ಉಡುಪಿ: ಗಾಡ್ ಗಿಫ್ಟ್ ಫ್ಯಾಮಿಲಿ ಫಿಲಂ ಬ್ಯಾನರ್ ನಡಿ ನಿರ್ಮಾಣಗೊಂಡಿರುವ ಗ್ರಾಮೀಣ ಪ್ರತಿಭೆಗಳಿಂದ ಮೂಡಿಬಂದ ‘ಮಗಳು’ ಕನ್ನಡ ಚಲನಚಿತ್ರವು ಫೆ. 17ರಂದು ಕರಾವಳಿ ಸಹಿತ ರಾಜ್ಯಾದ್ಯಂತ ತೆರೆ ಕಾಣಲಿದೆ ಎಂದು ನಿರ್ದೇಶಕ ಥೋಮಸ್ ಎಂ.ಎಂ. ನೀಡಿದರು.
ಉಡುಪಿಯಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಳೆ ಮಣಿಪಾಲ, ಮಂಗಳೂರು, ಸುರತ್ಕಲ್, ಕುಂದಾಪುರ, ಪಡುಬಿದ್ರಿ, ಶಿವಮೊಗ್ಗ ಸಹಿತ ರಾಜ್ಯಾದ್ಯಂತ ಚಿತ್ರ ಬಿಡುಗಡೆಯಾಗಲಿದೆ ಎಂದರು.
ಇದೊಂದು ಕೌಟುಂಬಿಕ ಆಧಾರಿತ ಚಿತ್ರವಾಗಿದ್ದು, ಒಂದು ಕುಟುಂಬಕ್ಕೆ ಹೆಣ್ಣು ಮಗಳೊಬ್ಬಳು ಯಾವ ರೀತಿ ಬೆಳಕಾಗುತ್ತದೆ ಎಂಬ ಕಥಹಂದರವನ್ನು ಹೊಂದಿದೆ ಎಂದರು.
ಈ ಚಿತ್ರಕ್ಕೆ ಚಿತ್ರಮಂಡಳಿಯಿಂದ ಅತ್ಯುತ್ತಮ ಚಲನಚಿತ್ರ ಸರ್ಟಿಫಿಕೆಟ್ ಲಭಿಸಿದೆ. ಚಿತ್ರದ ಮುಖ್ಯ ಭೂಮಿಕೆಯಲ್ಲಿ ನವೀನ್ ಡಿ. ಪಡೀಲ್ ನಟಿಸಿದ್ದಾರೆ. ಮಗಳು ಅಂಜಲಿಯ ಪಾತ್ರದಲ್ಲಿ ತನಿಷಾ ಕಾರ್ಕಳ, ಶ್ರೀಮಾ ಉಜಿರೆ ಹಾಗೂ ಭಾರ್ಗವಿ ಆರ್. ಶೀಟ್ ನಟಿಸಿದ್ದಾರೆ. ತಾಯಿ ಪಾತ್ರದಲ್ಲಿ ಸವಿತಾ ಪ್ಲಾವ್ಯಾ ಅಭಿನಯಿಸಿದ್ದಾರೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಪೋಷಕ ನಟ ಪಿ. ಧರಣೇಂದ್ರಕುಮಾರ್ ಹೊಸಂಗಡಿ, ಶರಣ್ ಶೆಟ್ಟಿ ವೇಣೂರು ಇದ್ದರು.