ಸಾಧನೆಯದಾರಿ ನೀ ತೊರಿಸಿದೆ, ಕಷ್ಟವ ಮೆಟ್ಟಿ ನಿಲ್ಲುವಂತೆ ಮಾಡಿ, ಯಾರ ಮಾತಿಗೂ ಕಿವಿ ಗೂಡದೆ, ಇಂದು ಕಷ್ಟ ಪಟ್ಟರೆ ಮುಂದೊAದು ದಿನ ಪ್ರತಿಫಲ ಖಂಡಿತ ದೊರೆಯುತ್ತದೆ ಎಂದು ಧೈರ್ಯ ತುಂಬಿದೆ. ನಿನ್ನ ದಾರಿಯಲ್ಲಿ ಅನೇಕ ಕಷ್ಟ ನೋವನ್ನು ಅನುಭವಿಸಿ ನನಗೆ ಸ್ಪೂರ್ತಿಯಾಗಿ ನಿಂತು, ನನ್ನದೆ ಲೋಕದಲ್ಲಿ ಜೀವನ ರೂಪಿಸುದಕ್ಕೆ ನೀನೆ ಸ್ಪೂರ್ತಿ ಅಪ್ಪ.
ಅದೊಂದು ದಿನ ತಾನು ಕೇಳಿದನ್ನು ಯಾವುದೇ ಅಪಸ್ವರ ಇಲ್ಲದೆ ಕೊಡಿಸುವವರು, ಎಷ್ಟೇ ಕಷ್ಟ ಬಂದರೂ ಮುನ್ನುಗ್ಗುವ ಸ್ವಭಾವ, ತನ್ನವರಿಗಾಗಿ ತನ್ನ ಎಲ್ಲ ಕಷ್ಟವನ್ನು ಲೆಕ್ಕಿಸದೆ, ಬಿಸಿಲು, ಮಳೆ ,ಗಾಳಿ ಎಂಬ ಪರಿವೆ ಇಲ್ಲದೆ ದುಡಿಯುವ ಮನಸ್ಥಿತಿ, ತನಗೆ ಧರಿಸಲು ಒಳ್ಳೆಯ ಬಟ್ಟೆ ಇರದಿದ್ದರು ಪರವಾಗಿಲ್ಲ, ತನ್ನ ಮನೆಯವರಿಗೆ ಕಿಂಚಿತು ನೋವನ್ನು ಕೊಡದೆ ಅವರ ಮನದಲ್ಲಿ ದೇವರಾಗಿ ಇದ್ದು, ತನ್ನವರ ಕಷ್ಟವನ್ನು ತನ್ನ ಕಷ್ಟವೆಂದು ಭಾವಿಸಿ, ಅವರ ನೋವಲ್ಲಿ ತಾನು ಪಾಲು ಪಡೆದು, ಮನದೊಳಗೆ ದುಃಖವನ್ನು ಪಡುತ್ತ, ಹೊರನೋಟಕ್ಕೆ ಮುಖದಲ್ಲಿ ಮಂದಹಾಸವನ್ನು ಬೀರುತ್ತಾ ಮನೆಯವರಿಗೆ ಧೈರ್ಯವನ್ನು ತುಂಬುತ್ತಾ ಬಂದವರು ನೀವು ಅಪ್ಪ.
