News Kannada
Wednesday, October 05 2022

ನುಡಿಚಿತ್ರ

ಮುಂಬೈ ದಾಳಿಯ ಕರಾಳತೆಗೆ ಇಂದಿಗೆ 12 ವರ್ಷ - 1 min read

Photo Credit :

ಮುಂಬೈ ದಾಳಿಯ ಕರಾಳತೆಗೆ ಇಂದಿಗೆ 12 ವರ್ಷ

ಮುಂಬೈ: ಮುಂಬೈ ಮೇಲೆ ಭಯೋತ್ಪಾದಕರು ದಾಳಿ ಮಾಡಿ ಇಂದಿಗೆ 12 ವರ್ಷಗಳು ಕಳೆದಿವೆ. 26/11ರ ಭೀಕರ ದಾಳಿ ವೇಳೆ 166 ಮಂದಿ ಬಲಿಯಾದವರಿಗೆ ದೇಶದ ರಾಜಕೀಯ ಮುಖಂಡರು ಮತ್ತು ಸಾರ್ವಜನಿಕರು ಗೌರವ ನಮನವನ್ನು ಸಲ್ಲಿಸುತ್ತಿದ್ದಾರೆ.

2008 ನವೆಂಬರ್ 26ರಂದು ಪಾಕಿಸ್ತಾನದ ಉಗ್ರರು ಮುಂಬೈ ಮೇಲೆ ನಡೆಸಿದ ಭೀಕರ ದಾಳಿಯು ಸುಮಾರು ನಾಲ್ಕು ದಿನಗಳ ಕಾಲ ಮುಂದುವರೆದಿತ್ತು. ಈ ದಾಳಿಯಲ್ಲಿ 166ಮಂದಿ ಸಾವನ್ನಪ್ಪಿ, 300ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು.

ಹುತಾತ್ಮರಾದವರಿಗೆ ನಮನ ಸಲ್ಲಿಸಿ ಟ್ವೀಟ್ ಮಾಡಿದ ಕೇಂದ್ರ ಸಚಿವ ಪಿಯೂಷ್ ಗೋಯಲ್, ‘ದೇಶಕ್ಕಾಗಿ ಎಲ್ಲವನ್ನು ತ್ಯಾಗ ಮಾಡಿದ್ದಕ್ಕಾಗಿ ಭದ್ರತಾ ಪಡೆಗಳಿಗೆ ಕೃತಜ್ಞರಾಗಿರಬೇಕು’ ಎಂದು ಬರೆದುಕೊಂಡಿದ್ದಾರೆ.

ಕೇಂದ್ರ ರಸ್ತೆ ಮತ್ತು ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಸಂತಾಪ ಸೂಚಿಸಿದ್ದು, ಭಯೋತ್ಪಾದಕರ ದಾಳಿಯಲ್ಲಿ ಹುತಾತ್ಮರಾದವರಿಗೆ ಗೌರವದ ನಮನಗಳು. ಭದ್ರತಾ ಪಡೆಗಳ ತ್ಯಾಗಕ್ಕೆ ನಾವೆಲ್ಲ ಚಿರಖುಣಿಗಳು ಎಂದು ನಿತಿನ್ ಗಡ್ಕರಿ ಅವರು ಟ್ವೀಟ್ ಮಾಡಿದ್ದಾರೆ.

ನವೆಂಬರ್ 26ರಂದು ಪಾಕಿಸ್ತಾನದಿಂದ ಸಮುದ್ರ ಮಾರ್ಗದ ಮೂಲಕ ಭಾರತಕ್ಕೆ ಪ್ರವೇಶವನ್ನು ಪಡೆದಿದ್ದ ಲಷ್ಕರ್-ಎ-ತೊಯ್ಬಾ ಸಂಘಟನೆಯು ಮುಂಬೈ ನಗರದಾದ್ಯಂತ ಬಂದೂಕು ಹಾಗೂ ಬಾಂಬ್ ದಾಳಿಯನ್ನು ನಡೆಸಿತ್ತು.

ಕಗ್ಗತ್ತಲೆಯಲ್ಲಿ ಮುಂಬೈ ನಗರವನ್ನು ಪ್ರವೇಶಿಸಿದ ಭಯೋತ್ಪಾದಕರು ಮೊದಲು ಛತ್ರಪತಿ ಶಿವಾಜಿ ಟರ್ಮಿನಲ್ ರೈಲ್ವೆ ನಿಲ್ದಾಣದಲ್ಲಿ ಅಜ್ಮಲ್ ಅಮೀರ್ ಕಸಬ್ ಮತ್ತು ಇಸ್ಮಾಯಿಲ್ ಖಾನ್ ದಾಳಿ ನಡೆಸಿದರು. ಈ ದಾಳಿಯಲ್ಲಿ 58 ಜನರು ಸಾವನ್ನಪ್ಪಿದ್ದರೆ 100ಕ್ಕೂ ಹೆಚ್ಚಿನ ಜನರಿಗೆ ಗಾಯಗಳಾಗಿದ್ದವು. ಇದಾದ ನಂತರ ಮುಂಬೈನ ಕ್ಯಾಮ ಆಸ್ಪತ್ರೆಗೆ ದಾಳಿ ಮಾಡಲು ಪ್ರಯತ್ನಿಸಿದ್ದರು. ಆದರೆ ಅಲ್ಲಿನ ಸಿಬ್ಬಂದಿಯ ಜಾಗರೂಕತೆಯಿಂದ ಬಹುದೊಡ್ಡ ದುರಂತವೊಂದು ತಪ್ಪಿತ್ತು. ಇವರು ಆಸ್ಪತ್ರೆಯಿಂದ ಹೊರ ಬರುತ್ತಿದ್ದಂತೆ ಭಯೋತ್ಪಾದನಾ ನಿಗ್ರಹ ದಳದ ಹೇಮಂತ್ ಕರ್ಕರೆ ಸೇರಿದಂತೆ 6 ಜನ ಪೊಲೀಸ್ ಅಧಿಕಾರಿಗಳನ್ನು ಕೊಂದು ವಿಕೃತಿ ಮೆರೆದಿದ್ದರು.

ಮುಂದಿನ ದಾಳಿಯನ್ನು ನಾರಿಮನ್ ಹೌಸ್ ನಲ್ಲಿ ಮಾಡಿ 5 ಇಸ್ರೇಲ್‌ನ ನಾಗರಿಕರು ಸೇರಿದಂತೆ 6 ಜನರನ್ನು ಕೊಂದು ಹಾಕಿದರು. ಮುಂದಿನ ದಾಳಿಯನ್ನು ಪ್ರತಿಷ್ಠಿತ ತಾಜ್ ಹೋಟೆಲ್ ಮೇಲೆ ಮಾಡಲು ಹೊಂಚು ಹಾಕಿಕೊಂಡಿದ್ದರು. ಅದಕ್ಕೂ ಮೊದಲು ಅವರು ಲಿಯೋ ಫೋಲ್ಡ್ ಕೆಫೆಯಲ್ಲಿ ದಾಳಿಯನ್ನು ನಡೆಸಿದ್ದರು. ನಂತರ ಹೋಟೆಲ್ ಮೇಲೆ ದಾಳಿ ಮಾಡಿ 31 ಜನರನ್ನು ತಮ್ಮ ಬಂದೂಕಿನಿಂದ ಕೊಂದಿದ್ದರು. ನಂತರ ಪ್ರಸಿದ್ಧ ಒಬೇರಾಯಿ ಹೋಟೆಲ್ ಮೇಲೆ ದಾಳಿ ನಡೆಸಿ 30 ಜನರನ್ನ ಕೊಂದಿದ್ದರು. ನಂತರ ರಾಷ್ಟ್ರೀಯ ಭದ್ರತಾ ಪಡೆಯು ಮುಂಬೈನ ತಾಜ್ ಹೋಟೆಲ್ ನನ್ನನ್ನು ಭದ್ರಪಡಿಸಿದ ನಂತರ ನವೆಂಬರ್ 29ರಂದು ದಾಳಿಯೂ ಕೊನೆಗೊಂಡಿತ್ತು.

