News Karnataka Kannada
Thursday, April 18 2024
Cricket
ಸಾಂಡಲ್ ವುಡ್

ಮಾರ್ಚ್ 03 ‘ವಿಶ್ವ ಕನ್ನಡ ಸಿನಿಮಾ ದಿನ’: ಸಿಎಂ ಘೋಷಣೆ

International Film Festival
Photo Credit : News Kannada

ಬೆಂಗಳೂರು: 13ನೇ ಬೆಂಗಳೂರು ಅಂತರಾಷ್ಟ್ರೀಯ ಸಿನಿಮಾ ಉತ್ಸವ ಉದ್ಘಾಟಿಸಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ ಕನ್ನಡ ಸಿನಿಮಾದಲ್ಲಿ ಮಾರ್ಚ್ 03 ಮಹತ್ವದ ದಿನವಾಗಿದ್ದು ಈ ದಿನವನ್ನು ವಿಶ್ವ ಕನ್ನಡ ಸಿನಿಮಾ ದಿನವನ್ನಾಗಿ ಆಚರಿಸಲಾಗುವುದು ಎಂದರು.

ಇಂದಿಗೆ ಸರಿಯಾಗಿ 88 ವರ್ಷಗಳ ಹಿಂದೆ 1934 ರಲ್ಲಿ ಮಾರ್ಚ್ 03ರಂದೇ ಕನ್ನಡದ ಮೊದಲ ಸಿನಿಮಾ ‘ಸತಿ ಸುಲೋಚನಾ’ ಬಿಡುಗಡೆ ಆಗಿತ್ತು. ಹಾಗಾಗಿ ಇದೇ ದಿನವನ್ನು ‘ವಿಶ್ವ ಕನ್ನಡ ದಿನ’ವನ್ನಾಗಿ ಘೋಷಿಸಲಾಗಿದೆ.

ಸಮಾರಂಭದಲ್ಲಿ ಮಾತನಾಡಿದ ಬಸವರಾಜ ಬೊಮ್ಮಾಯಿ ಅವರು, ”ಕನ್ನಡ ಚಿತ್ರರಂಗ ಉಳಿಯಬೇಕಾದರೆ ವಿಶೇಷ ಶ್ರಮವನ್ನು ನಾವು ಹಾಕಬೇಕಾಗುತ್ತೆ. ‘ಸ್ಪೆಶಲ್ ಎಫೆಕ್ಟ್’ ಜೊತೆಗೆ ‘ಸ್ಪೆಷಲ್ ಎಫರ್ಟ್’ ಸಹ ಬೇಕು. ಕನ್ನಡ ಉಳಿಸಲು ಸಿನಿಮಾಗಳ ಅಗತ್ಯವೂ ಇದೆ. ಪ್ರಸ್ತುತ ಹಲವು ಚಿತ್ರಂದಿರಗಳು ಮುಚ್ಚುತ್ತಿವೆ. ಚಿತ್ರಮಂದಿರಗಳು ಉಳಿಯಲು ಹೊಸ ತಂತ್ರಜ್ಞಾನದ ಚಿತ್ರರಂಗ ದೊರೆಯಬೇಕು. ಕುಟುಂಬದವರು ಮತ್ತೆ ಒಟ್ಟಾಗಿ ಬಂದು ಸಿನಿಮಾ ನೋಡುವಂತೆ ಮಾಡಬೇಕು. ಇದಕ್ಕೆ ಸರ್ಕಾರ ಎಲ್ಲರೀತಿಯ ಸಹಕಾರ ನಿಡಲಿದೆ ಎಂದು ಭರವಸೆಯನ್ನು ನೀಡಿದರು.

ಅಗಲಿದ ನಟ ಪುನೀತ್ ರಾಜ್‌ಕುಮಾರ್ ಅವರನ್ನು ನೆನೆದ ಸಿಎಂ, ”ಪುನೀತ್ ರಾಜ್‌ಕುಮಾರ್ ಅವರು, ಸಮಾಜಕ್ಕೆ ಮತ್ತು ಚಲನಚಿತ್ರ ರಂಗಕ್ಕೆ ಕೊಟ್ಟ ಕೊಡುಗೆ ದೊಡ್ಡದು, ಅವರ ಕೊಡುಗೆ ಶಾಶ್ವತವಾಗಿ ಉಳಿಯಲಿದೆ. ಪುನೀತ್ ಅವರಿಗೆ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿ ನಿಡಲು ನಿರ್ಧರಿಸಿದ್ದೇವೆ. ಶೀಘ್ರದಲ್ಲೇ ದಿನಾಂಕ ಪ್ರಕಟಿಸಲಾಗುವುದು. ಮೈಸೂರಿನಲ್ಲಿ ಚಿತ್ರನಗರಿ ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತೆ” ಎಂದರು. ಜೊತೆಗೆ ಪುಟ್ಟಣ್ಣ ಕಣಗಾಲ್ ನಿವಾಸವನ್ನು ಸ್ಮಾರಕ ಮಾಡುವ ಬಗ್ಗೆಯೂ ಚರ್ಚಿಸುವುದಾಗಿ ಹೇಳಿದರು.

ಬೆಂಗಳೂರು ಅಂತರಾಷ್ಟ್ರೀಯ ಸಿನಿಮೋತ್ಸವವನ್ನು ಸಿಎಂ ಬಸವರಾಜ ಬೊಮ್ಮಾಯಿ, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನಿಲ್ ಪುರಾಣಿಕ್, ಭಾರತಿ ವಿಷ್ಣುವರ್ಧನ್, ಮಲಯಾಳಂ ಚಿತ್ರರಂಗದ ನಿರ್ದೇಶಕ ಪ್ರಿಯದರ್ಶನ್ ಇತರರು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ನಟ ದರ್ಶನ್ ಭಾಗವಹಿಸಿದ್ದರು. ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್, ಮುನಿರತ್ನ ಅವರುಗಳು ಸಹ ಹಾಜರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12795
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು