ಜೋಗಿ ಪ್ರೇಮ ನಿರ್ದೇಶನದ ಏಕ್ ಲವ್ ಯಾ ಚಿತ್ರದ ಹಾಡನ್ನು ಗಂಡು ಮೆಟ್ಟಿನ ನಾಡು ಹುಬ್ಬಳ್ಳಿಯಲ್ಲಿ ವರ್ಲ್ಡ್ ಸ್ಕ್ವೇರ್ ಅವರ ಸಹಯೋಗದಲ್ಲಿ ಬಿಡುಗಡೆ ಮಾಡಿದರು.
ರಾಜ್ಯಾದ್ಯಂತ ಜನವರಿ 21 ರಂದು ಅದ್ದೂರಿಯಾಗಿ ಚಲನಚಿತ್ರ ಬಿಡುಗಡೆಯಾಗಲಿದ್ದು, ಈಗಾಗಲೇ ಬಿಡುಗಡೆಗೊಂಡ 4 ಹಾಡುಗಳು ಹಿಟ್ ಆಗಿದೆ. ಸಂಗೀತ ನಿರ್ದೇಶಕ, ಮ್ಯಾಜಿಕಲ್ ಕಂಪೋಸರ್ ಅರ್ಜುನ ಜನ್ಯ ಅವರ ಮೋಡಿ ಸಿನಿ ರಸಿಕರಿಗೆ ಮೃದು ನೀಡವಂತಾಗಿದೆ.
ಹುಬ್ಬಳ್ಳಿಯಲ್ಲಿ ಬಿಡುಗಡೆಗೊಂಡ ಹಾಡಿಗೆ, ಉತ್ತರ ಕರ್ನಾಟಕದ ಗದಗ ಜಿಲ್ಲೆಯ ಗಜೇಂದ್ರಗಢದ ಪ್ರತಿಭೆ ಶರಣ ಅವರ ಲಿರಿಕ್ಸ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಅದ್ಭುತವಾಗಿ ಕೇಳುಗರನ್ನು ತಣಿಸಿತು