ರಾಷ್ಟ್ರೀಯ ಭದ್ರತಾ ಸಿಬ್ಬಂದಿಯು ಭಯೋತ್ಪಾದಕರನ್ನು ಹೊಡೆದುರುಳಿಸುವ ಹೊತ್ತಿಗೆ 160 ಜನರು ಅಸುನೀಗಿದ್ದರು. ಈ ದಾಳಿಯಲ್ಲಿ 9 ಜನ ಭಯೋತ್ಪಾದಕರು ಸಾವನಪ್ಪಿದರೆ ಅಜ್ಮಲ್ ಅಮೀರ್ ಕಸಬ್ ಸೆರೆಸಿಕ್ಕಿದ್ದ. ಇವನನ್ನು 2012 ರ ಪುಣೆಯ ಯರವಾಡ ಜೈಲಿನಲ್ಲಿ ಗಲ್ಲಿಗೆ ಹಾಕಲಾಯಿತು.

See also  ಕೊಡಗಿನ ಹೆಬ್ಬಾಗಿಲಲ್ಲಿವೆ ಸುಂದರ ಪ್ರವಾಸಿ ತಾಣಗಳು

ಈ ಭಯೋತ್ಪಾದಕರ ದಾಳಿಯಲ್ಲಿ ಜಮಾತ್-ಉದ್ ಮುಖ್ಯಸ್ಥ ಮತ್ತು ಜಾಗತಿಕ ಭಯೋತ್ಪಾದಕ ಸಾಕಷ್ಟು ಸಾಕ್ಷಿಗಳಿವೆ ಎಂದು ಸಿಐಎ ಮಾಜಿ ನಿರ್ದೇಶಕ ಡೇವಿಡ್ ಹೋವೆಲ್ 2018ರ ಜನವರಿಯಲ್ಲಿ ತಿಳಿಸಿದ್ದರು. ಆಫ್ಘಾನಿಸ್ತಾನದ ಮಾಜಿ ಅಧ್ಯಕ್ಷ ಹಮೀದ್ ಕರ್ಜೈ ಅವರು ಮುಂಬೈ ಭಯೋತ್ಪಾದಕರ ದಾಳಿಗೆ ಸಾಕಷ್ಟು ಸಾಕ್ಷಿಗಳಿವೆ ಇದರ ಬಗ್ಗೆ ಎಲ್ಲರಿಗೂ ಗೊತ್ತು ಎಂಬ ಮಾಹಿತಿಯನ್ನು ನೀಡಿದರು.

2008ರ ಮುಂಬೈ ಮೇಲಿನ ಭಯೋತ್ಪಾದಕ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನದ ಸಂಬಂಧಗಳು ಮಾತ್ರ ಉದ್ವಿಗ್ನವಾಗಿದೆ. ಇದಾದ ನಂತರ 2016 ಮತ್ತು 2019 ರಲ್ಲಿ ನಡೆದ ಉರಿ ಮತ್ತು ಪುಲ್ವಾಮಾ ದಾಳಿಯಿಂದಾಗಿ ಅನೇಕ ಸೈನಿಕರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಈ ದಾಳಿಯ ನಂತರದಲ್ಲಿ ಸರ್ಕಾರವು ಎನ್ ಎಸ್ ಜಿ ಕಮಾಂಡೋಗಳನ್ನು ದೇಶದ ಮಹಾನಗರಗಳಲ್ಲಿ ನಿಯೋಜನೆ ಮಾಡಿತ್ತು. ಜೊತೆಗೆ ಭಯೋತ್ಪಾದಕರ ದಾಳಿಗೆ ವೇಗವಾಗಿ ಪ್ರತಿಕ್ರಿಯಿಸಲು ಎನ್.ಎಸ್.ಜಿ ಹಬ್‍ಗಳನ್ನು ಕೂಡಾ ಪ್ರಾರಂಭ ಮಾಡಿತು. ಆದರೆ 2008ರ ಮುಂಬೈ ದಾಳಿ ಮಾತ್ರ ಇತಿಹಾಸದ ಪುಟದಲ್ಲಿ ಒಂದು ಕಪ್ಪು ಚುಕ್ಕೆಯಾಗಿದ್ದಂತು ಸುಳ್ಳಲ್ಲ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

204
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು