ಬೆಂಗಳೂರು : ರಾಜ್ ಸೂರ್ಯ ನಿರ್ದೇಶನದ ‘ಬೆಂಗಳೂರು ಬಾಯ್ಸ್’ ಚಿತ್ರದ ಮೊದಲ ಹಂತದ ಶೂಟಿಂಗ್ ಪೂರ್ಣಗೊಂಡಿದೆ.
ಕಳೆದ ವರ್ಷ ಮಾರ್ಚ್ ನಲ್ಲಿ ಶೂಟಿಂಗ್ ಆರಂಭಿಸಲು ಚಿತ್ರ ತಂಡ ನಿರ್ಧರಿಸಿತ್ತು, ಆದರೆ ಕೊರೋನಾ ಸಾಂಕ್ರಾಮಿಕದ ಕಾರಣ ಪ್ರಾಜೆಕ್ಟ್ ಹಲವು ತಿಂಗಳುಗಳ ಕಾಲ ವಿಳಂಬವಾಯಿತು. ಇತ್ತೀಚೆಗೆ ಚಿತ್ರ ತಂಡ ಶೂಟಿಂಗ್ ಆರಂಭಿಸಿದ್ದು ಮೊದಲ ಹಂತದ ಚಿತ್ರೀಕರಣ ಪೂರ್ಣಗೊಳಿಸಿದೆ.
ಈ ಚಿತ್ರದಲ್ಲಿ ಸಚ್ಚಿನ್ ಗೋಪಾಲಸ್ವಾಮಿ , ಚಂದನ್ ಆಚಾರ್, ಫೇಸ್ ಟು ಫೇಸ್ ಖ್ಯಾತಿಯ ರೋಹಿತ್ ಮತ್ತು ಅಭಿಷೇಕ್ ಪ್ರಮುಖ ಪಾತ್ರಗಳಲ್ಲಿದ್ದಾರೆ, ಇನ್ನೂ ವೈನಿಧಿ ಜಗದೀಶ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ, ಇದರ ಜೊತೆಗೆ ಹಾಸ್ಯ ಕಲಾವಿದ ಚಿಕ್ಕಣ್ಣ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.