News Kannada
Friday, September 29 2023
ಪರಿಸರ

ಮಸಾಲೆಗಳ ರಾಜ ಕಾಳುಮೆಣಸು: ಇಲ್ಲಿದೆ ಕೆಲವು ಮಾಹಿತಿ

The king of spices pepper: Here's some information
Photo Credit : Pixabay

ಪೈಪೆರೇಸಿ ಕುಟುಂಬಕ್ಕೆ ಸೇರಿದ ಕರಿಮೆಣಸು ಅಥವಾ ಕಾಳುಮೆಣಸು ಭಾರತದ ಅತ್ಯಂತ ಉತ್ತಮ ಮಸಾಲೆ ಪದಾರ್ಥಗಳಲ್ಲಿ ಮೊದಲ ಸ್ಥಾನದಲ್ಲಿದೆ. ಪ್ರಪಂಚದಾದ್ಯಂತ ವ್ಯಾಪಕವಾಗಿ ಬಳಸ್ಪಡುವ ಕಾಳು ಮೆಣಸು ಔಷಧದಲ್ಲಿಯೂ ಬಳಸುತ್ತಾರೆ. ಆರಂಭಿಕ ಐತಿಹಾಸಿಕ ಕಾಲದಲ್ಲಿ ಆಗ್ನೇಯ ಏಷ್ಯಾದ ಉಷ್ಣವಲಯದಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ.

ಈ ಕಾಳುಮೆಣಸು ಭಾರತ ಮತ್ತು ಯೂರೋಪ್ ಖಂಡದ ನಡುವೆ ಇಂದು ಉತ್ತಮ ವ್ಯಾಪಾರ ಮಾರ್ಗವಾಗಿ ಕಾರ್ಯನಿರ್ವಹಿಸಿತ್ತು.

ಕಾಳುಮೆಣಸನ್ನು ಹೆಚ್ಚಾಗಿ ಮಿಶ್ರ ಕೃಷಿಯಾಗಿ ಅಡಿಕೆ ಕೃಷಿಯ ಜೊತೆ ಬೆಳೆಸಲಾಗುತ್ತದೆ. ಬಳ್ಳಿಯ ಮೂಲಕ ಬೆಳೆಯುವ ಕಾಳುಮೆಣಸಿಗೆ ಅಡಿಕೆ ಮರವು ಒಂದು ಉತ್ತಮ ಆಧಾರವಾಗಿ ನಿಲ್ಲುತ್ತದೆ. ಇದರಿಂದಾಗಿ ಕಾಳುಮೆಣಸಿನ ಕೃಷಿಗೆ ವಿಶೇಷವಾಗಿ ಚಪ್ಪರದ ಅವಶ್ಯಕತೆ ಇರುವುದಿಲ್ಲ.

ಕಾಳುಮೆಣಸಿನ ಗಿಡದ ರಚನೆ: ಕಾಳುಮೆಣಸಿನ ಗಿಡವು ೩೩ಅಡಿಎತ್ತರ ಬೆಳೆಯುತ್ತದೆ. ಅಗಲವಾದ ಹಸಿರು ಬಣ್ಣದ ಎಲೆಗಳನ್ನು ಹೊಂದಿದ್ದು ಸಣ್ಣ ಹೂಗಳು ಬೆಳೆದು ಪ್ರೌಢಾವಸ್ಥೆಗೆ ಬಂದಾಗ ಹಳದಿ ಕೆಂಪು ಬಣ್ಣಕ್ಕೆ ತಿರುಗುತ್ತವೆ ಇವುಗಳನ್ನು ನಂತರ ಇವುಗಳು ಹಸಿರುಬಣ್ಣಕ್ಕೆ ತಿರುಗುವಾಗ ಇವುಗಳ ಕೊಯ್ಲು ಮಾಡಲಾಗುತ್ತದೆ. ಕೊಯ್ಲು ಮಾಡಿದ ಕಾಳುಮೆಣಸನ್ನು ಅವುಗಳ ತೊಗಟೆಗಳಿಂದ ಬೇರೆ ಮಾಡಿ ಬಿಸಿಲಿನಲ್ಲಿ ಸರಿಯಾಗಿ ಒಣಗಿಸಬೇಕಾಗುತ್ತದೆ. ಸರಿಯಾದ ಬಿಲಿಸಿಲದ್ದಲ್ಲಿ ೪ ರಿಂದ ೫ ಬಿಸಿಲು ಸಾಕಾಗುತ್ತದೆ.

