ದೂರದ ಪ್ರಯಾಣ ಮನಸ್ಸಿಗೆ ಹಿತ ನೀಡುವುದು ಸಹಜ. ನಾನು ಅದೆಷ್ಟೋ ಸಲ ಅಂದುಕೊಂಡಿದ್ದೆ ಎಲ್ಲದ್ರೂ ಕಾಣದ ಊರಿನ ಪರಿಚಯ ಮಾಡಬೇಕು ಅಂತ. ಅದೊಂದು ದಿನ ದೂರದ ಊರಿಗೆ ಪಯಣ ಮಾಡಲೇಬೇಕೆಂದು ಕುಂದಾಪುರದ ಬಸ್ಸನ್ನೇರಿದೆ. ಸೀಟ್‌ಗಾಗಿ ಕಣ್ಣು ಅತ್ತಿತ್ತ ಮಿಟುಕಿಸಿದಾಗ ಕಂಡಿದ್ದು ಇಬ್ಬರು ಕುಳಿತುಕೊಳ್ಳುವ ಸ್ಥಳ. ದೇವರಿಗೆ ಮನದಲ್ಲಿಯೇ ಥಾಂಕ್ಸ್ ಹೇಳಿ ಹೋಗಿ ಕೂಳಿತುಕೊಂಡೆ. ಕಿಟಕಿಯ ಬದಿಯ ಅಂಚಿಗೆ ಮುಖ ಮಾಡಿ ತಂಪಾದ ಗಾಳಿಗೆ ಮೊಗ ಒಡ್ಡಿದೆ.
ನಾನೊಬ್ಬಳೇ ಇದ್ದುದರಿಂದ ತುಂಬಾ ಬೋರ್ ಅನಿಸತೊಡಗಿತು. ಅದಕ್ಕೆ ಮೊಬೈಲ್‌ನಲ್ಲಿ ಸಾಂಗ್ ಪ್ಲೇ ಮಾಡಿ ಇಯರ್ ಪೋನ್ ಹಾಕಿ ಕೂತೆ. ಸಾಂಗ್ ಕೇಳುತ್ತಾ ತೂಕಾಡಿಕೆಯು ಜಾಸ್ತಿಯಾಗತೊಡಗಿತು. ನಿದ್ದೆ ಮಾಡಿದರೆ ನನ್ನ ಸ್ಟಾಪ್ ಬಂದಾಗ ಇಳಿದುಕೊಳ್ಳಲು ಗೊತ್ತಾಗಲಿಕ್ಕಿಲ್ಲ ಎಂದೆನಿಸಿತು. ಅದರಿಂದ ಇಯರ್ ಪೋನ್‌ನನ್ನು ವಿಧಿ ಇಲ್ಲದೆ ಬ್ಯಾಗ್‌ನೊಳಗೆ ತುರುಕಿಸಿ ಕಿಟಕಿಯ ಅಂಚಿಗೆ ಮುಖಮಾಡಿದೆ. ಅಷ್ಟರಲ್ಲಿ ದಾರಿಯೂದಕ್ಕು ಒಂದೊಂದೇ ನೇತು ಹಾಕಿದ ಬೋರ್ಡ್ಗಳು ಕಾಣತೊಡಗಿತು. ನಾನು ಅದನ್ನು ಓದುದರಲ್ಲೇ ಮಗ್ನಳಾಗಿದ್ದೆ. ಮತ್ತೆ ವಾಸ್ತವಕ್ಕೆ ಬಂದದ್ದು ನನ್ನ ಕಿವಿಯೊಳಗೆ ಹೊಕ್ಕ ಆ ಮಾತಿನಿಂದ. ತಿರುಗಿ ನೋಡಿದರೆ ನನ್ನ ಪಕ್ಕದಲ್ಲಿ ಅಜ್ಜಿ ಕೂತಿದ್ದರೂ. ಅಷ್ಟರವರೆಗೂ ಒಂಟಿಯಾಗಿ ಕೂತಿದ್ದ ನನಗೆ ಅವರನ್ನು ಕಂಡು ಖುಷಿಯಾಯಿತು. ಅವರ ಜೊತೆ ಹರಟೆ ಹೊಡೆಯಲು ಶುರುಮಾಡಿದೆ. ಇಬ್ಬರು ಮಾತನಾಡುತ್ತಾ ಅದೆಷ್ಟೋ ದೂರ ಕ್ರಮಿಸಿದ್ದೆವು. ಅಷ್ಟರಲ್ಲಿ ಅಜ್ಜಿ ಇಳಿದುಕೊಳ್ಳುವ ಸ್ಟಾಪ್ ಬಂದೆ ಬಿಡ್ತು. ಅಜ್ಜಿ ನನ್ನ ತಲೆ ಸವರಿ ಬರ್ತಿನೀ ಮಗಳೇ ನಿನಗೆ ಒಳ್ಳೆದಾಗಲಿ ಎಂದು ಶುಭ ಆರೈಸುತ್ತಾ ಬಸ್ಸಿನಿಂದ ಕೆಳಗಿಳಿದರು. ಅವರು ಹೋದ ದಾರಿಯನ್ನು ನೋಡುತ್ತಾ ಕೊಂಚ ಬೇಜಾರಿನಲ್ಲಿ ಮತ್ತಾದೇ ಒಂಟಿ ಪಯಣದಡೆಗೆ ಮುಖಮಾಡಿದೆ.
