ಬೆಂಗಳೂರು : ‘ಐ ಲವ್ ಯೂ ರಚ್ಚು’ ಸಿನಿಮಾದ ಚಿತ್ರೀಕರಣ ವೇಳೆ ಹೈಟೆನ್ಷನ್ ವಿದ್ಯುತ್ ತಂತಿ ತಗುಲಿ ಫೈಟರ್ ವಿವೇಕ್ ಮೃತಪಟ್ಟಿದ್ದಾರೆ ಘಟನೆ ಇಡೀ ಚಿತ್ರರಂಗವನ್ನು ಬೆಚ್ಚಿಬೀಳಿಸಿದೆ. ಈ ಸಂಬಂಧ ಈ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮೂವರನ್ನು ಬಂಧಿಸಿದ್ದಾರೆ. ಇನ್ನು ನಿರ್ಮಾಪಕ ಗುರುದೇಶಪಾಂಡೆ ಪರಾರಿಯಾಗಿದ್ದು, ಇದುವರೆಗೂ ಪೊಲೀಸರ ಸಂಪರ್ಕಕ್ಕೆ ಸಿಕ್ಕಿಲ್ಲ. ಆದರೆ ಮೃತ ವಿವೇಕ್ ಕುಟುಂಬದ ಜೊತೆ ಮಾತನಾಡಿದ್ದು, 10 ಲಕ್ಷ ಪರಿಹಾರ ಕೊಡುವುದಾಗಿ ಹೇಳಿರುವ ಮಾಹಿತಿ ತಿಳಿದುಬಂದಿದೆ.
ಇನ್ನು ಈ ಬಗ್ಗೆ ನಟ ಅಜಯ್ ರಾವ್ ಮಾತನಾಡಿ ಕುಟುಂಬದ ಜೊತೆ ಮಾತನಾಡುವ ಪ್ರಯತ್ನ ಮಾಡುತ್ತಿರುವುದಾಗಿ ಹೇಳಿದ್ದರು. ಅಲ್ಲದೆ ಘಟನೆ ನಡೆದ ಸ್ಥಳದಲ್ಲಿ ನಟ ಅಜಯ್ ರಾವ್ ಕೂಡ ಇದ್ದರು.