News Kannada
Saturday, November 26 2022

ಸಾಂಡಲ್ ವುಡ್

ಒಟಿಟಿ ಪ್ಲಾಟ್‌ಫಾರಂ ನಲ್ಲಿ ರಿಲೀಸ್‌ ಆದ ದೊಡ್ಡ ರಂಗೇ ಗೌಡರ ಹಾರುವ ಹಂಸಗಳು - 1 min read

Photo Credit :

ಬೆಂಗಳೂರು, -ಮೊಬೈಲ್‍ನಿಂದಾಗುವ ಅನುಕೂಲ ಮತ್ತು ಅನಾನುಕೂಲಗಳನ್ನು ತಿಳಿಸಿಕೊಡುವ ಒಂದು ಅದ್ಭುತ ಮಕ್ಕಳ ಸಿನಿಮಾವನ್ನು ಖ್ಯಾತ ಸಾಹಿತಿ ಪದ್ಮಶ್ರೀ ಪ್ರಶಸ್ತಿ ಪುರಸ್ಕøತರಾದ ಡಾ.ದೊಡ್ಡರಂಗೇಗೌಡರ ನಿರ್ದೇಶನದಲ್ಲಿ ನಮ್ಮ ಫ್ಲಿಕ್ಸ್ ಸಂಸ್ಥೆ ಹೊರತಂದಿದೆ. ಈ ಮಕ್ಕಳ ಸಿನಿಮಾದ ಹೆಸರು ಹಾರುವ ಹಂಸಗಳು. ಡಾ.ದೊಡ್ಡರಂಗೇಗೌಡರು ರಚಿಸಿದ ಆತಂಕ ಎಂಬ ಕೃತಿಯನ್ನು ಆಧರಿಸಿ ಅವರೇ ಕಥೆ, ಚಿತ್ರಕಥೆ, ಸಾಹಿತ್ಯ ಹಾಗೂ ನಟನೆಯಲ್ಲೂ ತೊಡಗಿಸಿಕೊಂಡಿರುವುದಲ್ಲದೆ ಇದೇ ಮೊದಲ ಬಾರಿಗೆ ಈ ಚಲನಚಿತ್ರಕ್ಕ ಆ್ಯಕ್ಷನ್ ಕಟ್ ಸಹ ಹೇಳಿದ್ದಾರೆ. ದೀಪಾಂಕರ್ ಫಿಲಂ ಚಲನಚಿತ್ರವನ್ನು ಅರ್ಪಿಸುತ್ತಿದೆ.
ಇದೊಂದು ಕಲಾತ್ಮಕ ಮತ್ತು ಶೈಕ್ಷಣಿಕ ಚಿತ್ರ. ಪಟ್ಟಣದ ಮಕ್ಕಳಿಗೆ ಹಳ್ಳಿ ಮತ್ತು ಹಳ್ಳಿಯ ಬದುಕಿನ ದರ್ಶನವನ್ನು ಈ ಚಲನಚಿತ್ರದ ಮೂಲಕ ಮಾಡಿಸಿದ್ದಾರೆ. ಈ ಚಿತ್ರದಲ್ಲಿ ಮೊಬೈಲ್‍ನಿಂದಾಗುವ ಅನುಕೂಲ, ಅನಾನುಕೂಲ ತಿಳಿಸಿಕೊಟ್ಟಿದ್ದಾರದೆ ನಗರ ಜೀವನದಲ್ಲಿ ಮೊಬೈಲ್ ಘೀಳಿಗೆ ಅಂಟಿಕೊಂಡು ಮಕ್ಕಳು ಮತ್ತು ವಯಸ್ಕರು ಜೀವನದಲ್ಲಿ ಹೇಗೆ ಹತಾಶರಾಗಿರುತ್ತಾರೆ, ಇದರಿಂದ ಸುತ್ತಮುತ್ತಲಿನ ಮತ್ತು ಮನೆಯವರ ಮನಸ್ಸಿಗೆ ಎಂಥ ಬೇಸರವನ್ನು ತಂದಿರುತ್ತಾರೆ ಎಂಬುದನ್ನೇ ಒಂದು ಸುಂದರ ಕಥೆಯನ್ನಾಗಿ ಮಾಡಿ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.
ಚಿತ್ರವು ಒಟಿಟಿ ಪ್ಲಾಟ್‌ ಫಾರಂ ನಲ್ಲಿ ಆಗಸ್ಟ್‌ 12 ರಂದು ಬಿಡುಗಡೆಗೊಂಡಿದೆ.

See also  ಸೀತಾರಾಂ ಬಿನೊಯ್ ಸಿನಿಮಾ ತೆರೆಗೆ ಬರಲು ಸಿದ್ಧ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು