ಬೆಂಗಳೂರು: ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಶುಭಸುದ್ದಿಯೊಂದಿದೆ. ವಿಜಯ್ ಅವರ ನಿರ್ದೇಶನದ ತಮಿಳು – ಕನ್ನಡ ಚಿತ್ರವೊಂದರಲ್ಲಿ ಕಿಚ್ಚ ಕಾಣಿಸಿಕೊಳ್ಳಲಿದ್ದಾರೆ.
ಏಪ್ರಿಲ್‌ನಲ್ಲಿ ಚಿತ್ರೀಕರಣ ಆರಂಭಗೊಳ್ಳುವ ನಿರೀಕ್ಷೆಯಿದೆ. ಅಲ್ಲದೆ ವಿಕ್ರಾಂತ್ ರೋಣ ಡೈರೆಕ್ಟರ್ ಅನೂಪ್ ಭಂಡಾರಿ ಅವರ ಚಿತ್ರದಲ್ಲಿ ಸುದೀಪ್ ನಟಿಸಲಿದ್ದು, ಮುಂದಿನ ವರ್ಷ ಈ ಚಿತ್ರ ತೆರೆಕಾಣಲಿದೆ.