ಜಿಂಗಿಬೆರೇಸಿ ಕುಟುಂಬಕ್ಕೆ ಸೇರಿದ ಶುಂಠಿ ಪರಿಮಳಯುಕ್ತ ಮಸಾಲೆಯಾಗಿದೆ. ಇದು ಪ್ರಮುಖ ವಾಣಿಜ್ಯ ಬೆಳೆಯಾಗಿದ್ದು ಇದನ್ನು ಮಸಾಲೆ ಹಾಗೂ ಔಷಧವಾಗಿ ಬಳಕೆ ಮಾಡಲಾಗುತ್ತದೆ. ಭಾರತದಲ್ಲಿ ಉತ್ಪಾದನೆಯಾಗುವ ಶುಂಠಿಯು ದೇಶೀಯ ಬಳಕೆಗೆ ಹೋಗುತ್ತದೆ ಮತ್ತು ಇದು ಕಡಿಮೆ ಪ್ರಮಾಣದಲ್ಲಿ ರಫ್ತು ಮಾಡಲಾಗುತ್ತದೆ.
ಈ ಶುಂಠಿಯನ್ನು ಹಸಿ ಶುಂಠಿ, ಒಣ ಶುಂಠಿ, ಶುಂಠಿ ಕ್ಯಾಂಡಿ, ಶುಂಠಿ ಬಿಯರ್, ಶುಂಠಿವೈನ್, ಶುಂಠಿ ಎಣ್ಣೆ ಮುಂತಾದ ವಿವಿಧ ರೂಪಗಳಲ್ಲಿ ಮಾರಾಟವಾಗುತ್ತದೆ.
ಹವಾಮಾನ: ಶುಂಠಿ ಬೆಚ್ಚಗಿನ ಆರ್ದ್ರ ವಾತಾವರಣದಲ್ಲಿ ಬೆಳೆಯುತ್ತದೆ. ಇದನ್ನು ಮುಖ್ಯವಾಗಿ ಉಷ್ಣ ವಲಯದಲ್ಲಿ ಸಮುದ್ರ ಮಟ್ಟದಿಂದ ೧೫೦೦ಏಮ್ ಎಸ್ ಎಲ್ ಗಿಂತ ಎತ್ತರದಲ್ಲಿ ಬೆಳೆಯಲಾಗುತ್ತದೆ.
ಇದನ್ನು ಮಳೆಯಾಶ್ರಿತ ಮತ್ತು ನೀರಾವರಿ ಪ್ರದೇಶದಲ್ಲೂ ಬೆಳೆಯುತ್ತದೆ. ಯಶಸ್ವಿ ಬೇಸಾಯಕ್ಕಾಗಿ ಶುಂಠಿಗೆ ಬಿತ್ತನೆಯ ಸಮಯದಲ್ಲಿ ಮಧ್ಯಮ ಮಳೆಯ ಅಗತ್ಯವಿರುತ್ತದೆ. ಕೊಯ್ಲು ಮಾಡಲು ಸುಮಾರು ಒಂದು ತಿಂಗಳ ಮೊದಲು ಶುಷ್ಕ ವಾತಾವರಣವಿರುತ್ತದೆ.
ಮಣ್ಣಿನ ಅವಶ್ಯಕತೆ: ಮರಳು ಅಥವಾ ಜೇಡಿಮಣ್ಣಿನಲ್ಲಿ ಶುಂಠಿ ಉತ್ತಮವಾಗಿ ಬೆಳೆಯುತ್ತದೆ. ಇದು ಒಂದು ಸಮಗ್ರ ಬೆಳೆಯಾಗಿರುವುದರಿಂದ ವರ್ಷದಿಂದ ವರ್ಷಕ್ಕೆ ಅದೇ ಸ್ಥಳದಲ್ಲಿ ಬೆಳೆಸುವುದು ಸೂಕ್ತವಲ್ಲ.ಇದು ಭಾಗಶಹಃ ನೆರಳಿನಲ್ಲಿಚನ್ನಾಗಿ ಬೆಳೆಯುತ್ತದೆ.
ಶುಂಠಿ ಇಳುವರಿ: ಶುಂಠಿ ಬೆಳೆಯು ೮ ರಿಂದ ೧೦ ತಿಂಗಳುಗಳಿಂದ ವಿವಿಧ ಪಕ್ವತೆಯ ಆಧಾರದ ಮೇಲೆ ಕೊಯ್ಲಿಗೆ ಸಿದ್ದವಾಗುತ್ತದೆ. ಸಂಪೂರ್ಣವಾಗಿಬೆಳೆದ ಎಲೆಗಳು ಹಳದಿ ಬಣ್ಣಕ್ಕೆ ತಿರುಗುತ್ತದೆ. ಹಸಿರು ಶುಂಠಿಯನ್ನು ನೀರಿನಲ್ಲಿ ನೆನೆಸಿಡಲಾಗುತ್ತದೆ. ಹರಿತವಾದ ಬಿದಿರಿನ ತುಂಡುಗಳಿಂದ ಶುಂಠಿಯ ಮೇಲ್ಮೈಯನ್ನು ಉಜ್ಜಲಾಗುತ್ತದೆ. ಮತ್ತು ಇವುಗಳನ್ನು ೩- ೪ ದಿನಗಳ ಕಾಲ ಬಿಸಿಲಿನಲ್ಲಿ ಒಣಗಿಸಲಾಗುತ್ತದೆ.
ಆಹಾರ ಪ್ರಯೋಜನಗಳು:
• ಜೀರ್ಣಕ್ರಿಯೆ ಉತ್ತಮ ಗೊಳಿಸಲು ಸಹಾಯ ಮಾಡುತ್ತದೆ
• ರೋಗನಿರೋಧಕ ಶಕ್ತಿಯನ್ನು ಸುಧಾರಿಸುತ್ತದೆ
• ಋತುಚಕ್ರದ ನೋವನ್ನು ನಿವಾರಿಸುತ್ತದೆ
• ಅಜೀರ್ಣವನ್ನು ತಡೆಗಟ್ಟುತ್ತದೆ.
• ಕ್ಯಾನ್ಸರ್‌ನೊಂದಿಗೆ ಹೋರಾಡುತ್ತದೆ
• ತೂಕ ಕಡಿಮೆ ಮಾಡಲು ಸಹಾಯ ಮಾಡುತ್ತದೆ
• ಹೃದಯದ ಕಾಯಿಲೆಯನ್ನು ತಡೆಯುತ್ತದೆ