News Kannada
Friday, December 09 2022

ಸಾಂಡಲ್ ವುಡ್

“ಕೆ.ಜಿ.ಎಫ್ -1” ಸಿನಿಮಾ ಬಿಡುಗಡೆಯಾಗಿ ಇಂದಿಗೆ 3 ವರ್ಷ

Photo Credit :

ರಾಕಿಂಗ್ ಸ್ಟಾರ್ ಯಶ್​ ಅಭಿನಯದ “ಕೆ.ಜಿ.ಎಫ್ -1” ಸಿನಿಮಾ ಬಿಡುಗಡೆಯಾಗಿ ಇಂದಿಗೆ 3 ವರ್ಷಗಳನ್ನು ಪೂರೈಸಿದೆ. ಇಡೀ ಭಾರತೀಯ ಚಿತ್ರರಂಗವೇ ಸ್ಯಾಂಡಲ್​ವುಡ್​ನತ್ತ ತಿರುಗಿ ನೋಡುವಂತೆ ಮಾಡಿದ “ಕೆ.ಜಿ.ಎಫ್ -1” ಬಿಡುಗಡೆಯಾಗಿ 3 ವರ್ಷಗಳೇ ಕಳೆದರೂ ಈ ಚಿತ್ರದ ಕ್ರೇಜ್​ ಮಾತ್ರ ಇನೂ ಕಡಿಮೆಯಾಗಿಲ್ಲ.

ನಾನು ಬರೋವರೆಗೂ ಬೇರೆಯವರ ಹವಾ. ಬಂದ್ಮೇಲೆ ನಂದೇ ಹವಾ.. ಎಂದು ರಾಕಿ ಭಾಯ್​ ಹೇಳಿದ ಡೈಲಾಗ್​ ಒಂದು ಟ್ರೆಂಡ್​ ಹುಟ್ಟು ಹಾಕಿತ್ತು. ಸ್ಯಾಂಡಲ್​ವುಡ್​ ಸ್ಟಾರ್​ ಆಗಿದ ಯಶ್​ ಪ್ಯಾನ್​ ಇಂಡಿಯನ್​ ಸ್ಟಾರ್​ ಆದರು. ಸ್ಯಾಂಡಲ್​ವುಡ್​ನ ಹಳೆ ದಾಖಲೆಗಳನ್ನೆಲ್ಲ ಪುಡಿ ಪುಡಿ ಮಾಡಿ “ಕೆ.ಜಿ.ಎಫ್ -1” ಚಿತ್ರ ಹೊಸ ದಾಖಲೆಯನ್ನು ಸೃಷ್ಟಿ ಮಾಡಿತ್ತು. ಕನ್ನಡ ಚಿತ್ರರಂಗದ ಪವರ್​ ಎಂತಹದು ಅನ್ನೊದನ್ನ ಅಂತ “ಕೆ.ಜಿ.ಎಫ್ -1” ಚಿತ್ರ ತೋರಿಸಿಕೊಟ್ಟಿತ್ತು.

“ಕೆ.ಜಿ.ಎಫ್ -1” ಸಕ್ಸಸ್​​ ಬಳಿಕ ಇದೀಗ ಇಡೀ ಭಾರತೀಯ ಚಿತ್ರರಂಗವೇ ‘ಕೆ.ಜಿ.ಎಫ್ -2’ ಚಿತ್ರಕ್ಕಾಗಿ ಕಾತುರದಿಂದ ಕಾದು ಕುಳಿತ್ತಿದೆ. ಈಗಾಗಲೇ ಬಿಡುