ಬೆಂಗಳೂರು : ಆ ದಿನಗಳು ಖ್ಯಾತಿಯ ಕೆಎಂ ಚೈತನ್ಯ ಹಾಗೂ ದೂದ್ ಫೇಢಾ ದಿಗಂತ್ ಕಾಂಬಿನೇಷನ್ ನಲ್ಲಿ ಹೊಸ ಸಿನಿಮಾವೊಂದು ಸಿದ್ಧವಾಗುತ್ತಿದೆ.
ಸಿನಿಮಾ ಸಂಬಂಧ ಮಾತುಕತೆಗಳು ನಡೆಯುತ್ತಿದೆ, ಇದೊಂದು ಕಾಮಿಡಿ ಸಿನಿಮಾವಾಗಿದ್ದು, ಕಥೆ ಸಂಬಂಧ ಚರ್ಚೆಗಳು ನಡೆಯುತ್ತಿವೆ.
ಮಲಯಾಳಂ ಪ್ರಸಿದ್ಧ ನಟರೊಬ್ಬರು ಸಿನಿಮಾ ನಿರ್ಮಾಣಕ್ಕೆ ಬಂಡವಾಲ ಹೂಡುತ್ತಿದ್ದಾರೆ, ಸೆಪ್ಟಂಬರ್ ತಿಂಗಳಲ್ಲಿ ಶೂಟಿಂಗ್ ಆರಂಭಿಸಲು ನಿರ್ದೇಶಕರು ಯೋಜಿಸಿದ್ದಾರೆ. ಸಿನಿಮಾದ ನಿರ್ಮಾಪಕರು, ಉಳಿದ ಕಲಾವಿದರ ಬಗ್ಗೆ ಶೀಘ್ರದಲ್ಲೇ ಮಾಹಿತಿ ನೀಡಲಾಗುವುದು.