ಬೆಂಗಳೂರು: ದೇಶ ವಿದೇಶಗಳಲ್ಲಿ, ಪ್ರಸಿದ್ಧಿ ಪಡೆದಿರುವ ಕಾಂತಾರ ಚಿತ್ರ ಶುಕ್ರವಾರ ಜಿನೇವಾದಲ್ಲಿರುವ ವಿಶ್ವ ಸಂಸ್ಥೆ ಪ್ರಧಾನ ಕಚೇರಿಯಲ್ಲಿ ಪ್ರದರ್ಶನ ಕಾಣಲಿದೆ. ಈಗಾಗಲೇ ಜನೇವಾಕ್ಕೆ ಪ್ರಯಾಣ ಬೆಳೆಸಿರುವ ರಿಷಬ್ ಶೆಟ್ಟಿಯವರು ವಿಶ್ವಸಂಸ್ಥೆಯ ಹಾಲ್ ನಂ. 11 (ಪಾಗೇ ಬಾಲಕ್ಕೆ ರ್ಟ್)ನಲ್ಲಿ ವಿಶ್ವಸಂಸ್ಥೆಯ ಸದಸ್ಯ ರೊಂದಿಗೆ ಸಿನೆಮಾ ವೀಕ್ಷಿಸಲಿದ್ದಾರೆ.
ಮೂಲಗಳ ಪ್ರಕಾರ, ಈಗಾಗಲೇ ಯಥ್ ಶೆಟ್ಟಿ ಸಿನಿಮಾ ಪ್ರದರ್ಶ ನಕ್ಕೆ ಬೇಕಾದ ಎಲ್ಲ ಸಿದ್ಧತೆ ಮುಗಿಸಿದ್ದಾರೆ. ಸಿನಿಮಾ ಮುಗಿದ ಮೇಲೆ ಈ ಚಿತ್ರಕ್ಕೂ ಮತ್ತು ಪರಿಸರಕ್ಕೂ ಇರುವ ಸಂಬಂಧದ ಬಗ್ಗೆ ಮಾತನಾಡಲಿದ್ದಾರೆ. ಜತೆಗೆ ಪ್ರೇಕ್ಷಕರನ್ನು ಉದ್ದೇಶಿಸಿ ಕನ್ನಡದಲ್ಲಿ ಮಾತನಾಡಲಿದ್ದಾರೆ. ಬಳಿಕ ವಿಶ್ವಸಂಸ್ಥೆ ರಾಜತಾಂತ್ರಿಕರ ಜತೆ ಖಾಸಗಿ ಡಿನ್ನರ್ ನಲ್ಲಿ ಭಾಗಿಯಾಗಲಿದ್ದಾರೆ. ರಿಷಬ್ ಶೆಟ್ಟಿಯವರ ಈ ಸಾಧನೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿಯೂ ಶ್ಲಾಘನೆ ವ್ಯಕ್ತವಾಗಿದೆ.