ಈ ಸಸ್ಯಕ್ಕೆ ದೀರ್ಘ ಮಳೆಗಾಲ, ಸಾಕಷ್ಟು ಹೆಚ್ಚಿನ ತಾಪಮಾನ ಮತ್ತು ಉತ್ತಮ ನೆರಳಿನ ಅವಶ್ಯಕತೆ ಬೇಕಾಗುತ್ತದೆ.

ವೈವಿಧ್ಯಮಯ ತಳಿಗಳು: ಕರಿಮೆಣಸು, ಬಿಳಿಮೆಣಸು, ಹಸಿರುಮೆಣಸು, ಕೆಂಪು ಮೆಣಸು, ಪಿಂಕ್ ಪೆಪ್ಪರ್ ಕಾರ್ನ್.

ಮಣ್ಣು ಮತ್ತುಹವಾಮಾನ: ಕಾಳುಮೆಣಸು ಮುಖ್ಯವಾಗಿ ಮಳೆಯಾಶ್ರಿಯ ಬೆಳೆಯಾಗಿ ಬೆಳೆಯಲಾಗುತ್ತೆದೆ. ಇದಕ್ಕೆ ಅಧಿಕ ಆರ್ದ್ರರೆ ಮತ್ತು ಬೆಚ್ಚನೆಯ ವಾತಾವರಣ ಬೇಕಾಗುತ್ತದೆ. ಸಮೃದ್ಧವಾಗಿರುವ ಕಚ್ಚಾಮಣ್ಣಿನಲ್ಲಿ ಉತ್ತಮವಾಗಿ ಬೆಳೆಯಬಹುದು.

ಇಳುವರಿ: ಕಾಳುಮೆಣಸು ಬಳ್ಳಿಗಳು ಸಾಮಾನ್ಯವಾಗಿ ೩ಅಥವಾ ೪ನೇ ವರ್ಷದಿಂದ ಇಳುವರಿಯನ್ನು ಪ್ರಾರಂಭಿಸುತ್ತದೆ. ಹೂಬಿಡುವುದರಿಂದ ಹಿಡಿದು ಹಣ್ಣಾಗುವವರೆಗೂ ೬ ರಿಂದ ೮ ತಿಂಗಳು ಬೇಕುತ್ತದೆ.

ಆರೋಗ್ಯ: ಕಾಳುಮೆಣಸಿನಿಂದ ನಮ್ಮ ದೆಹಕ್ಕೆ ಹಲವಾರು ಪ್ರಯೋಜನಗಳಿವೆ ಈ ಅದ್ಬುತ ಮಸಾಲೆಯ ಕೆಲವು ಉತ್ತಮ ಸಂಗತಿಗಳು ಇಲ್ಲಿವೆ.
• ದೇಹದ ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ
• ಕ್ಯಾನ್ಸರ್ ತಡೆಗಟ್ಟುತ್ತದೆ
• ಕರುಳು ಮತ್ತು ಹೊಟ್ಟೆಯನ್ನು ಸ್ವಚ್ಛಗೊಳಿಸುತ್ತದೆ
• ಮಲಬದ್ದತೆಯನ್ನು ತಡೆಯುತ್ತದೆ
• ಕೆಂಪು ರಕ್ತಕಣಗಳನ್ನು ಉತ್ಪಾದಿಸಲು ಸಹಾಯ ಮಾಡುತ್ತದೆ

ನಮ್ಮ ದೈನಂದಿನ ಆಹಾರದಲ್ಲಿ ಒಂದು ಚಿಕಟಿಕೆ ಕಾಳುಮೆಣಸು ಸೇರಿಸುವುದರಿಂದ ಆರೋಗ್ಯವಾಗಿರಬಹುದು.

See also  ಚಿಕ್ಕಮಗಳೂರು: ಬಿಸಿಲ ಧಗೆ ಆರಂಭವಾಗ್ತಿದ್ದಂತೆ ಮಲೆನಾಡಿನ ಅರಣ್ಯ ಸಂಪತ್ತು ಬೆಂಕಿಗಾಹುತಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

25278

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು