NewsKarnataka
Thursday, November 25 2021

ಸಾಂಡಲ್ ವುಡ್

ಅಭಿಮಾನಿಗಳಲ್ಲಿ ಆಕ್ಷನ್ ಪ್ರಿನ್ಸ್ ಮನವಿ

ಬೆಂಗಳೂರು : ಕೊರೊನಾ ಮಹಾಮಾರಿ ಎಲ್ಲ ಸ್ಟಾರ್ ಗಳ ಅದ್ಧೂರಿ ಬರ್ತ್‌ಡೇ ಗೆ ಬ್ರೇಕ್‌ ಹಾಕಿದೆ. ಈ ವರ್ಷ ಕೂಡ ಬಹುತೇಕ ಎಲ್ಲ ಸ್ಟಾರ್ ಸರಳವಾಗಿ ತಮ್ಮ ಬರ್ತ್‌ಡೇ ಆಚರಣೆಗೆ ಅಭಿಮಾನಿಗಳಿಗೆ ಕರೆ ನೀಡಿದ್ದು, ಈಗಾಗಲೇ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌, ಕಿಚ್ಚ ಸುದೀಪ್‌, ರಿಯಲ್‌ ಸ್ಟಾರ್‌ ಉಪೇಂದ್ರ, ಹ್ಯಾಟ್ರಿಕ್‌ ಹೀರೋ ಶಿವರಾಜಕುಮಾರ್‌, ಪವರ್‌ಸ್ಟಾರ್‌ ಪುನೀತ್‌ ರಾಜಕುಮಾರ್‌, ರಾಕಿಂಗ್‌ ಸ್ಟಾರ್‌ ಯಶ್‌ ಸರಳವಾಗಿ ತಮ್ಮ ಹುಟ್ಟುಹಬ್ಬ ಆಚರಿಸಿದ್ದಾರೆ. ಈಗ ಈ ಸರದಿ ನಟ ಧ್ರುವ ಸರ್ಜಾ ಅವರದ್ದು.

ಇದೇ ಅಕ್ಟೋಬರ್‌ 6ರಂದು ನಟ ಧ್ರುವ ಸರ್ಜಾ ಅವರ ಬರ್ತ್‌ಡೇ. “ಅದ್ಧೂರಿ’ ಚಿತ್ರದ ಬಳಿಕ ಧ್ರುವ ಸರ್ಜಾ ಬರ್ತ್‌ಡೇಯನ್ನು ಅವರ ಅಭಿಮಾನಿಗಳು ಅದ್ಧೂರಿಯಾಗಿಯೇ ಆಚರಿಸಿಕೊಂಡು ಬರುತ್ತಿದ್ದಾರೆ. ಆದರೆ ಕಳೆದ ವರ್ಷದಿಂದ ಕೋವಿಡ್‌ ಆತಂಕ ಧ್ರುವ ಸರ್ಜಾ ಅವರ ಅದ್ಧೂರಿ ಬರ್ತ್‌ಡೇಗೂ ಬ್ರೇಕ್‌ ಹಾಕಿದೆ. ಕಳೆದ ವರ್ಷದಂತೆ, ಈ ವರ್ಷ ಕೂಡ ಧ್ರುವ ಸರ್ಜಾ ಸರಳವಾಗಿ ತಮ್ಮ ಜನ್ಮದಿನ ಆಚರಿಸಲು ನಿರ್ಧರಿಸಿದ್ದಾರೆ.

ತಮ್ಮ ಜನ್ಮದಿನಕ್ಕೂ ಎರಡು ದಿನಗಳ ಮುಂಚೆ, ಇನ್ಸಾಗ್ರಾಮ್‌ ಖಾತೆಯಲ್ಲಿ ವಿಡಿಯೋವನ್ನು ಹಂಚಿಕೊಂಡಿರುವ ಧ್ರುವ ಸರ್ಜಾ, “ಇದೇ ಅ. 6 ನೇ ತಾರಿಖು ನನ್ನ ಹುಟ್ಟುಹಬ್ಬ ಇದೆ. ನಾನು ದೊಡ್ಡ ಸೆಲಿಬ್ರೆಟಿ ಅಲ್ಲ, ಆದರೂ ಈ ಬಾರಿ ನನ್ನ ಹುಟ್ಟುಹಬ್ಬವನ್ನು ಆಚರಿಸುವ ಮನಸ್ಸು ನನಗಿಲ್ಲ’ ಎಂದು ಅಭಿಮಾನಿಗಳಲ್ಲಿ ವಿನಂತಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

Leave a Reply

Your email address will not be published. Required fields are marked *

News Kannada

The most exciting, trusted and preferred news websites of Karnataka and Kannadigas around the world.

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

error: Content is protected !!