NewsKarnataka
Wednesday, January 26 2022

ಸಾಂಡಲ್ ವುಡ್

ಮೂರೇ ದಿನದಲ್ಲಿ 20 ಕೋಟಿ ರೂ. ಬಾಚಿಕೊಂಡ ಶ್ರೀಮುರುಳಿ ಅಭಿನಯದ ಮದಗಜ

ಶ್ರೀಮುರುಳಿ ಅಭಿನಯದ ಮದಗಜ ಸಿನಿಮಾ ಬಿಡುಗಡೆ ಆದ ಮೂರೇ ದಿನದಲ್ಲಿ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿದ್ದು, ಯಶಸ್ಸಿನತ್ತ ಮುನ್ನುಗ್ಗುತ್ತಿದೆ. ಎಸ್ ಮಹೇಶ್ ಕುಮಾರ್ ನಿರ್ದೇಶನ ಹಾಗೂ ಉಮಾಪತಿ ಶ್ರೀನಿವಾಸ್ ಗೌಡ ನಿರ್ಮಾಣದ ಮದಗಜ ಸಿನಿಮಾ ಡಿಸೆಂಬರ್ 3ರಂದು 900ಕ್ಕೂ ಹೆಚ್ಚು ಥಿಯೇಟರ್ ಗಳಲ್ಲಿ ಬಿಡುಗಡೆಗೊಂಡಿದ್ದು, ಮೂರೇ ದಿನದಲ್ಲಿ 20 ಕೋಟಿ ರೂ. ಬಾಚಿಕೊಂಡಿದೆ.

ಮದಗಜ ಬಿಡುಗಡೆಗೆ ಮೊದಲೇ ಹಿಂದಿ ಡಬ್ಬಿಂಗ್ ರೈಟ್ಸ್ 8 ಕೋಟಿ ರೂ. ಹಾಗೂ ಟಿವಿ ರೈಟ್ಸ್​​ಗೆ 6 ಕೋಟಿ ರೂ.ಗೆ ಮಾರಾಟ ಆಗಿ ಬಿಡುಗಡೆಗೂ ಮುನ್ನವೇ ಖರ್ಚು ಮಾಡಿದ್ದರ ಅರ್ಧದಷ್ಟು ಜೇಬು ತುಂಬಿಸಿಕೊಂಡಿತ್ತು. ಇದೀಗ ಮೂರು ದಿನಕ್ಕೆ 20.23 ಕೋಟಿ ರೂ. ಕಲೆಕ್ಷನ್ ಮಾಡುವ ಮೂಲಕ ಬಾಕ್ಸ್ ಅಫೀಸ್‌ನಲ್ಲಿ ದಾಖಲೆ ಬರೆದಿದೆ.

ಸಿಂಗಲ್ ಸ್ಕ್ರೀನ್ ಹಾಗೂ ಮಲ್ಟಿಪೆಕ್ಸ್ ಚಿತ್ರಮಂದಿರಗಳಲ್ಲಿ, ಮೂರು ದಿನಕ್ಕೆ ಮದಗಜ ಸಿನಿಮಾ 7,400 ಶೋಗಳಲ್ಲಿ ಪ್ರದರ್ಶನಗೊಂಡಿದೆ. ಮೊದಲ ದಿನವೇ 7.82 ಕೋಟಿ ರೂ. ಗಳಿಸಿದ ಚಿತ್ರ, ಎರಡನೇ ದಿನ 5.64 ಕೋಟಿ ರೂ. ಹಾಗೂ ಮೂರನೇ ದಿನ 6.31 ಕೋಟಿ ರೂ. ಗಳಿಸಿದೆ ಎಂದು ನಿರ್ದೇಶಕ ಮಹೇಶ್ ಕುಮಾರ್ ತಿಳಿಸಿದ್ದಾರೆ.

ಬೆಂಗಳೂರು, ಕೋಲಾರ, ತುಮಕೂರು ಈ ಮೂರು ಜಿಲ್ಲೆಗಳಲ್ಲಿ 9 ಕೋಟಿ ಹಾಗೂ ಮಂಡ್ಯ, ಮೈಸೂರು, ಚಾಮರಾಜನಗರ, ಹಾಸನ ಜಿಲ್ಲೆಯಲ್ಲಿ 4 ಕೋಟಿ, ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಭಾಗದಲ್ಲಿ 2.2 ಕೋಟಿ, ದಾವಣಗೆರೆ 1 ಕೋಟಿ, ಹೈದರಾಬಾದ್ ಕರ್ನಾಟಕದಲ್ಲಿ 4 ಕೋಟಿ ರೂ. ಗಳಿಸಿದೆ.

ಒಟ್ಟು ಮೂರು ದಿನದಲ್ಲಿ ಮದಗಜ ಸಿನಿಮಾ 20.23 ಕೋಟಿ ರೂ. ಗಳಿಸುವ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಗೆಲುವಿನ ಭಾವುಟ ಹಾರಿಸಿದೆ. ಈ ಮೂಲಕ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ಅಂದುಕೊಂಡಂತೆ ಮದಗಜ ಸಿನಿಮಾದಿಂದ ಬಂಪರ್ ಲಾಟರಿ ಹೊಡೆದಿದ್ದಾರೆ. ಇನ್ನು ಮದಗಜ ಸಿನಿಮಾ ಶ್ರೀಮುರಳಿಗೆ ದೊಡ್ಡ ಮಟ್ಟದ ಯಶಸ್ಸು ತಂದುಕೊಟ್ಟಿದ್ದು, ಬಹಳ ಸಂತಸದಲ್ಲಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

12792
NewsKannada

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.