News Kannada
Saturday, January 28 2023

ಸಾಂಡಲ್ ವುಡ್

‘100 ಸಿನಿಮಾ ಬಗ್ಗೆ ಸುಧಾ ಮೂರ್ತಿ ಮೆಚ್ಚುಗೆ : ಸಿನಿಮಾ ಬಗ್ಗೆ ಹೇಳಿದ್ದೇನು ಗೊತ್ತಾ..?

Photo Credit :

ಸ್ಯಾಂಡಲ್ ವುಡ್: ರಮೇಶ್ ಅರವಿಂದ್ ನಿರ್ದೇಶನ ಹಾಗೂ ನಟನೆಯಲ್ಲಿ ಮೂಡಿ ಬಂದ 100 ಸಿನಿಮಾ ಬಗ್ಗೆ ಎಲ್ಲೆಡೆ ಟಾಕ್ ಜೋರಾಗಿದೆ. ಚಿತ್ರ ಬಿಡುಗಡೆಯಾಗಿ ಪ್ರೇಕ್ಷಕರ ಮೆಚ್ಚುಗೆಯೊಂದಿಗೆ ಯಶಸ್ವಿ ಪ್ರದರ್ಶನ ಕಾಣುತ್ತಿದೆ. 100 ಸಿನಿಮಾವನ್ನ ಘಟಾನುಘಟಿಗಳು ನೋಡಿ ಮೆಚ್ಚಿಕೊಳ್ಳುತ್ತಿದ್ದಾರೆ. ಇದೀಗ ಇನ್ಫೋಸಿಸ್ ಫೌಂಡೇಶನ್ ಮುಖ್ಯಸ್ಥೆ ಸುಧಾಮೂರ್ತಿ ಕೂಡ ಸಿನಿಮಾ ನೋಡಿ ಹರ್ಷ ವ್ಯಕ್ತಪಡಿಸಿದ್ದಾರೆ.

ಸಿನಿಮಾ ನೋಡಿದ ಸುಧಾಮೂರ್ತಿಯವರಿಗೆ ಸಮಾಜದಲ್ಲಿ ಕೊಂಚ ಬದಲಾವಣೆಯನ್ನ ಈ ಸಿನಿಮಾ ತರಲಿದೆ ಅನ್ನೋ ಆಶಾದಾಯಕ ಭಾವನೆ ಮೂಡಿದೆ. ಅದೇ ಖುಷಿಯಲ್ಲಿ ಸಿನಿಮಾ ಬಗ್ಗೆ ತಮ್ಮ ಅನಿಸಿಕೆ
ಹಂಚಿಕೊಂಡಿರುವ ಸುಧಾಮೂರ್ತಿ 100 ಸಿನಿಮಾವನ್ನ ಎಲ್ಲರೂ ನೋಡಲೇಬೇಕು ಎಂದಿದ್ದಾರೆ. ಇತ್ತೀಚಿನ ದಿನಗಳಲ್ಲಿ ಮೊಬೈಲ್ ಬಳಕೆ, ಸೋಶಿಯಲ್ ಮೀಡಿಯಾ ಬಳಕೆ ಜಾಸ್ತಿಯಾಗಿದೆ. ಅಪರಿಚಿತರೊಂದಿಗೆ ಸ್ನೇಹ, ಸಲುಗೆ ನಂತರ ಅನೇಕರು ಇಕ್ಕಟ್ಟಿಗೆ ಸಿಲುಕುತ್ತಿದ್ದಾರೆ. ಜೀವಕ್ಕೆ ಕುತ್ತು ತಂದುಕೊಳ್ಳುತ್ತಿದ್ದಾರೆ. ಇದರ ಬಗ್ಗೆ ಎಚ್ಚೆತ್ತುಕೊಳ್ಳುವ ಸಂವೇದನಾಶೀಲ ಸಿನಿಮಾ 100. ಕುಟಂಬದವರೆಲ್ಲ ಕುಳಿತು ನೋಡಲೇಬೇಕಾದ ಸಿನಿಮಾ ಎಂದು ಇಡೀ ಚಿತ್ರತಂಡವನ್ನು ಹಾಡಿ ಹೊಗಳಿದ್ದಾರೆ. ಸುಧಾಮೂರ್ತಿ ಅವರ ಮಾತು ಕೇಳಿ ಚಿತ್ರತಂಡ ಸಂಭ್ರಮವೂ ದುಪ್ಪಟ್ಟಾಗಿದೆ.

100 ಸಾಮಾಜಿಕ ಕಳಕಳಿ ಜೊತೆಗೆ ಮನರಂಜನಾತ್ಮಕ ಸಿನಿಮಾ. ಪ್ರತಿನಿತ್ಯ ನಾವೂ ಬಳಸುವ ಸೋಶಿಯಲ್ ಮೀಡಿಯಾ ಕೊಂಚ ಯಾಮಾರಿದ್ರು ಅದೆಷ್ಟು ಅಪಾಯಕಾರಿ ಅನ್ನೋದನ್ನ ಅಚ್ಚುಕಟ್ಟಾಗಿ ಸಿನಿಮಾದಲ್ಲಿ
ತೋರಿಸಿದ್ದಾರೆ. ನಟ ರಮೇಶ್ ಅರವಿಂದ್ ನಿರ್ದೇಶಿಸಿ, ನಟಿಸಿರುವ ಈ ಚಿತ್ರಕ್ಕೆ ರಚಿತಾ ರಾಮ್ ಹಾಗೂ ಪೂರ್ಣ ಜೊತೆಯಾಗಿದ್ದಾರೆ.

ಸೂರಜ್ ಪ್ರೊಡಕ್ಷನ್ ಬ್ಯಾನರ್ ನಲ್ಲಿ ರಮೇಶ್ ರೆಡ್ಡಿ ನಿರ್ಮಿಸಿರುವ ಚಿತ್ರಕ್ಕೆ ರವಿ ಬಸ್ರೂರು ಸಂಗೀತ ಸತ್ಯ ಹೆಗಡೆ ಕ್ಯಾಮೆರಾ ವರ್ಕ್, ಶ್ರೀನಿವಾಸ್ ಕಲಾಲ್ ಸಂಕಲನ, ಜಾಲಿ ಬಾಸ್ಟಿನ್ ಮತ್ತು ರವಿವರ್ಮ ಸಾಹಸ ನಿರ್ದೇಶನ, ಧನಂಜಯ ನೃತ್ಯ ಸಂಯೋಜನೆಯಿದೆ. ತಾರಾಗಣವೂ ಕಲರ್ ಫುಲ್ ಆಗಿದ್ದು, ಶೋಭರಾಜ್, ರಾಜು ತಾಳಿಕೋಟೆ, ಬೇಬಿ ಸ್ಮಯಾ, ವಿಶ್ವಕರ್ಣ, ಪ್ರಕಾಶ್ ಬೆಳವಾಡಿ, ಮಾಲತಿ ಸುಧೀರ್ ಸೇರಿದಂತೆ ಹಲವು ಕಲಾವಿದರು ಈ ಚಿತ್ರದದಲ್ಲಿ ಅಭಿನಯಿಸಿದ್ದಾರೆ.

See also  ಹೊಂಬಾಳೆ ಬ್ಯಾನರ್‌ನ ಮುಂದಿನ ಚಿತ್ರ ‘ಕಾಂತಾರ’: ರಿಷಬ್ ಶೆಟ್ಟಿ ನಿರ್ದೇಶನ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

6528
Editor's Pick

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು