ಚೆನ್ನೈ: ಬಹು ಭಾಷಾ ಕಲಾವಿದೆ ಚಿತ್ರಾ (56) ಹೃದಯಾಘಾತದಿಂದ ಚೆನ್ನೈನಲ್ಲಿ ಇಂದು ಬೆಳಿಗ್ಗೆ ನಿಧನರಾದರು.
ಕನ್ನಡ ಸೇರಿದಂತೆ ಮಲಯಾಳಂ, ತೆಲುಗು ಹಾಗೂ ತಮಿಳಿನಲ್ಲಿ ನೂರಕ್ಕೂ ಹೆಚ್ಚು ಸಿನೆಮಾಗಳಲ್ಲಿ ನಟಿಸಿದ್ದಾರೆ.
ಕೊಚ್ಚಿನ್‌ನಲ್ಲಿ ಜನಿಸಿದ ಚಿತ್ರಾ ಬಾಲನಟಿಯಾಗಿ ಸಿನಿಮಾ ರಂಗಕ್ಕೆ ಪ್ರವೇಶಿಸಿದರು. ಕೆ. ಬಾಲಚಂದರ್ ನಿರ್ದೇಶನದ ಅಪೂರ್ವ ರಾಗಂಗಳ್ ಸಿನಿಮಾದಲ್ಲಿ ಬಾಲ ನಟಿಯಾಗಿ ನಟಿಸಿದ್ದರು. ಈ ಚಿತ್ರ 1975ರಲ್ಲಿ ತೆರೆಕಂಡಿತ್ತು.
ಕನ್ನಡದಲ್ಲಿ ಸುಂದರ ಸ್ವಪ್ನಗಳು, ಅಜೇಯ್ – ವಿಜಯ್, ಕೃಷ್ಣ ಮೆಚ್ಚಿದ ರಾಧೆ ಚಿತ್ರಗಳಲ್ಲಿ ಬಣ್ಣ ಹಚ್ಚಿದ್ದಾರೆ.