News Kannada
Monday, December 11 2023
ಸಂಪಾದಕೀಯ

ಅತ್ತ ದರಿ ಇತ್ತ ಪುಲಿ ಜಸ್ಟಿನ್ ಟ್ರುಡೊ ಸ್ಥಿತಿ

trudo
Photo Credit : News Kannada

ಭಾರತ ಕೆನಡಾ ಸಂಬಂಧ ನಿಗಿ ನಿಗಿ ಕೆಂಡದಂತಿದೆ. ಕೆನಡಾದಲ್ಲಿ ಹಿಂದುಗಳ ಖಲಿಸ್ತಾನಿ ಕ್ರಿಮಿಗಳಿಂದ ದಾಳಿಯ ಪ್ರಕರಣಗಳು ಈ ಹಿಂದೆಯೂ ನಡೆಯುತ್ತಿತ್ತು. ಈ ಬಗ್ಗೆ ಭಾರತ ಹಲವಾರು ಸಲ ಎಚ್ಚರಿಕೆ ನೀಡಿತ್ತು. ದೆಹಲಿಯಲ್ಲಿ ನಡೆದ ಜಿ.20 ಸಮಾವೇಶ ಬಳಿಕ ಪ್ರಧಾನಿ ಮೋದಿ ಅವರು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಅವರಲ್ಲಿ ವಿಷಯ ಪ್ರಸ್ತಾಪಿಸಿ ಖಲಿಸ್ತಾನಿ ಉಗ್ರರನ್ನು ಮಟ್ಟಹಾಕುವಂತೆ ಖಡಕ್‌ ಎಚ್ಚರಿಕೆ ನೀಡಿದ್ದರು. ಆದರೆ ಅಲ್ಲಿನ ಪ್ರಧಾನಿ ಟ್ರುಡೊ ಅವರು ತಾನೆ ಏನು ಮಾಡಲು ಸಾಧ್ಯ. ಅವರು ನಡೆಸುತ್ತಿರುವುದೇ ಖಲಿಸ್ತಾನಿ ಹಂಗಿನ ಸರ್ಕಾರ. ಅವರ ಪಕ್ಷದ ಹಲವು ಮುಖಂಡರು ಖಲಿಸ್ತಾನಿ ಉಗ್ರರೊಂದಿಗೆ ನಂಟು ಹೊಂದಿದ್ದು, ಅವರ ನೆರವಿಲ್ಲದೆ. ಅಲ್ಲಿ ಟ್ರುಡೊ ಸರ್ಕಾರ ಮುಂದುವರಿಸುವುದು ಸಾಧ್ಯವೇ ಇಲ್ಲ ಎಂಬ ಸ್ಥಿತಿಯಿದೆ. ಈಗ ಅವರ ಸ್ಥಿತಿ ಅತ್ತ ದರಿ ಇತ್ತ ಪುಲಿ ಎಂಬಂತಾಗಿದೆ. ಈ ನಿಟ್ಟಿನಲ್ಲಿ ಕೆನಡಾ ಭಾರತ ಸಂಬಂಧಗಳ ಬಗ್ಗೆ ಬೆಳಕು ಚೆಲ್ಲುವ ಸಣ್ಣ ಪ್ರಯತ್ನ ಇಲ್ಲಿದೆ.

ಜಿ.20 ಸಮಾವೇಶ ಬಳಿಕ ಸ್ವದೇಶಕ್ಕೆ ಮರಳಿದ ಟ್ರುಡೊ ಜೂನ್‌ನಲ್ಲಿ ಬ್ರಿಟಿಷ್ ಕೊಲಂಬಿಯಾದಲ್ಲಿ ನಡೆದ ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತೀಯ ಸರ್ಕಾರಿ ಏಜೆಂಟರ ಪಾತ್ರವಿದೆ ಎಂಬ ಆರೋಪ ಮಾಡಿದ್ದರು. ಈ ಮಾತನನ್ನು ಭಾರತ ಸರ್ಕಾರ ಸಾರಾಸಗಟಾಗಿ ತಳ್ಳಿಹಾಕಿತ್ತಲ್ಲದೆ ಇದು ಆಧಾರರಹಿತ ಆರೋಪ ಎಂದು ಹೇಳಿತ್ತು. ಬುಧವಾರ, ಭಾರತವು ಕೆನಡಾದಲ್ಲಿರುವ ತನ್ನ ಪ್ರಜೆಗಳು, ವಿಶೇಷವಾಗಿ ವಿದ್ಯಾರ್ಥಿಗಳಿಗೆ ನಿಜ್ಜರ್ ಘಟನೆಯ ಮೇಲೆ ಉಲ್ಬಣಗೊಳ್ಳುತ್ತಿರುವ ವಿವಾದಕ್ಕೆ ಸಂಬಂಧಿಸಿದಂತೆ ಎಚ್ಚರಿಕೆಯಲ್ಲಿರುವಂತೆ ಹೇಳಿತ್ತು. ನಂತರದ ಬೆಳವಣಿಗೆಯಲ್ಲಿ ಉಭಯ ರಾಷ್ಟ್ರಗಳು ರಾಜತಾಂತ್ರಿಕರನ್ನು ಹೊರ ಹಾಕಿ ಪರಸ್ಪರ ಸೇಡು ತೀರಿಸಿಕೊಂಡಿದ್ದವು. ಅಲ್ಲದೆ ಭಾರತ ಸರ್ಕಾರ ಎಚ್ಚರಿಕೆ ನೀಡಿದ್ದು ಕೆನಡಾದಲ್ಲಿ ಹೆಚ್ಚುತ್ತಿರುವ ಭಾರತ-ವಿರೋಧಿ ಚಟುವಟಿಕೆಗಳು ಮತ್ತು ರಾಜಕೀಯವಾಗಿ ಮನ್ನಿಸಲಾದ ದ್ವೇಷದ ಅಪರಾಧಗಳು ಮತ್ತು ಕ್ರಿಮಿನಲ್ ಹಿಂಸಾಚಾರದ ದೃಷ್ಟಿಯಿಂದ, ಅಲ್ಲಿನ ಎಲ್ಲಾ ಭಾರತೀಯರು ಎಚ್ಚರದಿಂದ ಇರಬೇಕು ಎಂದು ಹೇಳಿತ್ತು. ಅಲ್ಲದೆ ಪ್ರಯಾಣದ ಯೋಜನೆ ಹೊಂದಿರುವವರು ಅತ್ಯಂತ ಜಾಗರೂಕರಾಗಿರಿ ಎಂದು ಹೇಳಿತ್ತು. ಬಳಿಕ ಕೆನಡಾ ಹೇಳಿಕೆ ನೀಡಿದ್ದು, ಭಾರತಕ್ಕೆ ಪ್ರಯಾಣ ಬೆಳೆಸುವಾಗ ಎಚ್ಚರಿಕೆಯಿಂದ ಇರಬೇಕು ಅದರಲ್ಲಿಯೂ ಮಣಿಪುರ ಮತ್ತು ಜಮ್ಮು ಕಾಶ್ಮೀರಕ್ಕೆ ಭೇಟಿ ನೀಡುವುದನ್ನು ತಪ್ಪಿಸಲೇಬೇಕು ಎಂದು ಎಚ್ಚರಿಕೆ ನೀಡಿತ್ತು.

ವೀಸಾ ಸೇವೆ ಬಂದ್‌: ನಂತರದ ಬೆಳವಣಿಗೆಯಲ್ಲಿ ಭಾರತವು ಕೆನಡಾದಲ್ಲಿವೀಸಾ ಪ್ರಕ್ರಿಯೆ ಕೇಂದ್ರವು ಸೇವೆಗಳನ್ನು ಸ್ಥಗಿತಗೊಳಿಸಿತು. ಕಾರ್ಯಾಚರಣೆಯ ಕಾರಣಗಳಿಂದಾಗಿ, ಸೆಪ್ಟೆಂಬರ್ 21 ರಿಂದ ಜಾರಿಗೆ ಬರುವಂತೆ ಭಾರತೀಯ ವೀಸಾ ಸೇವೆಗಳನ್ನು ಮುಂದಿನ ಸೂಚನೆ ಬರುವವರೆಗೆ ರದ್ದು ಮಾಡಲಾಗಿದೆ ಎಂದು ಕೆನಡಾದ BLS ಭಾರತೀಯ ವೀಸಾ ಅರ್ಜಿ ಕೇಂದ್ರ ತಿಳಿಸಿತ್ತು. ಇತ್ತೀಚೆಗೆ, ಕೆನಡಾ ಕೂಡ ಭಾರತದೊಂದಿಗಿನ ವ್ಯಾಪಾರ ಒಪ್ಪಂದದ ಮಾತುಕತೆಗಳನ್ನು ನಿಲ್ಲಿಸಿದೆ.

See also  ಬೆಳಗಾವಿ: ನವಲಿ ಸಮಾನಾಂತರ ಜಲಾಶಯ ನಿರ್ಮಾಣ ಸರ್ವಪಕ್ಷ ಸಭೆಯಲ್ಲಿ ನಿರ್ಣಯ- ಸಿಎಂ ಬೊಮ್ಮಾಯಿ

ಶಿಕ್ಷಣದಲ್ಲಿ ಭಾರತೀಯರ ಸಂಖ್ಯೆ: ಕೆನಡಾ ಭಾರತೀಯರಿಗೆ, ವಿಶೇಷವಾಗಿ ವಿದ್ಯಾರ್ಥಿಗಳಿಗೆ ಆಕರ್ಷಕ ತಾಣವಾಗಿದೆ. 2022 ರಲ್ಲಿ, ಸುಮಾರು 300,000 ಭಾರತೀಯರು ಕೆನಡಾದಲ್ಲಿ ಉನ್ನತ ಶಿಕ್ಷಣವನ್ನು ಪಡೆಯುತ್ತಿದ್ದಾರೆ ಎಂದು ಭಾರತದ ಬ್ಯೂರೋ ಆಫ್ ಇಮಿಗ್ರೇಷನ್ ತಿಳಿಸಿದೆ. ಕೆನಡಾದಲ್ಲಿ 2022 ರಲ್ಲಿ ಅಧ್ಯಯನ ಪರವಾನಗಿ ಹೊಂದಿರುವವರ ಅಗ್ರ 10 ಮೂಲದ ದೇಶಗಳಲ್ಲಿ ಭಾರತ ಮೊದಲನೆಯದು. ಭಾರತೀಯ ಮತ್ತು ಕೆನಡಾದ ಸಂಸ್ಥೆಗಳ ನಡುವೆ 200 ಕ್ಕೂ ಹೆಚ್ಚು ಶೈಕ್ಷಣಿಕ ಪಾಲುದಾರಿಕೆಗಳಿವೆ.

ಭಾರತವೇ ಅತಿದೊಡ್ಡ ಮಾರುಕಟ್ಟೆ: 2022 ರಲ್ಲಿ ಭಾರತವು ಕೆನಡಾದ 10 ನೇ ಅತಿದೊಡ್ಡ ವ್ಯಾಪಾರ ಪಾಲುದಾರ ಆಗಿತ್ತು. ಭಾರತ ಮತ್ತು ಕೆನಡಾ ನಡುವಿನ ದ್ವಿಪಕ್ಷೀಯ ವ್ಯಾಪಾರವು ಇತ್ತೀಚಿನ ವರ್ಷಗಳಲ್ಲಿ ಗಮನಾರ್ಹ ಬೆಳವಣಿಗೆಯನ್ನು ಕಂಡಿದೆ. 2022-23ರಲ್ಲಿ $8.16 ಬಿಲಿಯನ್ ತಲುಪಿದೆ. ಔಷಧಗಳು, ರತ್ನಗಳು ಮತ್ತು ಆಭರಣಗಳು, ಜವಳಿ ಮತ್ತು ಯಂತ್ರೋಪಕರಣಗಳನ್ನು ಕೆನಡಾಕ್ಕೆ ಭಾರತ ರಫ್ತು ಮಾಡುತ್ತದೆ. ಇಲ್ಲಿ ರಫ್ತು ಮೌಲ್ಯ $4.1 ಶತಕೋಟಿ ಡಾಲರ್ ಇದೆ. ಅದೇ ವೇಳೆ ಭಾರತಕ್ಕೆ ಕೆನಡಾ $4.06 ಬಿಲಿಯನ್ ಡಾಲರ್ ಮೌಲ್ಯದಲ್ಲಿ ಬೇಳೆಕಾಳುಗಳು, ಮರ, ತಿರುಳು ಮತ್ತು ಕಾಗದ ಮತ್ತು ಗಣಿಗಾರಿಕೆ ಉತ್ಪನ್ನಗಳನ್ನು ರಫ್ತು ಮಾಡಿದೆ.

ಕೆನಡಾಕ್ಕೆ ಸಿಗುವುದಿಲ್ಲ ಪಶ್ಚಿಮದ ಬೆಂಬಲ: ಚೀನಾ ಓಟಕ್ಕೆ ಬ್ರೇಕ್‌ ಹಾಕಲೇ ಬೇಕು ಎಂದು ತುದಿಗಾಲಲ್ಲಿ ನಿಂತಿರುವ ಪಶ್ಚಿಮದ ರಾಷ್ಟ್ರಗಳಿಗೆ ಏಕೈಕ ಆಸರೆ ಆಧಾರವೆಂದರೆ ಭಾರತ ಮಾತ್ರ. ರಷ್ಯಾ ಅಮೆರಿಕ ಸೇರಿದಂತೆ ಪಾಶ್ಚಿಮಾತ್ಯ ದೇಶಗಳನ್ನು ಕಟುವಾಗಿ ವಿರೋಧಿಸುತ್ತದೆ. ಆದರೆ ಜಿ.20 ಸಮಾವೇಶದಲ್ಲಿ ಕೈಗೊಂಡ ರಷ್ಯಾ ಯುಕ್ರೇನ್‌ ನಿರ್ಣಯವನ್ನು ರಷ್ಯಾ ಸ್ವಾಗತಿಸಿ ಭಾರತದ ಅಧ್ಯಕ್ಷತೆ, ನಾಯಕತ್ವವನ್ನು ಹೊಗಳಿದೆ. ಬ್ರಿಟನ್‌ ಕೂಡ ಭಾರತದೊಂದಿಗೆ ಮುಕ್ತ ವ್ಯಾಪಾರಕ್ಕೆ ಮುಂದಾಗಿದೆ. 140 ಕೋಟಿ ಜನರ ಭಾರತದ ಮಾರುಕಟ್ಟೆಯನ್ನು ಗಮನದಲ್ಲಿರಿಸಿಯೇ ಬ್ರಿಟನ್‌ ಈ ನಿರ್ಣಯ ಕೈಗೊಂಡಿದೆ. ಫ್ರಾನ್ಸ್‌ ಆರಂಭದಿಂದಲೂ ಭಾರತದ ಮಿತ್ರ ರಾಷ್ಟ್ರ, ನ್ಯೂಕ್ಲಿಯರ್‌ ಟೆಸ್ಟ್‌ ಸಂದರ್ಭದಲ್ಲಿಯೂ ಕೂಡ ಫ್ರಾನ್ಸ್‌ ಭಾರತದೊಂದಿಗಿತ್ತು. ಸಿಖ್‌ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿರುವ ಆಸ್ಟ್ರೇಲಿಯಾ ನಿಜ್ಜರ್‌ ಹತ್ಯೆ ತನಿಖೆ ಆಗಬೇಕು ಎಂದು ಹೇಳಿದರೂ ವ್ಯಾಪಾರ ಒಪ್ಪಂದ ಅಮಾನತು ಮಾಡುವುದು ಸಾಧ್ಯವೇ ಇಲ್ಲ ಎಂದು ಹೇಳಿದೆ. ಒಟ್ಟಿನಲ್ಲಿ ಹತ್ಯೆ ತನಿಖೆ ಆಗಬೇಕು ಎಂದು ಪಶ್ವಿಮದ ರಾಷ್ಟ್ರಗಳು ಹೇಳಿಕೆ ನೀಡುತ್ತಿದ್ದರೂ ಭಾರತದ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲು ಈ ರಾಷ್ಟ್ರಗಳು ಮುಂದಾಗುತ್ತಿಲ್ಲ ಎಂಬುದು ಗಮನಾರ್ಹ.
ಆದರೆ ಕೆನಡಾ ಪರವಾಗಿ ನಿಲ್ಲಲು ಹಿಂಜರಿಯುತ್ತಿರುವ ಈ ರಾಷ್ಟ್ರಗಳು 2018ರಲ್ಲಿ ಇಂಗ್ಲೆಂಡ್‌ನಲ್ಲಿ ರಷ್ಯಾದ ಡಬಲ್‌ ಏಜೆಂಟ್‌ ಇಲಿಯಾರಿ ಅವರಿಗೆ ವಿಷಕಾರಿ ಅಂಶಗಳನ್ನು ನೀಡಿ ಕೊಂದು ಹಾಕಿದಾಗ ಬ್ರಿಟನ್‌, ಅಮೆರಿಕ ದೇಶಗಳು ರಷ್ಯಾದ ರಾಜತಾಂತ್ರಿಕರನ್ನು ಹೊರಹಾಕಿ ಬೊಬ್ಬಿರಿದಿದ್ದವು. ಆದರೆ ಭಾರತದ ವಿಷಯದಲ್ಲಿ ಹೀಗೆ ಆಗಲಿಲ್ಲ. ಭಾರತದ ಜನಸಂಖ್ಯಾ ಶಕ್ತಿ, ಮಾರುಕಟ್ಟೆ ಬೆಳೆಯುತ್ತಿರುವ ಅಗಾಧ ಆರ್ಥಿಕತೆ ಇವನ್ನೆಲ್ಲ ಗಮನದಲ್ಲಿರಿಸಿ ಅವರಿಗೆ ಭಾರತ ಅನಿವಾರ್ಯವಾಗಿದೆ.

See also  ರಾಜ್ಯದಲ್ಲಿ ಪ್ರಧಾನಿ ಮೋದಿಯ 20 ರ‍್ಯಾಲಿ, ಅಧಿಕಾರ ಉಳಿಸಿಕೊಳ್ಳಲು ಮೋದಿ ವರ್ಚಸ್ಸು ಬಳಕೆ

ಟ್ರುಡೊ ಯಾರು: ಜಸ್ಟಿನ್ ಟ್ರುಡೊ ಹುಟ್ಟಿದ್ದು ಡಿಸೆಂಬರ್‌ 25 1971ರಲ್ಲಿ ಕೆನಡಾದ ಒಟ್ಟಾವದಲ್ಲಿ ಹುಟ್ಟಿದ್ದ ಜಸ್ಟಿನ್‌ ತಂದೆ ಹೆಸರು ಪೇರ್‌ ಟ್ರುಡೊ ಕೆನಡಾದ ಮಾಜಿ ಪ್ರಧಾನಿಯಾಗಿದ್ದವರು. ಟ್ರುಡೊ ಅವರ ಪೂರ್ವಜರು ಸ್ಕಾಟ್‌ ಲ್ಯಾಂಡ್‌ ಕೆಡೆಯಿಂದ ಬಂದವರು. ಟ್ರುಡೊ ಅವರ ತಂದೆ ತಾಯಿ 1977ರಲ್ಲಿ ಬೇರೆ ಬೇರೆ ಆಗುತ್ತಾರೆ. ಆಗ ಜಸ್ಟಿನ್‌ ಗೆ ಕೇವಲ ಆರು ವರ್ಷ ಆಗ ತಂದೆಯೇ ಅವರ ಆರೈಕೆ ಮಾಡುತ್ತಾರೆ. ಇಂಗ್ಲಿಷ್‌ನಲ್ಲಿ ಬಿ,ಎ. ಬಿಎಡ್‌ ಮಾಡಿದ ಟ್ರೊಡೊ ಜಿಯೋಗ್ರಫಿ ವಿಷಯದಲ್ಲಿ ಎಂಎ ಮಾಡಲು ಮುಂದಾಗುತ್ತಾರೆ. ಆದರೆ ಅದನ್ನು ಕಂಟಿನ್ಯೂ ಮಾಡುವುದಿಲ್ಲ. ಬಳಿಕ ರೆಡಿಯೋ ಒಂದರಲ್ಲಿ ಗ್ರೀಸ್‌ ನಲ್ಲಿ 2004ರಲ್ಲಿ ನಡೆದ ಒಲಿಂಪಿಕ್ಸ್‌ ಗೇಮ್ಸ್‌ ವರದಿ ಮಾಡುತ್ತಾರೆ. 2007ರಲ್ಲಿ ತೆರೆಕಂಡ ವಿಶ್ವಯುದ್ದ ಒಂದು ಎಂಬ ಡಾಕ್ಯುಮೆಂಟರಿಯಲ್ಲಿ ಕೂಡ.
2007ರಲ್ಲಿ ತಮ್ಮ 36ನೇ ವಯಸ್ಸಿಗೆ ಪೂರ್ಣಪ್ರಮಾಣದಲ್ಲಿ ರಾಜಕೀಯಕ್ಕೆ ಕಾಲಿಟ್ಟರು. ಲಿಬರಲ್‌ ಪಾರ್ಟಿಯ ಭದ್ರಕೋಟೆ ಮೋಂಟ್ರಿಯಾಲ್‌ ನಲ್ಲಿ ಸ್ಪರ್ಧೆ ಮಾಡಿ ಗೆದ್ದೆ ಬಟ್ಟರು. 2011ರಲ್ಲಿ ಮತ್ತೊಮ್ಮೆ ಆಯ್ಕೆಯಾದರು. ಈ ವೇಳೆ ಲಿಬರಲ್‌ ಪಾರ್ಟಿ ಸೋಲು ಅನುಭವಿಸಿತ್ತು. ಈ ವೇಳೆ ಪಕ್ಷದಲ್ಲಿ ಆಂತರಿಕ ಕಚ್ಚಾಟ ಹೆಚ್ಚಾಯಿತು. ನಾಯಕತ್ವ ಬದಲಾವಣೆ ಆಗ್ರಹ ಕೇಳಿಬಂದಾಗ ಟ್ರುಡೊ ಅವರನ್ನು ಎಲ್ಲರೂ ಮುಂದೆ ಬಿಟ್ಟರು. ಮುಂದೆ ಲಿಬರಲ್‌ ಪಾರ್ಟಿ ಪ್ರಧಾನಿ ಅಭ್ಯರ್ಥಿಯಾದರು. 2015 ರಲ್ಲಿ ಚುನಾವಣೆ ವೇಳೆ ರಿಯಲ್‌ ಚೇಂಜ್‌ ಎನ್ನುವ ಸ್ಲೋಗನ್‌ ಮೂಲಕ ಚುನಾವಣೆಗೆ ಇಳಿದರು.

ಜನರಿಗೆ ಹೊಸ ಆಶ್ವಾಸ ನೀಡಿದರು. ಮುಂದೆ 184 ರ ಬಹುಮತ ಗಳಿಸಿದರು. ಟ್ರುಡೊ ಜನಾಂಗೀಯವಾದ ಕಾರಣ 2019ರಲ್ಲಿ ಜನಪ್ರಿಯತೆ ಹಳ್ಳ ಹಿಡಿಯಿತು. ಇದೀಗ ಟ್ರೂಡ್‌ ಸರ್ಕಾರ ಬೆಂಬಲ ಕೊಟ್ಟಿರುವ ಪಾರ್ಟಿ ಖಲಿಸ್ತಾನಿ ಬೆಂಬಲಿಗ ಪಕ್ಷವಾಗಿದೆ. ಭಾರತದಲ್ಲಿ ರೈತರ ಪ್ರತಿಭಟನೆ ವೇಳೆ ಟ್ರುಡೊ ಭಾರತ ವಿರೋಧಿ ಹೇಳಿಕೆ ನೀಡಿದ್ದಾರೆ. ಭಾರತಕ್ಕೆ ಭೇಟಿ ನೀಡಿದ್ದಾಗ ದೇಶ ವಿರೋಧಿ ಖಲಿಸ್ತಾನಿ ಗಳೊಂದಿಗೆ ಟ್ರುಡೊ ಪಾರ್ಟಿ ಮಾಡಿ ಸಂಭ್ರಮಿಸಿದ್ದರು. ಇಂತಹ ಟ್ರುಡೊ ಅವರಿಂದ ಭಾರತ ವಿರೋಧಿ ಚಟುವಟಿಕೆ ಅಲ್ಲದೆ ಬೇರೇನು ನಿರೀಕ್ಷಿಸಲು ಸಾಧ್ಯ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು