News Kannada
Thursday, February 29 2024
ಸಾಂಡಲ್ ವುಡ್

ಗಂಟುಮೂಟೆ ನಾಯಕನ ಕೈಯಲ್ಲಿ ಈಗ ‘ಕಂಟ್ರಿಮೇಡ್’: ಶುಭ ಹಾರೈಸಿದ ವಿಜಯ್, ವಸಿಷ್ಠ ಸಿಂಹ

Photo Credit : News Kannada

ಕಂಟ್ರಿಮೇಡ್ ಅಂದ್ರೆ ಯಾರಿಗೆ ಗೊತ್ತಿಲ್ಲ ಹೇಳಿ. ಇದೀಗ ಅದೇ ಹೆಸರಿನಲ್ಲಿ ಸಿನಿಮಾವೊಂದು ಸಿದ್ಧವಾಗಿದೆ. ಇಂದು ಮಹೂರ್ತ ಭಾಗ್ಯ ಕೂಡ ದೊರೆತಿದೆ. ಶ್ರೀ ಧರ್ಮಗಿರಿ ಮಂಜುನಾಥಸ್ವಾಮಿ ದೇವಾಲಯದಲ್ಲಿ ಅದ್ದೂರಿಯಾಗಿ ಜರುಗಿದ ಈ ಸಮಾರಂಭಕ್ಕೆ ದುನಿಯಾವಿಜಯ್ ಪ್ರಥಮ ದೃಶ್ಯಕ್ಕೆ ಕ್ಲಾಪ್ ಮಾಡಿ, ವಸಿಷ್ಠಸಿಂಹ ಕ್ಯಾಮಾರ ಆನ್ ಮಾಡಿ ತಂಡಕ್ಕೆ ಶುಭ ಹಾರೈಸಿದರು.

ಈ ಸಿನಿಮಾ ಮಾಸ್ ಗ್ಯಾಂಗ್‌ ಸ್ಟಾರ್ ಕುರಿತಾಗಿದೆ. ಬಾಲಕನಾಗಿದ್ದಾಗ ಕೆಲವು ಕಹಿ ಘಟನೆಗಳು ನಡೆಯುತ್ತವೆ. ಅದನ್ನ ಸಹಿಸಿಕೊಳ್ಳಲಾಗದೆ ಊರು ಬಿಟ್ಟು ಕಲ್ಕತ್ತಾ ಸಿಟಿ ಸೇರಿಕೊಳ್ಳುವ ನಾಯಕನ ಸುತ್ತ ಕಥೆ ಹೆಣೆಯಲಾಗಿದೆ. ’ಲವ್ ಮಾಕ್ಟೇಲ್’ ತೆಲುಗು ಚಿತ್ರ ’ಗುರುತಿಂದ ಶೀತಕಾಯಿ’ ನಿರ್ಮಾಣ ಮಾಡಿರುವ ಕನ್ನಡತಿ ಭಾವನಾರವಿ ಗೊಂಬೆ ಪಿಕ್ಚರ್ಸ್ ಮೂಲಕ ಬಂಡವಾಳ ಹೂಡುತ್ತಿದ್ದಾರೆ. ಮೆಕಾನಿಕಲ್ ಇಂಜಿನಿಯರಿಂಗ್ ಮುಗಿಸಿರುವ ದಾವಣಗೆರೆಯ ರಾಘವಸೂರ್ಯ ಇದಕ್ಕೂ ಮುಂಚೆ ತೆಲುಗು ಮತ್ತು ಕನ್ನಡ ಚಿತ್ರಗಳಿಗೆ ಕೆಲಸ ಮಾಡಿದ ಅನುಭವ ಹೊಂದಿದ್ದು, ಇದರ ಪರಿಣಾಮ ಸಿನಿಮಾಕ್ಕೆ ರಚನೆ ಮತ್ತು ನಿರ್ದೇಶನ ಮಾಡುತ್ತಿದ್ದಾರೆ.

ಕಲ್ಕತ್ತಾದಲ್ಲಿ ಶೇಕಡ 30, ಉಳಿದ ಭಾಗದ ಚಿತ್ರೀಕರಣವನ್ನು ರಾಯಚೂರು, ತಿಂತಣಿ ಹಾಗೂ ಬೆಂಗಳೂರು ಕಡೆಗಳಲ್ಲಿ ಚಿತ್ರೀಕರಿಸಲು ಚಿತ್ರತಂಡ ಫ್ಲ್ಯಾನ್ ಮಾಡಿದೆ. ಸಿನಿಮಾದಲ್ಲಿ ಐದು ಹಾಡುಗಳಿರಲಿದ್ದು, ನಕುಲ್‌ ಅಭಯಂಕರ್ ಸಂಗೀತ ನೀಡಲಿದ್ದಾರೆ. ಛಾಯಾಗ್ರಹಣ ಜಿ.ಎಸ್.ಶ್ರೇಯಸ್,
ಸಂಕಲನ ದೀಪು.ಎಸ್.ಕುಮಾರ್ ಚಿತ್ರಕ್ಕಿದೆ.

ಈಗಾಗಲೇ ಗಂಟು ಮೂಟೆ, ಟಾಮ್ ಅಂಡ್ ಜೆರ್ರಿ ಸಿನಿಮಾ ಮೂಲಕ ಖ್ಯಾತಿ ಗಳಿಸಿರುವ ನಿಶ್ಚಿತ್ ಕೊರೋಡಿ ನಾಯಕನಾಗಿ ಎರಡು ಶೇಡ್‌ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನಾಯಕಿಯಾಗಿ ’ಲವ್‌ಮಾಕ್ಟೆಲ್-2’ ಖ್ಯಾತಿಯ ರಚೇಲ್‌ ಡೇವಿಡ್ ನಟಿಸಿದ್ದಾರೆ. ಉಳಿದಂತೆ, ಶರತ್‌ ಲೋಹಿತಾಶ್ವ,
ತಬಲಾನಾಣಿ ಮುಂತಾದವರು ತಾರಬಳಗದಲ್ಲಿದ್ದಾರೆ. ಏಪ್ರಿಲ್ ತಿಂಗಳಿಂದ ಕಂಟ್ರಿಮೇಡ್ ಶೂಟಿಂಗ್ ಶುರುವಾಗಲಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
6528

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು