ಬೆಂಗಳೂರು: ಸ್ಯಾಂಡಲ್ ವುಡ್‌ನ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಮತ್ತು ನಟಿ ಶ್ರೀನಿಧಿ ಶೆಟ್ಟಿ ಟ್ವಿಟ್ಟರ್ ಮಾತುಕತೆ ಗಮನ ಸೆಳೆಯುತ್ತಿದೆ. ಕೆಜಿಎಫ್ ಸುಂದರಿ ಶ್ರೀನಿಧಿ ಶೆಟ್ಟಿ ಅವರ ಹಾಗೆ ಸುಮ್ಮನೆ ಪೋಸ್ಟ್‌ಗೆ ಸಿಂಪಲ್ ಸ್ಟಾರ್ ಕಾಮೆಂಟ್ ಮಾಡಿರುವುದು ಈಗ ವೈರಲ್ ಆಗಿದೆ.
ನಟಿ ಶ್ರೀನಿಧಿ ಶೆಟ್ಟಿ ಇತ್ತೀಚೆಗೆ ಒಂದು ಪೋಸ್ಟ್ ಶೇರ್ ಮಾಡಿದ್ದರು. ಪರ್ಪಲ್ ಬಣ್ಣದ ಡ್ರೆಸ್ ಧರಿಸಿದ್ದ ಶ್ರೀನಿಧಿ ಶೆಟ್ಟಿ ಸಿಂಪಲ್ ಲುಕ್‌ನ ಪೋಟೋ ಹಂಚಿಕೊಂಡಿದ್ದರು. ಫೋಟೋಗೆ ಹಾಗೆ ಸುಮ್ಮನೆ ಎಂದು ಕ್ಯಾಪ್ಷನ್ ಮಾಡಿದ್ದರು. ಶ್ರೀನಿಧಿ ಶೆಟ್ಟಿ ಫೋಟೋಗೆ ರಕ್ಷಿತ್ ಕಾಮೆಂಟ್ ಮಾಡಿದ್ದಾರೆ. ‘ಹೌದಾ ಶೆಟ್ರೆ ಗೊತ್ತಾಯಿತು’ ಎಂದು ತುಳುವಿನಲ್ಲಿ ಹೇಳಿದ್ದಾರೆ. ರಕ್ಷಿತ್ ಕಾಮೆಂಟ್‌ಗೆ ಶ್ರೀನಿಧಿ ಮತ್ತೆ ಪ್ರತಿಕ್ರಿಯೆ ನೀಡಿದ್ದಾರೆ. ‘ಗೊತ್ತಾಯಿತಾ ಶೆಟ್ರೆ, ಯಾರಿಗೂ ಹೇಳಬೇಡಿ ಎಂದು’ ಹೇಳಿದ್ದಾರೆ.
ಅಭಿಮಾನಿಗಳ ಪ್ರತಿಕ್ರಿಯೆ: ಇಬ್ಬರ ಈ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇಬ್ಬರ ಕಾಮೆಂಟ್‌ಗೆ ಅಭಿಮಾನಿಗಳು ತರಹೇವಾರಿ ಪ್ರತಿಕ್ರಿಯೆ ನೀಡುತ್ತಿದ್ದಾರೆ. ‘ಏನ್ ನಡೀತಿದೆ ಶೆಟ್ರೆ..’ ಎಂದು ಅಭಿಮಾನಿಯೊಬ್ಬ ಕಾಮೆಂಟ್ ಮಾಡಿದ್ದಾರೆ. ಮತ್ತೋರ್ವ ಕಾಮೆಂಟ್ ಮಾಡಿ, ‘ಏನೋ ಬೇರೆ ವಾಸನೆ ಬರ್ತಿದೆ ಶೆಟ್ರೆ’ ಎಂದು ಹೇಳಿದ್ದಾರೆ. ಮತ್ತೋರ್ವ ಪ್ರತಿಕ್ರಿಯೆ ನೀಡಿ, ‘ತಲೆಗೆ ಹುಳ ಬಿಟ್ರಲ್ಲಾ ಶೆಟ್ರೆ’ ಎಂದು ಹೇಳಿದ್ದಾರೆ. ಮತ್ತೊಬ್ಬರು, ‘ಏನಾದ್ರು ಹೊಸ ಸುದ್ದಿ ಇದಿಯಾ’, ‘ಜೋಡಿ ಚೆನ್ನಾಗಿದೆ’ ಎಂದು ಕಾಮೆಂಟ್ ಮಾಡಿ ಶೆಟ್ರ ಕಾಲೆಳೆಯುತ್ತಿದ್ದಾರೆ.