಗುತ್ತಿದೆ.

ಯುಎನ್ ಸೆಕ್ರೆಟರಿ ಜನರಲ್ ಆಂಟೋನಿಯೊ ಗುಟೆರೆಸ್ ಅವರ ಪ್ರಕಾರ, “ಕೋವಿಡ-19 ಸಾಂಕ್ರಾಮಿಕವು ಪ್ರಪಂಚದಾದ್ಯಂತದ ವೃದ್ಧರಿಗೆ ಹೇಳಲಾಗದ ಭಯ ಮತ್ತು ಸಂಕಟವನ್ನು ಉಂಟುಮಾಡುತ್ತಿದೆ. ಅದರ ತಕ್ಷಣದ ಆರೋಗ್ಯದ ಪ್ರಭಾವದ ಹೊರತಾಗಿ, ಸಾಂಕ್ರಾಮಿಕ ರೋಗವು ವಯಸ್ಸಾದವರನ್ನು ಬಡತನ, ತಾರತಮ್ಯ ಮತ್ತು ಪ್ರತ್ಯೇಕತೆಯೂ ಹೆಚ್ಚಿನ ಅಪಾಯಕ್ಕೆ ದೂಡುತ್ತಿದೆ. ಇದು ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ವಯಸ್ಸಾದವರ ಮೇಲೆ ವಿಶೇಷವಾಗಿ ವಿನಾಶಕಾರಿ ಪರಿಣಾಮ ಬೀರುವ ಸಾಧ್ಯತೆಯಿದೆ ” ಎಂದಿದ್ದಾರೆ.

ವಯಸ್ಕರನ್ನು ಗೌರವಿಸುವುದು ಹಾಗೂ ಅವರೊಂದಿಗೆಒಳ್ಳೆಯ ರೀತಿಯಲ್ಲಿ ನಡೆದುಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಇದೇ ನಿಟ್ಟಿನಲ್ಲಿ ಈ ವರ್ಷ ಅಂದರೆ 2020ರ ಆಶೆಯ ವಯಸ್ಸು ಹಾಗೂ ವಯಸ್ಕರನ್ನು ನಾವು ಹೇಗೆ ಪರಿಗಣಿಸುತ್ತೇವೆ ಎಂದಾಗಿದೆ.

See also  ಹೊಸ ರೂಪದಲ್ಲಿ ಎಲ್ಲರ ಮನಗೆದ್ದ ಹಳೆ ಶೈಲಿಯ ಉಡುಪು ಲೆಹೆಂಗ ಸೀರಿಯಲ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು