ಬೆಂಗಳೂರು : ಕವಲುದಾರಿ ಸಿನಿಮಾ ಖ್ಯಾತಿಯ ನಿರ್ದೇಶಕ ಹೇಮಂತ್ ಎಂ ರಾವ್ ನಿರ್ದೇಶನದ ಇನ್ನೊಂದು ಸಿನೆಮಾ ಸಪ್ತ ಸಾಗರದಾಚೆ ಯೆಲ್ಲೋ ಚಿತ್ರ ಎರಡನೇ ಹಂತದ ಶೂಟಿಂಗ ಆಗಸ್ಟ್ 16 ರಿಂದ ಆರಂಭವಾಗಿದೆ.
ಸದ್ಯ ಮತ್ತೆ ಶೂಟಿಂಗ್ ಆರಂಭಿಸಿರುವ ಚಿತ್ರ ತಂಡ ಬೆಂಗಳೂರಿನಲ್ಲಿ 35 ದಿನಗಳ ಕಾಲ ಚಿತ್ರೀಕರಣ ನಡೆಸಲಿದೆ. ಅದಾದ ನಂತರ ಸಿನಿಮಾ ತಂಡ ಶಿವಮೊಗ್ಗಕ್ಕೆ ತೆರಳಲಿದ್ದು, ಅದಕ್ಕೂ ಮುನ್ನ ಸ್ವಲ್ಪ ಸಮಯ ಬ್ರೇಕ್ ತೆಗೆದುಕೊಳ್ಳಲಿದೆ ಎಂದು ನಿರ್ದೇಶಕರು ತಿಳಿಸಿದ್ದಾರೆ.