News Kannada
Thursday, March 30 2023

ಸಾಂಡಲ್ ವುಡ್

ಬಿಗ್ ಬಾಸ್ ಸ್ಪರ್ಧಿ ರಾಜೀವ್ ಚಿತ್ರಕ್ಕೆ ಶುಭಹಾರೈಸಿದ ಕಿಚ್ಚ

Photo Credit :

ಬೆಂಗಳೂರು : ಬಿಗ್ ಬಾಸ್ ನ ಸ್ಪರ್ಧಿಯಾಗಿದ್ದ  ರಾಜೀವ್ “ಉಸಿರೇ ಉಸಿರೇ” ಚಿತ್ರದ ನಾಯಕನಾಗಿ ನಟಿಸುತ್ತಿದ್ದಾರೆ. ಇಲ್ಲಿನ ಖಾಸಗಿ ಹೋಟೆಲೋಂದರಲ್ಲಿ  ಚಿತ್ರದ  ಪೋಸ್ಟರ್ ಬಿಡುಗಡೆ ಸಮಾರಂಭ ಅದ್ದೂರಿಯಾಗಿ ನೆರವೇರಿತು. ಮೋಷನ್ ಪೋಸ್ಟರ್ ಬಿಡುಗಡೆಗೊಳಿಸಿದ ಕಿಚ್ಚ ಸುದೀಪ ಚಿತ್ರ ತಂಡಕ್ಕೆ ಶುಭ ಹಾರೈಸಿದರು.

“ನಾನು ಈ ಸಮಾರಂಭಕ್ಕೆ ಬರಲು ಮುಖ್ಯ ಕಾರಣ ರಾಜೀವ. ಅವನಲ್ಲಿ ಈಗಲೂ ಏನೋ ಒಂಥರ ಮುಗ್ಧತೆ ಇದೆ. ಎಲ್ಲವನ್ನೂ ಬೇಗ ನಂಬಿ ಬಿಡುತ್ತಾನೆ. ಪುಣ್ಯ. ಅವನ ಪಕ್ಕದಲ್ಲಿರುವ ಹೆಂಡತಿ ಜಾಣೆ. ಆ ಹುಡುಗಿ ಇವನಿಗೆ ಎಲ್ಲವನ್ನೂ ಹೇಳಿ ಕೊಡುತ್ತಿದ್ದಾರೆ. ಸಿ.ಸಿ.ಎಲ್ ದಿನಗಳಿಂದಲೂ ನನಗೆ ಈತ ಪರಿಚಯ. ಅವನು ಕ್ರಿಕೆಟ್ ಸರಿಯಾಗಿ ಅಭ್ಯಾಸ ಮಾಡಿದ್ದರೆ, ಇಷ್ಟೊತ್ತಿಗೆ ರಾಜ್ಯ ಮಟ್ಟದಲ್ಲಿ ಆಡುತ್ತಿದ್ದ. ಈ ಸಿನಿಮಾದಿಂದ ರಾಜೀವ್ ಗೆ ಒಳ್ಳೆಯದಾಗಲಿ” ಎಂದರು.

ಕಿಚ್ಚ ಸುದೀಪ್​ ಅವರಿಗೆ ಚಿತ್ರತಂಡ ಬೆಳ್ಳಿ ಪೆನ್ ​ಅನ್ನು ಉಡುಗರೆಯಾಗಿ ನೀಡಿದರು. ಈ ಪೆನ್​ ಅನ್ನು ಸುದೀಪ್​ ಅವರು ನಿರ್ದೇಶಕರಿಗೆ ನೀಡಿ, ನಿಮ್ಮ ಮುಂದಿನ ಕೆಲಸಗಳೆಲ್ಲಾ ಸುಲಲಿತವಾಗಿ ನಡೆಯಲಿ ಎಂದು ಹಾರೈಸಿದರು. ನಮ್ಮ ನಾಲ್ಕು ವರ್ಷಗಳ ಶ್ರಮಕ್ಕೆ ಈಗ ಉತ್ತಮ ಕಾಲ ಕೂಡಿ ಬಂದಿದೆ.‌ ಎಲ್ಲರ ಹಾರೈಕೆಯು ನಮಗಿರಲಿ’ ಎಂದು ಕೋರಿದರು ರಾಜೀವ್​.

ಎನ್ ಗೊಂಬೆ ಪ್ರೊಡಕ್ಷನ್ಸ್ ಲಾಂಛನದಲ್ಲಿ ಪ್ರದೀಪ್ ಯಾದವ್  ನಿರ್ಮಿಸುತ್ತಿರುವ ಈ ಚಿತ್ರದಲ್ಲಿ ರಾಜೀವ್​ಗೆ ನಾಯಕಿಯಾಗಿ ಶ್ರೀಜಿತ ಘೋಷ್ ನಟಿಸುತ್ತಿದ್ದಾರೆ. ಚಿತ್ರಕ್ಕೆ ವಿವೇಕ್ ಚಕ್ರವರ್ತಿ ಸಂಗೀತ ಸಂಯೋಜಿಸುತ್ತಿದ್ದು, ಶರವಣನ್ ಛಾಯಾಗ್ರಹಣವಿದೆ.

See also  ದುಡ್ಡಿಗೋಸ್ಕರ ಸಿನಿಮಾ ಮಾಡುವುದಿಲ್ಲ: ನಟಿ ಪ್ರೇಮಾ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

44
News Kannada

The most exciting, trusted and preferred news websites of Karnataka and Kannadigas around the world.

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು