News Kannada
Monday, December 05 2022

ಸಾಂಡಲ್ ವುಡ್

ಅರ್ಧಶತಕದತ್ತ ಲೂಸ್ ಮಾದ ಯೋಗಿ ‘ಲಂಕೆ’ಯ ಗೆಲುವಿನ ಓಟ

Photo Credit :

ಬೆಂಗಳೂರು : ಲೂಸ್ ಮಾದ ಯೋಗೇಶ್ ಅಭಿನಯದ ಚಿತ್ರ‌‌ ಇಪ್ಪತ್ತೈದು ದಿನಗಳನ್ನು ಪೂರೈಸಿ, ಐವತ್ತನೇ ದಿನದತ್ತ ಮುನ್ನುಗ್ಗುತ್ತಿದೆ. ಗಣೇಶ ಚತುರ್ಥಿಯಂದು ತೆರೆ ಕಂಡ ಚಿತ್ರ ಬಿಡುಗಡೆಯಾದ ಎಲ್ಲಾ ಭಾಗಗಳಲ್ಲೂ ಹೌಸ್ ಫುಲ್ ಪ್ರದರ್ಶನದೊಂದಿಗೆ ಯಶಸ್ವಿ 25ದಿನಗಳನ್ನು ಪೂರೈಸಿ ಗೆಲುವಿನ ನಗೆ ಬೀರಿದೆ.

ಲಂಕೆ ಬಿಡುಗಡೆ ಸಂದರ್ಭದಲ್ಲಿ ಚಿತ್ರಮಂದಿರದಲ್ಲಿ ಶೇಕಡಾ 50ರಷ್ಟು ಆಸನ ಭರ್ತಿಗೆ ಮಾತ್ರ ಅವಕಾಶವಿತ್ತು. ಆದರೂ ಸಿನಿಮಾ ಕಂಟೆಂಟ್ ಮೇಲೆ ನಂಬಿಕೆ ಇಟ್ಟು ಬರೋಬ್ಬರಿ 200
ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿಯೇ ಸಿನಿಮಾ ಬಿಡುಗಡೆ ಮಾಡಿತ್ತು ಚಿತ್ರತಂಡ. ನಿರೀಕ್ಷೆಯಂತೆ ಚಿತ್ರ ಪ್ರೇಮಿಗಳ ಮನ ಗೆಲ್ಲುವಲ್ಲಿ ಲಂಕೆ ಸಿನಿಮಾ ಯಶಸ್ವಿಯಾಗಿದ್ದು, ಗಲ್ಲಾ ಪೆಟ್ಟಿಗೆಯಲ್ಲೂ ಸಖತ್ ಕಮಾಯಿ ಮಾಡಿದೆ. ಅಷ್ಟೇ ಅಲ್ಲ ಒಂದು ಬಿಗ್ ಕಂ ಬ್ಯಾಕ್ ಗಾಗಿ ಕಾಯುತ್ತಿದ್ದ ಯೋಗಿಗೂ ಲಂಕೆ ಚಿತ್ರತಂಡ ದೊಡ್ಡ ಗೆಲುವನ್ನು ತಂದು ಕೊಟ್ಟಿದೆ. 25ದಿನಗಳನ್ನು ಯಶಸ್ವಿಯಾಗಿ ಪೂರೈಸಿ 50 ದಿನದತ್ತ ಹೆಜ್ಜೆ ಹಾಕುತ್ತಿರುವ ಚಿತ್ರತಂಡದ ಸಂಭ್ರಮವನ್ನು ನೂರ್ಮಡಿಗೊಳಿಸಿದ್ದು ಡಬ್ಬಿಂಗ್ ರೈಟ್ಸ್. ಹೌದು, ತೆಲುಗಿನ ಖ್ಯಾತನಾಮರೊಬ್ಬರು ಈ ಚಿತ್ರದ ಡಬ್ಬಿಂಗ್ ರೈಟ್ಸ್ ಭಾರೀ ಮೊತ್ತಕ್ಕೆ ಖರೀದಿಸಿದ್ದು, ಇಡೀ ಚಿತ್ರತಂಡ ದಿಲ್ ಖುಷ್ ಆಗಿದೆ.

ರಾಮ್ ಪ್ರಸಾದ್ ನಿರ್ದೇಶನದಲ್ಲಿ ಮೂಡಿ ಅದ್ದೂರಿ ಚಿತ್ರ ಲಂಕೆ. ಮಾಸ್ ಆಕ್ಷನ್ ಸಬ್ಜೆಕ್ಟ್ ಒಳಗೊಂಡ ಈ ಚಿತ್ರ ಔಟ್ ಅಂಡ್ ಔಟ್ ಕಮರ್ಶಿಯಲ್ ಎಳೆ ಕಥಾಹಂದರ ಒಳಗೊಂಡಿದೆ. ಯೋಗಿ ನಯಾ ಖದರ್ ಪ್ರೇಕ್ಷಕರಿಗೆ ಹಾಗೂ ಯೋಗಿ ಅಪ್ಪಟ ಅಭಿಮಾನಿ ಬಳಗಕ್ಕೆ ಸಿಕ್ಕಾಪಟ್ಟೆ ಕಿಕ್ ನೀಡಿದೆ. ಕೃಷಿ ತಾಪಂಡ, ಕಾವ್ಯಾ ಶೆಟ್ಟಿ ಎಸ್ಟರ್ ನರೋನ್ಹಾ ನಾಯಕಿಯರನ್ನೊಳಗೊಂಡ ಚಿತ್ರದಲ್ಲಿ, ಚಂದನವನದ ಖ್ಯಾತನಟರಾದ ಸುಚೇಂದ್ರ ಪ್ರಸಾದ್, ಶರತ್ ಲೋಹಿತಾಶ್ವ, ಡ್ಯಾನಿ ಕುಟ್ಟಪ್ಪ ನಟಿಸಿದ್ದು ಚಿತ್ರದ ಕಳೆ ಹೆಚ್ಚಿಸಿದ್ದಾರೆ. ಒಟ್ನಲ್ಲಿ, ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಸೆಳೆಯೋದ್ರ ಜೊತೆ ಬಾಕ್ಸ್ ಆಫೀಸ್ ನಲ್ಲೂ ಸೌಂಡ್ ಮಾಡಿ 25 ದಿನದ ಸಂಭ್ರಮವನ್ನು ಆಚರಿಸುತ್ತಿದೆ ಯೋಗಿಯ ಲಂಕೆ ಸಿನಿಮಾ.

See also  ಕಾಂತರ ನನ್ನ ಸಿನಿ ಜೀವನದಲ್ಲಿ ಉತ್ತಮ ಚಿತ್ರವಾಗಲಿದೆ - ಸಪ್ತಮಿ ಗೌಡ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

6528

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು