ಸ್ಯಾಂಡಲ್ವುಡ್: ನಟ ಪುನೀತ್ ರಾಜ್ಕುಮಾರ್ ಅವರ ಜನ್ಮದಿನದ ಸಂದರ್ಭ ಅಭಿಮಾನಿಗಳು ಡಾ.ರಾಜ್ಕುಮಾರ್ ಹುಟ್ಟೂರಾದ ಗಾಜನೂರಿಗೆ ಸೈಕಲ್ ಜಾಥಾ ಹಮ್ಮಿಕೊಂಡಿದ್ದಾರೆ.
ಗುರುವಾರ ಮಳವಳ್ಳಿಯಿಂದ ಗಾಜನೂರಿನವರೆಗೆ 90 ಕಿಮೀ ಸೈಕಲ್ ಯಾತ್ರೆ ನಡೆಯಲಿದೆ. ಅಲ್ಲಿ ಪುನೀತ್ ಹುಟ್ಟು ಹಬ್ಬ ಆಚರಿಸಲಿದ್ದಾರೆ.
ಪುನೀತ್ ಅವರಿಗೆ ಸೈಕಲ್ ಸವಾರಿ ಎಂದರೆ ಇಷ್ಟ. ಬಿಡುವಿನಲ್ಲಿ ಸೈಕಲ್ ಸವಾರಿ ಮಾಡುತ್ತಿದ್ದರು. 202 ಕಿಲೋಮೀಟರ್ ಸೈಕಲ್ ಜಾಥಾ ನಡೆಯಲಿದೆ.
ಪುನೀತ್ ರಾಜ್ಕುಮಾರ್ ಸಮಾಧಿಯಿಂದ ಮಾರ್ಚ್ 16ರಂದು ಜಾಥಾ ಆರಂಭವಾಗಿದೆ. ಐಸೈಕಲ್ ಸೈಕಲ್ ಸವಾರಿ ತಂಡದ 20 ಜನರು ಈ ಜಾಥಾದಲ್ಲಿ ಭಾಗವಹಿಸಿದ್ದಾರೆ. ಮೊದಲ ದಿನ 112 ಕಿ.ಮೀ ದೂರ ಜಾಥಾ ನಡೆಯಲಿದೆ.