News Kannada
Monday, November 28 2022

ನುಡಿಚಿತ್ರ

ಪ್ರಾಣಿಗಳ ಮುಗ್ಧತೆಯನ್ನು ಗೌರವಿಸೋಣ - 1 min read

Photo Credit :

ಪ್ರಾಣಿಗಳ ಮುಗ್ಧತೆಯನ್ನು ಗೌರವಿಸೋಣ

ಮುಗ್ದತೆ ಎಂದಾಗ ಮೊದಲು ನೆನಪಾಗುವುದು ಮುದ್ದಾದ ಮಕ್ಕಳ ಮುಖ. ಅದೇ ಮುಗ್ಧತೆಯ ಇನ್ನೊಂದು ರೂಪ ಮಾತೆ ಅರಿಯದ ಮುಗ್ಧ ಜೀವಿಗಳು. ಮನೆಯಲ್ಲಿ ಸಾಕಿರುವ ಅದೆಷ್ಟೋ ಪ್ರಾಣಿಗಳು ಸಾಹುಕಾರನಿಗಾಗಿ ಪ್ರತಿನಿತ್ಯ ದುಡಿಯುತ್ತಿರುತ್ತವೆ. ಆದರೆ ಅವು ಎಂದು ಅವಕ್ಕೆ ಪ್ರತಿಫಲವನ್ನು ಬಯಸುವುದಿಲ್ಲ. ಬದಲಾಗಿ ಅವುಗಳತ್ತ ಕೊಂಚ ಪ್ರೀತಿ ತೋರಿದರು ಅದನ್ನೇ ಸಂತೋಷದಿಂದ ಸ್ವೀಕರಿಸುತ್ತಾವೆ.

 

ತನ್ನನ್ನು ಸಾಕಿದ ಯಜಮಾನ ಎಷ್ಟೇ ಬೈದರು, ಹೊಡೆದರು, ದೂರ ತಳ್ಳಿದರು ಯಾವುದನ್ನು ಮನಸ್ಸಿನಲ್ಲಿ ಇರಿಸಿಕೊಳ್ಳದೆ ಮತ್ತೆ ಯಜಮಾನ ಹತ್ತಿರ ಸುಳಿದಾಡುತ್ತವೆ. ತನ್ನ ಸಾಹುಕಾರನ ಮೊಗದಲ್ಲಿ ಆಗುವ ಬದಲಾವಣೆಗಳನ್ನು ಅವು ಗಮನಿಸುತ್ತವೆ. ಅದಕ್ಕೆ ಸಾಕ್ಷಿ ಮನೆಯಲ್ಲಿ ಯಾವುದಾದರೂ ಜಗಳವಾದರೆ ಅಥವಾ ದುಡ್ಡು ಮಾತುಗಳು ಕೇಳಿ ಬಂದಾಗ ಅವು ಗಲಿಬಿಲಿಗೊಂಡು ಓಡಾಡುತ್ತಿರುತ್ತವೆ. ಅಷ್ಟೇ ಅಲ್ಲದೆ ಮನೆಯ ಜನ ಬೇಜಾರಿನಲ್ಲಿ ಕುಳಿತಾಗ ಬಂದು ಸಂತೈಸುವಂತೆ ಪಕ್ಕದಲ್ಲಿ ಕೂತು ತನ್ನ ಕಾಳಜಿಯನ್ನು ತೋರುತ್ತವೆ. ಆ ಮುಗ್ಧ ಪ್ರಾಣಿಗಳಿಗೆ ಮಾತು ಬರೆದಿದ್ದರು ಮೌನವಾಗಿಯೇ ತನ್ನ ಭಾವನೆಗಳನ್ನು ತೋರ್ಪಡಿಸುವಲ್ಲಿ ಎಂದು ಹಿಂದೇಟು ಹಾಕುವುದಿಲ್ಲ. ತನ್ನ ಇರುವಿಕೆಯ ಮೂಲಕ ತನ್ನವರ ಮನದ ದುಗುಡವನ್ನು ದೂರಮಾಡಲು ನನ್ನಿಂದಾದ ಸಹಾಯವನ್ನು ಮಾಡುತ್ತವೆ.

 

ಇನ್ನು ಹೇಳುವುದಾದರೆ ಅದೆಷ್ಟು ಬಾರಿ ಮನುಷ್ಯರು ತಮ್ಮ ನೋವನ್ನು ಇಂತಹ ಮುಗ್ಧ ಪ್ರಾಣಿಗಳ ಮುಖ ನೋಡಿ ಮರೆಯುವುದು ಉಂಟು. ಕರು, ನಾಯಿಮರಿ, ಬೆಕ್ಕಿನ ಮರಿ, ಅಥವಾ ಯಾವುದೇ ಮರಿಗಳನ್ನು ನೋಡಿದ ಕ್ಷಣ ಒಮ್ಮೆ ಎಂಥವರ ಮುಖದಲ್ಲೂ ಅವರಿಗೆ ಅರಿವಿಲ್ಲದಂತೆ ಒಂದು ಚಿಕ್ಕ ಕಿರುನಗೆ ಮೂಡುತ್ತದೆ. ಇದು ಪ್ರಾಣಿಗಳ ಮುಗ್ಧತೆಗೆ ಹಿಡಿದ ಕೈಗನ್ನಡಿ.

 

ಆದರೆ ಇಂದು ಇಂತಹ ಪ್ರಾಣಿಗಳಿಗೆ ರಕ್ಷಣೆ ಇಲ್ಲದಂತಾಗಿದೆ. ಮನುಷ್ಯನ ಮಾನಸಿಕತೆಯ ಆನಂದಕ್ಕಾಗಿ ಅವುಗಳನ್ನು ಹಿಂಸಾತ್ಮಕವಾಗಿ ಬಳಸಿಕೊಳ್ಳುತ್ತಿರುವುದು ಎದ್ದು ಕಾಣುತ್ತಿದೆ. ಅದಕ್ಕೆ ಚಿಕ್ಕ ಉದಾಹರಣೆ ಎಂದರೆ ರಸ್ತೆಯ ಬದಿಯಲ್ಲಿ ಓಡಾಡುವ ಸಂದರ್ಭದಲ್ಲಿ ನಾಯಿಮರಿಗಳನ್ನು ಅಥವಾ ಯಾವುದೇ ಪ್ರಾಣಿಗಳನ್ನು ಕಂಡರೆ ಒಮ್ಮೆ ಕಲ್ಲು ಹೊಡೆದು ಅದನ್ನು ಕೂಗಿಸಿ ಸಂತೋಷಪಡುವ ಜನರು ಇಂದು ನಮ್ಮ ಮಧ್ಯೆ ಇತರೆ. ಇಂತಹ ಮನೋಭಾವ ಎಲ್ಲೆಡೆ ಬೆಳೆದರೆ ಅದು ಮನುಷ್ಯತ್ವದ ಅಂತ್ಯ ಇರಬಹುದು ಎಂದು ಅನಿಸುತ್ತದೆ. ಹಾಗಾಗಿಯೇ ಮನುಷ್ಯ ಇಂದು ಮುಗ್ಧ ಮನಸ್ಸಿನವನಾಗಿ ಉಳಿದಿಲ್ಲ. ಕೊನೆಪಕ್ಷ ಆ ಮುಗ್ಧ ಪ್ರಾಣಿಗಳ ಮನಸ್ಸುಗಳನ್ನು ಆದರೂ ಗೌರವಿಸೋಣ.

See also  ಮೈಸೂರಲ್ಲಿ ಪ್ರವಾಸಿಗರ ಸೆಳೆಯುವ ವ್ಯಾಕ್ಸ್ ಮ್ಯೂಸಿಯಂ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

205

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು