News Kannada
Wednesday, September 27 2023
ನುಡಿಚಿತ್ರ

ಪ್ಲಾಸ್ಟಿಕ್ ಮುಕ್ತ ಭಾರತಕ್ಕೆ ಎಲ್ಲರೂ ಒಂದಾಗಿ ಶ್ರಮಿಸೋಣ

Let's all work together for a plastic-free India
Photo Credit : Twitter

ಕೋವಿಡ್ ಹೆಸರಲ್ಲಿ ಅನಗತ್ಯವಾಗಿ ಭಯ ಹುಟ್ಟಿಸಿ, ಎರಡು ವರ್ಷ ಎಲ್ಲರ ಮುಖಕ್ಕೆ ಪ್ಲಾಸ್ಟಿಕ್, ಮಾಸ್ಕ್ ಹಾಕಿಸಿ, ಆತ್ತ ಕೋವಿಡ್ ಸೋಂಕನ್ನು ನಿಯಂತ್ರಿಸಲಾಗದೆ ಇತ್ತ ಜನರ ಜೀವನವನ್ನು ಹಾಳುಗೆಡವಲಾಯಿತು. ಈ ಅವೈಜ್ಞಾನಿಕ ಕೆಲಸಗಳ ದುಷ್ಪರಿಣಾಮಗಳು ಒಂದೊಂದಾಗಿ ಅನಾವರಣಗುಳ್ಳುತ್ತಿವೆ. ಮನೆಯೊಳಗೆ ಇದ್ದು ಹೊರಗಿನ ತಿನುಸುಗಳನ್ನು ತರಿಸುವುದು ಹೆಚ್ಚಾಗಿ ಪ್ಲಾಸ್ಟಿಕ್ ಬಳಕೆ ಏರಿದೆ, ಸೋಂಕಿನ ನಿಯಂತ್ರಣದ ನೆಪದಲ್ಲಿ ಮಾಸ್ಕ್, ಮುಖ ಕವಚ ಇತ್ಯಾದಿಗಳಿಗೆ ಬಳಕೆಯಾಗಿ ಪರಿಸರವನ್ನು ಹಾಳುಗೆಡವಿರುವ ಪ್ಲಾಸ್ಟಿಕ್ ಪ್ರಮಾಣ ಹೆಚ್ಚಿದೆ.

2022ರ ಹೊತ್ತಿಗೆ ಭಾರತವನ್ನು ಮರುಬಳಕೆಯಾಗದ ಪ್ಲಾಸ್ಟಿಕ್‌ನಿಂದ ಮುಕ್ತಗೊಳಿಸಲು ಕೇಂದ್ರ ಸರಕಾರ ಹೊಸ ಹೆಜ್ಜೆಗಳನ್ನಿಟ್ಟಿದೆ. ಅದಕ್ಕಾಗಿ 2021ರ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣಾ ನಿಯಮಾವಳಿಗಳಲ್ಲಿ ತಿದ್ದುಪಡಿ ತರಲಾಗಿದೆ. ಈ ಮೂಲಕ, 2019ರ ವಿಶ್ವಸಂಸ್ಥೆಯ ಪರಿಸರ ಸಂರಕ್ಷಣಾ ಮಹಾ ಸಮ್ಮೇಳನದಲ್ಲಿ ಭಾರತ, ವಿಶ್ವಸಮುದಾಯಕ್ಕೆ ನೀಡಿದ್ದ ಆಶ್ವಾಸನೆ ಅನುಷ್ಠಾನಕ್ಕೆ ಸಜ್ಜಾಗಿದೆ.

ಪ್ಲಾಸ್ಟಿಕ್ ಬ್ಯಾಗ್‌ಗೆ 2 ಹಂತದ ನಿರ್ಬಂಧ :
ಬ್ಯಾಗ್‌ಗಳ ದಪ್ಪ 50 ಮೈಕ್ರಾನ್ಸ್ ಗಿಂತ 75 ಮೈಕ್ರಾನ್‌ಗೆ ಏರಿಕೆ ಈ ಮಾರ್ಗಸೂಚಿಗಳು ಎರಡು ಹಂತಗಳಲ್ಲಿ ಜಾರಿಗೊಳ್ಳಲಿದೆ. ಮೊದಲ ಹಂತದಲ್ಲಿ, ಮಾರುಕಟ್ಟೆಯಲ್ಲಿ ಲಭ್ಯವಿರುವ 50 ಮೈಕ್ರಾನ್ಸ್ನಷ್ಟು ದಪ್ಪವಾಗಿರುವ ಪ್ಲಾಸ್ಟಿಕ್ ಬ್ಯಾಗುಗಳು ಇದೇ ಸೆ.30ರ ನಂತರ ನಿಷೇಧಕ್ಕೊಳಗಾಗಲಿವೆ. ಈ ಬ್ಯಾಗ್‌ಗಳ ಕನಿಷ್ಠ ದಪ್ಪವನ್ನು 75 ಮೈಕ್ರಾನ್ಸ್ಗಳಿಗೆ ಹೆಚ್ಚಿಸಲಾಗಿದ್ದು, ಅ.1ರಿಂದ ಆ ಗುಣಮಟ್ಟದ ಬ್ಯಾಗುಗಳಿಗೆ ಮಾತ್ರ ಮಾರುಕಟ್ಟೆಯಲ್ಲಿ ಮಾರಾಟಬೇಕೆಂದು ಆದೇಶಿಸಲಾಗಿದೆ.

ಮುಂದಿನ ವರ್ಷದಿಂದ 120 ಮೈಕ್ರಾನ್ಸ್ ಬ್ಯಾಗುಗಳಿಗೆ ಆದ್ಯತೆ :
75 ಮೈಕ್ರಾನ್ಸ್ ದಪ್ಪದ ಬ್ಯಾಗುಗಳ ಮಾರಾಟಕ್ಕೆ 2022ರ ಡಿ.31ರವರೆಗೆ ಮಾತ್ರವೇ ಅವಕಾಶವಿದ್ದು, 2023ರ ಜ. 1ರಿಂದ ಕೇವಲ 120 ಮೈಕ್ರಾನ್ಸ್ಗಳುಳ್ಳ ಬ್ಯಾಗುಗಳನ್ನೇ ಮಾರಾಟ ಮಾಡುವಂತೆ ಸೂಚಿಸಲಾಗಿದೆ.

50-75 ಮೈಕ್ರಾನ್ಸ್: ಪ್ಲಾಸ್ಟಿಕ್ ಬ್ಯಾಗುಗಳ ದಪ್ಪ 50ರಿಂದ 75 ಮೈಕ್ರಾನ್ಸ್ಗೆ ಏರಿಕೆ

120 ಮೈಕ್ರಾನ್ಸ್: 2023ರಿಂದ ಕಡ್ಡಾಯವಾಗಲಿರುವ ಪ್ಲಾಸ್ಟಿಕ್ ಬ್ಯಾಗ್‌ಗಳ ದಪ್ಪ

100 ಮೈಕ್ರಾನ್ಸ್: 2022ರ ಜು. 1ರಿಂದ ನಿಷೇಧಕ್ಕೊಳಗಾಗಲಿರುವ ಪಿವಿಸಿ ಪೋಸ್ಟರ್‌ಗಳು

ತಿನಿಸುಗಳ ಆಕ್ಸೆಸ್ಸರಿಗೆ ನಿಷೇಧ:
ಒಮ್ಮೆ ಬಳಸಿ ಬಿಸಾಡಬಹುದಾದ ಪ್ಲಾಸ್ಟಿಕ್ ಪರಿಕರಗಳ ಮಾರಾಟಕ್ಕೆ 2022ರ ಜು. 1ರಿಂದ ಸಂಪೂರ್ಣ ನಿಷೇಧ ಹೇರಲಾಗಿದೆ. ಕಿವಿ ಸ್ವಚ್ಛಗೊಳಿಸುವ ಪ್ಲಾಸ್ಟಿಕ್ ಸ್ಟಿಕ್ ಬಡ್ಸ್, ಬಲೂನುಗಳಿಗೆ ಕಟ್ಟುವ ಪ್ಲಾಸ್ಟಿಕ್ ಸ್ಟಿಕ್, ಪ್ಲಾಸ್ಟಿಕ್ ಬಾವುಟ, ಲಾಲಿಪಾಪ್ ಸ್ಟಿಕ್, ಐಸ್‌ಕ್ರೀಮ್ ಪ್ಲಾಸ್ಟಿಕ್ ಸ್ಟಿಕ್, ಅಲಂಕಾರಗಳಿಗಾಗಿ ಬಳಸುವ ಥರ್ಮೋಕೋಲ್ ಮುಂತಾದವು ಸಂಪೂರ್ಣವಾಗಿ ನಿಷೇಧಿಸಲ್ಪಡಲಿವೆ.

ಸಮಾರಂಭಗಳಲ್ಲಿ ಊಟ- ತಿಂಡಿಗಳಿಗೆ ಬಳಸುವ ತೆಳು ಪ್ಲಾಸ್ಟಿಕ್‌ನಿಂದ ತಯಾರಾದ ಪ್ಲೇಟ್, ಲೋಟ, ಫೋರ್ಕ್, ಚಮಚ, ಚಾಕು, ಎಳನೀರು ಸ್ಟ್ರಾ, ಟ್ರೇ, ತಿನಿಸು ಸ್ವೀಟ್ ಪ್ಯಾಕಿಂಗ್‌ಗೆ, ಬಳಸುವ ರ‍್ಯಾಪಿಂಗ್‌ಗೆ ಬಳಸುವ ಹಾಳೆ, ಆಹ್ವಾನ ಪತ್ರಿಕೆ, ಸಿಗರೇಟ್ ಪ್ಯಾಕ್‌ಗಳ ಮೇಲಿನ ಪ್ಲಾಸ್ಟಿಕ್ ರ‍್ಯಾಪರ್ ಹಾಗೂ 100 ಮೈಕ್ರಾನ್ಸ್ಗಿಂತ ಕಡಿಮೆ ಗಾತ್ರದ ಪಿವಿಸಿ ಪೋಸ್ಟರ್‌ಗಳು ಕೂಡ 2022ರ ಜು. 1ರಿಂದ ನಿಷೇಧಿಸಲ್ಪಡಲಿವೆ.

See also  ಗುರುದ್ವಾರದ ಮೇಲೆ ಭಯೋತ್ಪಾದಕ ದಾಳಿ : ಇಬ್ಬರ ಸಾವು, ಏಳುಜನರಿಗೆ ತೀವ್ರ ಗಾಯ

ಪ್ಲಾಸ್ಟಿಕ್ ಅತಿ ಬಳಕೆಯಿಂದ ಮಕ್ಕಳಲ್ಲಿ ಸ್ಥಾನ ಸಂಬಂಧಿ, ಮಹಿಳೆಯರಲ್ಲಿ ಸಂತಾನೋತ್ಪತ್ತಿ ಹಾಗೂ ಪುರುಷರಲ್ಲಿ ಮೂತ್ರ ಸಂಬಂಧಿ ಹಾಗೂ ನಪುಂಸಕತೆ ಸೃಷ್ಟಿಸಿದೆ. ಪ್ಲಾಸ್ಟಿಕ್‌ನಲ್ಲಿ ರಾಸಾಯನಿಕ ಮತ್ತು ವಿಷಯಾದಿ ವಸ್ತುಗಳು ಮಾನವನ ಜೀವಕ್ಕೆ ಅಪಾಯ ಉಂಟು ಮಾಡುತ್ತವೆ. ಕ್ಯಾನ್ಸರ್, ನರ ದೌರ್ಬಲ್ಯ, ನಪುಂಸಕತೆಗೆ ಸೃಷ್ಟಿಸುತ್ತವೆ, ಅಷ್ಟೇ ಅಲ್ಲ ಅಸ್ತಮಾ, ಬೊಜ್ಜು, ಹೃದಯ ಸಂಬಂಧಿ ಸಮಸ್ಯೆ, ಮಧುಮೇಹ, ಕರಳು ಬೇನೆಗೂ ಕಾರಣವಾಗಿದೆ.

ರೂ. 25 ಸಾವಿರ ದಂಡ
ರೂ. 500ರಿಂದ ರೂ. 25 ಸಾವಿರ ತನಕ ದಂಡ ವಿಧಿಸಲು ಸ್ಥಳೀಯಾಡಳಿತ ಸಂಸ್ಥೆಗಳಿಗೆ ಅಧಿಕಾರ ಇದೆ. ಪರಿಸರ ಸಂರಕ್ಷಣೆ ಕಾಯ್ದೆ (184) ಅಡಿಯಲ್ಲಿ 2016ರ ಮಾರ್ಚ್ 11ರಂದು ರಾಜ್ಯ ಸರ್ಕಾರವು ಕೆಲವೊಂದು ವಿಧಗಳ ಪ್ಲಾಸ್ಟಿಕ್ ಬಳಕೆ ನಿಷೇಧಿಸಿ ಅಧಿಸೂಚನೆ ಹೊರಡಿಸಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

4383

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು