ಕತ್ತಲೆ ರಾಜ್ಯದ ರಾಜ ಕಂಟಕ ಹಾಗೂ ರಾಣಿ ಕುರೂಪಿ. ಹೆಸರೆ ಹೇಳುವಂತೆ ಜನರು ಹಾಗೂ ಅವರ ಜಗತ್ತು ಅಂದಕಾರದಲ್ಲಿ ಮುಳುಗಿತ್ತು. ಭಯದ ಛಾಯೆ ಅವರ ಬೆನ್ನು ಬಿಡದೆ ಕಾಡುತ್ತಿತ್ತು. ಹಗಲು ಇರುಳಿನ ಪರೀವೆ ಅವರಿಗೆ ಇರಲಿಲ್ಲ. ಎಷ್ಟೋ ಮಂದಿ ಬೆಳಕು ಹೇಗಿರುತ್ತದೆ ಎಂಬುದನ್ನೇ ಮರೆತು ಹೋಗಿದ್ದರು. ನಿರಾಸÉ, ನಿರುತ್ಸಾಹ, ಹತಾಶೆ ಅವರ ಪಾಲಿಗೆ ಕಟ್ಟಿಟ್ಟ ಬುತ್ತಿ ಎಂದು ರಾಜ-ರಾಣಿ ಸಹಿತ ಎಲ್ಲರು ಒಪ್ಪಿ ಅಪ್ಪಿ ನಡಿಯುತ್ತಿದ್ದರು. ಇಂತಹಾ ಕತ್ತಲ ಜಗತ್ತಿಗೆ ಬೆಳಕಿನ ಬಿಂದುವನ್ನು ಹೊತ್ತು ತಂದವಳು ರಾಜ ಪುತ್ರಿ ಚುಕ್ಕಿ. ಕಡುಗತ್ತಲ ಮಧ್ಯೆ, ಅಂದರಾದ ಅನುಜರ ಆಶಾಕಿರಣದಳತೆ ಅವತರಿಸಿದಳು.
ಚುಕ್ಕಿ ಹಾಕಿದ ಪ್ರತೀ ಹೆಜ್ಜೆಗೂ ಅಪಶಕುನ ಎಂದರು ಅವಳÀ ಜನರು. ನಡೆದ ಪ್ರತಿ ಹಾದಿಗೂ ನಿಂದಿಸಿದರು ಅವಳ ಒಡಹುಟ್ಟಿದವರು. ಹತ್ತಿದ ಪ್ರತಿ ಮೆಟ್ಟಿಲನ್ನು ಕಂಡು ಆಡಿಕೊಂಡರು ಅವಳ ಜೊತೆ ಆಡುತ್ತಿದ್ದವರು. ಅದರೆ ಅದನ್ನಾವುದು ಲೆಕ್ಕೆಸದೇ ಹೆಜ್ಜೆ ಹಾಕಿದಳು ತನ್ನ ನೋಟಬಿದ್ದತ್ತ. ಆ ಅಂದನಗರಿಯಲ್ಲಿ ಆಶಾಕಿರಣವನ್ನು ಹೊತ್ತು ಬಿದ್ದಳು ಬೆಂಕಿಯಲ್ಲಿ. ತಿಂದಳು ಸುತ್ತಿಗೆಯ ಏಟ, ನರಳಾಡಿದಳು ನೋವನ್ನು ಸಹಿಸಲಾರದೆ. ರಾಜ ಪಲ್ಲಕ್ಕಿಯಲ್ಲಿ ಬರಬೇಕಾದವಳು ಕಲ್ಲು ಮುಳ್ಳುಗಳ ಹಾದಿಯಲ್ಲಿ ಹೆಜ್ಜೆ ಹಾಕಿದಳು. ತನ್ನವರೆನಿಸಿಕೊಂಡವರನೆಲ್ಲರನ್ನೂ ಕಳೆದುಕೊಂಡಳು. ಏಕಾಂಗಿಯಾಗಿ ಕಾಣದ ಹಾದಿಯಲ್ಲಿ ಹುಡುಕುತ್ತಾ ಹೊರಟಳು. ಅವಳ ಹುಡುಕಾಟದ ಅಂತ್ಯ ಎಂದು ಎಂಬ ಪ್ರಶ್ನೆಗೆ ಉತ್ತರ ಅವಳ ಬಳಿಯೂ ಇರಲಿಲ್ಲ. ಆದರೆ ಅವಳ ಗುರಿ ಮಾತ್ರ ಸ್ಪಷ್ಟ ಅದುವೆ ಕಳೆದು ಹೋದ ಬೆಳಕನ್ನು ಮರಳಿ ಅವಳ ರಾಜ್ಯಕ್ಕೆ ತರುವುದು. ಆದರೆ ಅವಳಿಗೆ ಇದ್ದ ದೊಡ್ಡ ಸವಾಲು ಎಂದರೆ ಬೆಳಕು ಹೇಗಿರುತ್ತದೇ ಎಂದೇ ಅವಳಿಗೆ ತಿಳಿದಿರಲಿಲ್ಲ.
ಸಾವಿರ ಸುತ್ತು ತನ್ನ ರಾಜ್ಯವನ್ನು ತಿರುಗಿದಳು. ಆದರೆ ಎಲ್ಲೂ ಅವಳಿಗೆ ಬೇಕಾದ ಬೆಳಕಿನ ಹಾದಿ ದೊರೆಯಲಿಲ್ಲ. ಆದರೂ ಅವಳಲ್ಲಿನ ಛಲ ಕೊಂಚವೂ ಕಡಿಮೆ ಆಗಲಿಲ್ಲ. ಇವಳ ಹಟವ ಕೆಲವರು ಹೀಯಾಳಿಸಿದರು, ಇನ್ನು ಕೆಲವರು ಹುರಿದುಂಬಿಸಿದರು. ಅವಳ ಹುಮ್ಮಸ್ಸನ್ನು ಕಂಡು ಕೆಲವರು ಹಿಂಬಾಲಿಸಿದರು. ಚುಕ್ಕಿ ತನಗೇ ಅರಿವಿಲ್ಲದಂತೆ ತನ್ನ ರಾಜ್ಯದವರಲ್ಲಿ ಬರವಸೆಯ ಬುನಾದಿ ಹಾಕಿದಳು. ಕಾಣ ಕಾಣುತ್ತಲೇ ಆ ಬುನಾದಿ ಗಟ್ಟಿಯಾದ ಗೋಪುರದ ಗೋಡೆಗಳಿಗೆ ಅಡಿಪಾಯವಾಯಿತು. ಒಂದು ಸುಂದರ ದೇಗುಲ ನಿರ್ಮಾಣವಾಯಿತು. ಕಳೆದು ಹೋದ ಜನರ ಭರವಸೆಗಳು ಮರಳಿ ಬರಲು ಪ್ರಾರಂಭವಾಯಿತು. ಕತ್ತಲೆಯ ಜಗದಲ್ಲಿ ಮಂಪರು ಬೆಳಕು ಹಾಗೆ ನಿದಾನವಾಗಿ ಸ್ಪಷ್ಟ ಬೆಳಕು ಪಸರಿಸಲು ಪ್ರಾರಂಭವಾಯಿತು. ಎಲ್ಲೆಲ್ಲೂ ಸಂತಸದ ನಗು ಕೇಳಲಾರಂಭಿಸಿತು. ಆದರೆ ಚುಕ್ಕಿ ಮಾತ್ರ ತನ್ನ ಹುಡುಕಾಟವನ್ನು ನಿಲ್ಲಿಸಿರಲಿಲ್ಲ. ಈಗ ಅವಳ ಹುಡುಕಾಟ ಬೆಳಕು ಎಲ್ಲಿಂದ ಬಂತು ಎಂದು.
ಎಂದೂ ಮುಗಿಯದ ಚುಕ್ಕಿಯ ಹುಡುಕಾಟಕ್ಕೆ ಕೊನೆ ಹಾಡಬೇಕಿರುವವರು ನಾವೆ. ಏಕೆಂದರೆ ಆ ಚುಕ್ಕಿ ಬೇರೆ ಯಾರು ಅಲ್ಲ ನಮ್ಮ ಮನಸ್ಸು. ಅಲ್ಲಿ ಇರುವ ಜನರು, ರಾಜ-ರಾಣಿ ಎಲ್ಲರೂ ನಮ್ಮಲ್ಲಿ ಮೂಡುವ ಆಲೋಚನೆ ಹಾಗೂ ನಮ್ಮ ಕಿವಿಗೆ ಬೀಳುವ ಸಮಯಕ್ಕೆ ತಕ್ಕಂತೆ ಬದಲಾಗುವ ಮಾತುಗಳು. ಈ ಎಲ್ಲದರ ಮದ್ಯೆ ಗೆಲ್ಲಬೇಕು ಎಂಬ ಛಲವನ್ನು ಹೊತ್ತು ಮನಸ್ಸು ಒಮ್ಮೆ ಹೊರಟರೆ ಏನನ್ನು ಬೇಕಾದರೂ ಸಾಧಿಸುತ್ತದೆ. ಆದರೆ ಒಂದನ್ನು ಅರಿಯದೇ ಹೋಗುತ್ತದೆ ಅದು ತಾನೂ ಹುಡುಕುತ್ತಿರುವ ಬೆಳಕು ಅಂದರೆ ಪ್ರಶ್ನೆಗೆ ಉತ್ತರ ತಾನೇ. ಆ ಬೆಳಕು ತನ್ನಲೇ ಇದೆ ಎಂದು.