ತನ್ನವರನ್ನು ಕಂಡಾಗ ಮನದಲ್ಲಿ ಪ್ರೀತಿಯ ಸುಧೆ ಹರಿದಿದ್ದರು ಅದನ್ನು ವ್ಯಕ್ತಪಡಿಸಲಾಗದೆ ಗಂಭೀರನAತೆ ನಟನೆ ಮಾಡುತ್ತಾ ಯಾವಗಾಲೂ ಮುಖವನ್ನು ಊದಿಸಿಕೊಂಡಿರುವವರು ಅವರು. ತನ್ನ ಖುಷಿಯನ್ನೆಲ್ಲ ಅದುಮಿಸಿ ಮನೆಯವರ ಖುಷಿಗೆ ಸ್ಫೂರ್ತಿಯಾಗುವರು. ಆದರೆ ಯಾರಿಗೂ ಕಾಣದ ತಂದೆ ಪ್ರೀತಿಯು ಅಮೂಲ್ಯವಾದುದು. ಸಾಮಾನ್ಯವಾಗಿ ಮಗಳಿಗೆ ತಂದೆ ಪ್ರೀತಿ ಅಮೃತಧಾರೆಯಾಗಿರುತ್ತದೆ. ಮನೆಯ ಭಾರವನ್ನು ತನ್ನ ಹೆಗಲ ಮೇಲೆ ಹೊತ್ತಿಕೊಂಡು ಸುತ್ತಾಡುತ್ತಾನೆ. ಹಗಲಿಡಿ ದುಡಿದರು ಸಾಲದೆ, ರಾತ್ರಿ ಕೆಲಸಕ್ಕೂ ತಾನು ಸಿದ್ದನೆಂದೂ ಯಾವಾಗಲೂ ದುಡಿಯುವುದರಲ್ಲೇ ತನ್ನಜೀವನ ಎಂಬ ಮನಸ್ಥಿತಿಯೊಂದಿಗೆ ಜೀವನ ಶೈಲಿಯನ್ನು ರೂಪಿಸಿರುವ ದೇವರ ಪ್ರತಿರೂಪ ತಂದೆ ಎಂದರೆ ತಪ್ಪಾಗಲಾರದು.
ಹಗಲಿಡಿ ಈ ರೀತಿಯಾಗಿ ಮನೆಯವರಿಗಾಗೆ ಶ್ರಮಿಸಿದರೆ, ರಾತ್ರಿಯಾಗುತ್ತಿದಂತೆ ತನ್ನವರ ಕುಷಿಗಾಗಿ ನಟಿಸಲು ಶುರು ಮಾಡಿ ಬಿಡುತ್ತಾರೆ. ನನಗೆ ಹಸಿವಿಲ್ಲ ನೀವು ಊಟ ಮಾಡಿ ಎಂದು ತಾನು ಎಷ್ಟೇ ಹಸಿದರೂ ತನ್ನವರು ಖಾಲಿ ಹೊಟ್ಟೆಯಲ್ಲಿ ಮಲಗುವರು ಎಂದು ತಾನು ಹಸಿವನ್ನು ಕಟ್ಟಿ ಬೇಗನೆ ಮಲಗಿ ಬೀಡುವ ತ್ಯಾಗಮಯಿಯನ್ನು ಬೇರೆಲ್ಲೂ ಕಾಣಲು ಸಾಧ್ಯವಿಲ್ಲ.
ಎಷ್ಟೇ ಕಷ್ಟ ನೋವು ದುಮ್ಮಾನಗಳಿದ್ದರು, ತನ್ನವರ ಖುಷಿಗೆ ಕೊರತೆಯನ್ನು ಉಂಟುಮಾಡದೆ, ಸದಾ ಮುಖದಲ್ಲಿ ಮಂದಹಾಸವನ್ನು ಬೀರುತ್ತಾ, ಎಷ್ಟೇ ಕಷ್ಟ ಬಂದರು ಅದನ್ನು ಎದುರಿಸಿ ನಿಂತು , ಉತ್ತಮ ಜೀವನವನ್ನು ಸಂತೋಷದಿAದ ಸಾಗಿಸುವಂತೆ ನಮ್ಮನ್ನು ರೂಪಿಸಿ, ನಾವು ನಿಂತ ನೀರಾಗದೆ, ಯಾವಾಗಲೂ ಹರಿಯುತ್ತಾ ನದಿಯ ನೀರಿನಂತೆ ಕಸ ಕಡ್ಡಿಗಳನ್ನು ಹೊತ್ತುಕೊಂಡು ನಮ್ಮ ಗುರಿಯನ್ನು ಸೇರಬೇಕು ಎಂದು ತಿಳಿಸಿಕೊಟ್ಟ ಮಹಾತ್ಮ ನೀವು. ಎಂದು ನೇರವಾಗಿ ತೋರದ ನಮ್ಮ ಮನಸ್ಸಿನಲ್ಲೇ ಹುದುಗಿಸಿಟ್ಟುಕೊಂಡಿರುವ ನಮ್ಮ ಮೇಲಿನ ಅಘಾದ ಪ್ರೀತಿಗೆ ನಾನು ಯಾವತ್ತಿಗೂ ಧನ್ಯ ಅಪ್ಪ…