ನಾನು ತಲುಪಬೇಕಾದ ಸ್ಥಳವನ್ನು ಮತ್ತೊಮ್ಮೆ ಗೂಗಲ್ ಮ್ಯಾಪ್‌ನಲ್ಲಿ ಕ್ರಮಿಸಬೇಕಾದ ದೂರ ಖಚಿತಪಡಿಸಿಕೊಂಡೆ. ಇನ್ನು ಸಾಕಷ್ಟು ದೂರವಿದ್ದ ಕಾರಣ ಮತ್ತೆ ಇಯರ್ ಪೋನ್ ಹಾಕಿ ಮೊಬೈಲ್‌ಲ್ಲಿ ಸಾಂಗ್ ಹಾಕಿದ ಕೆಲವೇ ಹೊತ್ತಿನಲ್ಲಿ ನಿದ್ರೆಗೆ ಜಾರಿದೆ. ಅಷ್ಟರಲ್ಲಿ ಒಬ್ಬ ಹಾಂಡ್ಸಮ್ ಹುಡುಗ ಬಸ್ಸನೇರಿ ಬಂದು ನನ್ನ ಪಕ್ಕದಲ್ಲಿ ಕುಳಿತ. ಆತ ಕೂತದ್ದನ್ನು ಕಂಡು ಲಡ್ಡು ಬಂದು ಬಾಯಿಗೆ ಬಿದ್ದಂತೆ ಖುಷಿಯಾಗತೊಡಗಿತು. ಅವನ ಜೊತೆ ಮಾತನಾಡಬೇಕೆಂದು ಕೊಂಡೆ ಆದರೆ ಮಾತನಾಡಲು ಧೈರ್ಯ ಸಾಕಾಗಲಿಲ್ಲ. ನನ್ನ ಮನದಲ್ಲಿ ಆತನ ಬಗ್ಗೆ ಯೋಚನೆಗಳು ವಾಯು ವೇಗದಲ್ಲಿ ಓಡಾಡತೊಡಗಿತ್ತು. ಕಾರಣ ಆ ಮುಖದಲ್ಲಿದ್ದ ಆಕರ್ಷಣೀಯ ಕಳೆ. ಆತನಿಗೆ ಗರ್ಲ್ ಫ್ರೆಂಡ್ ಇರಬಹುದೇ? ಅವನು ಎಲ್ಲಿಗೆ ಹೊರಟಿರಬಹುದು ಹೀಗೆ ಹತ್ತು ಹಲವು ಪ್ರಶ್ನೆಗಳು ಕಾಡತೊಡಗಿತು. ಆ ತೊಳಲಾಟದಿಂದ ಹೊರಬರಲು ಧೈರ್ಯ ಮಾಡಿ ಮಾತನಾಡಲು ಮುಂದಾದೆ. ಅವನತ್ತ ಮುಖ ಮಾಡಿ ಸಣ್ಣಗೆ ಮುಗುಳು ನಗೆ ಬೀರಿದೆ. ಅಷ್ಟೇ ವೇಗದಲ್ಲಿ ಅತ್ತ ಕಡೆಯಿಂದಲೂ ನಗು ತೇಲಿ ಬಂತು. ಆ ನಗು ನೋಡಿ ಫುಲ್ ಫಿದಾ ಆಗೋದೆ. ನಂತರ ಆ ಕಡೆಯಿಂದ ಯಾವುದೇ ಮಾತುಗಳು ಬರಲಿಲ್ಲ. ನಾನೇ ಮಾತನಾಡಲು ಮುಂದಾದೆ. ಹಾಯ್ ಎಂದು ನನ್ನ ಹೆಸರು ಹೇಳಿಕೊಂಡೆ. ಆತನು ತನ್ನ ಹೆಸರು ಹೇಳಿದ ಇಬ್ಬರೂ ಹ್ಯಾಂಡ್ ಶೇಕ್ ಮಾಡಿದೆವು. ನಂತರ ಅವನ ಜೊತೆ ಮಾತನಾಡುತ್ತಿದ್ದಂತೆಯೇ ಒಂದೊಂದೇ ವಿಷಯಗಳು ತಿಳಿಯತೊಡಗಿತು. ಆತನಿಗೆ ಮದುವೆಯಾಗಿಲ್ಲ ಎಂಬ ಖುಷಿ ಒಂದು ಕಡೆಯಾದರೆ ಆತನಿಗೆ ಗರ್ಲ್ ಫ್ರೆಂಡ್ ಇರಬಹುದೇ ಎಂಬ ಚಿಂತೆ ಇನ್ನೊಂದೆಡೆ ಕಾಡತೊಡಗಿತು. ಎನೇ ಆಗಲಿ ಅವನ ಹತ್ತಿರ ಕೇಳೇ ಬಿಡೋಣವೆಂದು ಮತ್ತೆ ಅವನತ್ತ ಮುಖ ಮಾಡಿದೆ. ಅಷ್ಟರಲ್ಲಿ ಆತ ಯಾಕೋ ಚಡಪಡಿಸುತ್ತಿದ್ದಾನೆ ಎಂದೆನಿಸತೊಡಗಿತು. ನಾನೇ ಕೇಳಿ ಬಿಟ್ಟೆ ಏನಾದ್ರೂ ಹೇಳೊಕಿದ್ಯಾ ಅಂತ. ಆತ ಏನಿಲ್ಲವೆಂದು ಸಮ್ಮನಾಗಿಬಿಟ್ಟ. ನಾನು ಪರವಾಗಿಲ್ಲ ಹೇಳಿ ಅಂದೆ ಆತನಿಂದ ಯಾವುದೇ ಪ್ರತಿಕ್ರಿಯೆ ಇಲ್ಲದೆ ಇರುವುದನ್ನು ಕಂಡು ಸಮ್ಮನಾಗಿಬಿಟ್ಟೆ. ಮತ್ತೆ ಆತನೇ ನನ್ನ ಕರೆದು ನಿನಗೆ ಯಾರದ್ರೂ ಬಾಯ್‌ಫ್ರೆಂಡ್ ಇದ್ದನಾ ಎಂದು ಕೇಳಿದ. ಒಂದು ಕ್ಷಣ ಭಯವಾಯಿತು. ಯಾಕೆ ಎಂದು ಕೇಳಿದೆ ಆತ ಸುಮ್ಮನೇ ಕೇಳಬೇಕೆನಿಸಿತು ಎಂದ. ಅಷ್ಟರಲ್ಲಿ ನನ್ನ ಕೆಲಸ ಸುಲಭವಾಗಿತ್ತು. ಆತನೇ ನನ್ನ ಬಳಿ ಕೇಳಿದ ಮೇಲೆ, ನಾನು ಕೇಳುದರಲ್ಲಿ ತಪ್ಪಿಲ್ಲವೆಂದೆನಿಸಿ ನಿಮಗೆ ಯಾರು ಗರ್ಲ್ಫ್ರೆಂಡ್ ಇಲ್ವಾ? ಅಂತ ಆತನಲ್ಲಿ ಕೇಳಿದೆ. ಆಗ ಅತ್ತ ಕಡೆಯಿಂದ ನನಗೆ ಯಾರು ಗರ್ಲ್ಫ್ರೆಂಡ್ ಇಲ್ಲ ಎಂಬ ಮಾತು ಕೇಳಿಸಿತು. ಆ ಮಾತು ಕೇಳಿದ ಕ್ಷಣ ಅತಿಯಾದ ಖುಷಿಯಿಂದ ಜೋರಾಗಿ ಹೌದಾ! ಎಂದು ಪ್ರತಿಕ್ರಯಿಸಿದೆ. ಅಷ್ಟರಲ್ಲಿ ಎನಾಯಿತು ಅನ್ನೋ ಧ್ವನಿ ಕೇಳಿಸಿತು. ನಾನು ಕಣ್ಣು ಬಿಟ್ಟು ನೋಡಿದಾಗ ನನ್ನ ಪಕ್ಕದಲ್ಲಿ ವಯಸ್ಸಾದ ವ್ಯಕ್ತಿ ಕೂತಿದ್ದರು. ಆಗ ಭಾಸವಾಯಿತು ಇಷ್ಟರವರೆಗೆ ನಾನು ಕನಸಿನ ಜೊತೆ ಪ್ರಯಾಣ ಮಾಡಿದ್ದೆ ಎಂದು. ಇದಾವುದು ನಿಜ ಅಲ್ಲ ಎಂದು ಗೊತ್ತಾದಾಗ ಮನಸ್ಸು ಮರುಕಪಟ್ಟಿತು. ಬೇಜಾರು, ನಗು ಎರಡು ನನ್ನ ಮುಖದಲ್ಲಿ ಸಮವಾಗಿ ಪಾಲುದಾರವಾಗಿತ್ತು.ಈ ನನ್ನ ಕನಸಿನ ಪಯಣವು ಕಾಣದ ಲೋಕವನ್ನು ಸೃಷ್ಟಿಸಿತ್ತು.