News Kannada
Wednesday, December 06 2023
ಬಾಲಿವುಡ್

ವಿವಾದದ ನಡುವೆ ಹಿಂದಿ ಚಿತ್ರರಂಗದಲ್ಲೇ ದಾಖಲೆ ನಿರ್ಮಿಸಿದ ಕೆಜಿಎಫ್​​ ಚಾಪ್ಟರ್​- 2

KGF 2
Photo Credit :

ಬಾಲಿವುಡ್- ಸ್ಯಾಂಡಲ್​ವುಡ್ ನಡುವಿನ ಹಿಂದಿ ಭಾಷೆ ವಿಚಾರವಾಗಿ ವಿವಾದ ಉದ್ಬವವಾಗಿದ್ದು, ಇದರ ಮದ್ಯೆ ನಟ ಯಶ್ ನಟಿಸಿರುವ ಕೆಜಿಎಫ್​​ ಚಾಪ್ಟರ್​- 2 ಹಿಂದಿ ಚಿತ್ರರಂಗದಲ್ಲೇ ವಿನೂತನ ದಾಖಲೆ ನಿರ್ಮಿಸಿದೆ.

ಪ್ರಭಾಸ್​ ಅಭಿನಯದ ಬಾಹುಬಲಿ 2 ಮತ್ತು ಅಮೀರ್ ಖಾನ್ ನಟನೆಯ ದಂಗಲ್​ ಚಿತ್ರದ ಬಳಿಕ ಹಿಂದಿ ಅವತರಣಿಕೆಯಲ್ಲಿ ಅತಿ ಹೆಚ್ಚು ಹಣ ಗಳಿಕೆ ಮಾಡಿರುವ ಸಿನಿಮಾ ಆಗಿ ಹೊರಹೊಮ್ಮಿದೆ.

ಏಪ್ರಿಲ್​ 14ರಂದು ರಿಲೀಸ್​ ವಿಶ್ವದಾದ್ಯಂತ ಆಗಿರುವ ಈ ಸಿನಿಮಾ ಈಗಾಗಲೇ ಸಾವಿರ ಕೋಟಿಗೂ ಅಧಿಕ ಹಣ ಗಳಿಸಿದೆ. ಇದರಲ್ಲಿ ಹಿಂದಿ ಅವತರಣಿಕೆಯಲ್ಲೇ 343.13 ಕೋಟಿ ರೂಪಾಯಿ ಸಂಪಾದಿಸಿದೆ ಎಂದು ತಿಳಿದು ಬಂದಿದೆ.

ಪ್ರಭಾಸ್ ನಟನೆಯ ಬಾಹುಬಲಿ 2 ಹಿಂದಿಯಲ್ಲಿ 510.99 ಕೋಟಿ ರೂ. ಹಾಗೂ ಅಮೀರ್ ಖಾನ್ ನಟನೆಯ ದಂಗಲ್​​ 387.38 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ಇದೀಗ ಕೆಜಿಎಫ್​ ಚಾಪ್ಟರ್​ 2 ಅನೇಕ ದಾಖಲೆಗಳನ್ನು ಬರೆಯುತ್ತಿದ್ದು, ಟೈಗರ್ ಜಿಂದಾ ಹೈ, ಪಿಕೆ ಹಾಗೂ ಸಂಜು ಚಿತ್ರ ನಿರ್ಮಿಸಿದ್ದ ದಾಖಲೆಗಳನ್ನು ಪುಡಿಗಟ್ಟಿದೆ.

ಇದಕ್ಕೆ ಸಂಬಂಧಿಸಿದಂತೆ ಸಿನಿಮಾ ವಿಶ್ಲೇಷಕ ತಾರಕ್​ ಆದರ್ಶ್​ ಎಂಬುವವರು ಟ್ವೀಟ್ ಸಹ ಮಾಡಿದ್ದು, ಹಿಂದಿಯಲ್ಲಿ ಅತಿ ಹೆಚ್ಚು ಹಣ ಗಳಿಕೆ ಮಾಡಿರುವ 3ನೇ ಚಿತ್ರವಾಗಿ ಕೆಜಿಎಫ್​​ 2 ಹೊರಹೊಮ್ಮಿದೆ ಎಂದು ತಿಳಿಸಿದ್ದಾರೆ. ಏಪ್ರಿಲ್ 14ರಂದು ಕನ್ನಡ, ಹಿಂದಿ, ಮಲಯಾಳಂ, ತಮಿಳು ಹಾಗೂ ತೆಲುಗು ಭಾಷೆಗಳಲ್ಲಿ ಕೆಜಿಎಫ್​ ಚಾಪ್ಟರ್ 2 ಚಿತ್ರ ರಿಲೀಸ್​ ಆಗಿದ್ದು ಸಂಜಯ್​ ದತ್​, ರವೀನಾ ಟಂಡನ್​, ಶ್ರೀನಿಧಿ ಶೆಟ್ಟಿ, ಪ್ರಕಾಶ್ ರಾಜ್​​ ಸೇರಿದಂತೆ ಅನೇಕರು ನಟನೆ ಮಾಡಿದ್ದಾರೆ.

See also  ಖ್ಯಾತ ಹಿಂದಿ ಕಿರುತೆರೆ ನಟ ಅನುಪಮ್ ಶ್ಯಾಮ್ ನಿಧನ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12792
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು