ನಟ ಪುನೀತ್ ರಾಜ್‌ಕುಮಾರ್‌ಅವರ ಆಭಿಮಾನಿಗಳಿಗೆ ಅಪ್ಪು ಪತ್ನಿ ಅಶ್ವಿನಿ ಸಿಹಿ ಸುದ್ದಿ ನೀಡಿದ್ದಾರೆ. ಅದನೆಂದರೆ ʼಗಂಧದ ಗುಡಿʼ ಸಾಕ್ಷ್ಯಚಿತ್ರದ ಟೀಸರ್ ನಾಳೆ ಬೆಳಿಗ್ಗೆ (ಡಿಸೆಂಬರ್ 6) ಬಿಡುಗಡೆ ಮಾಡುವುದಾಗಿ ಘೋಷಿಸಿದ್ದಾರೆ.
ಈ ಕುರಿತು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಅಪ್ಪು ಪತ್ನಿ ಅಶ್ವಿನಿ, ‘ಹಿಂದೆಂದೂ ಕಾಣದ ಸಿನಿಮಾ ಅನುಭವ ನೀಡುವ ʼಗಂಧದ ಗುಡಿʼ ಸಾಕ್ಷ್ಯಚಿತ್ರದ ಟೀಸರ್ ನಾಳೆ ನಿಮ್ಮ ಮುಂದೆ @PRKAudio YouTube channelನಲ್ಲಿ’ ಎಂದು ಬರೆದುಕೊಂಡಿದ್ದಾರೆ.
ಪಿಆರ್‌ಕೆ ಪ್ರೊಡಕ್ಷನ್ ನಿರ್ಮಿತ ಸಾಕ್ಷ್ಯಚಿತ್ರ ಇದಾಗಿದ್ದು, ಅಕ್ಬೋಬರ್ 7ರಂದು ನಟ ಪುನೀತ್ ಅವ್ರು ಸೋಷಿಯಲ್ ಮೀಡಿಯಾದಲ್ಲಿ ಈ ಕುರಿತು ಹಂಚಿಕೊಂಡಿದ್ರು. ಅವ್ರ ಪೋಸ್ಟ್‌ನಲ್ಲಿ ಈ ಗಂಧದ ಗುಡಿ ಕುರಿತು ಈ ರೀತಿ ಬರೆದುಕೊಂಡಿದ್ದರು.
‘ದಶಕಗಳ ಹಿಂದೆ ಕಥೆಯೊಂದು ಹುಟ್ಟಿತ್ತು. ನಮ್ಮ ಜನ, ನಮ್ಮ ನೆಲದ ಹಿರಿಮೆಯನ್ನು ಮೆರೆದಿತ್ತು. ನಮ್ಮ ಅಡವಿಯ ಹಸಿರನ್ನು ಜಗತ್ತಿಗೇ ಹರಡಿತ್ತು. ಪೀಳಿಗೆಗೆ ಸ್ಫೂರ್ತಿ ನೀಡಿ ಅಜರಾಮರವಾಗಿತ್ತು. ಆ ಚರಿತ್ರೆ ಮರುಕಳಿಸುವ ಸಮಯವೀಗ ಬಂದಿದೆ’ ಎಂದಿದೆ.
ಹಿಂದೆಂದೂ ಕಾಣದ ಸಿನಿಮಾ ಅನುಭವ!
ನಿಮ್ಮ ಮುಂದೆ ನಾಳೆ @PRKAudio YouTube channelನಲ್ಲಿ.A cinematic experience like never before!
Releasing tomorrow on PRK Audio YouTube channel.@PuneethRajkumar @amoghavarsha @AJANEESHB @PRK_Productions #mudskipper pic.twitter.com/JoSCSDahQI— Ashwini Puneeth Rajkumar (@ashwinipuneet) December 5, 2021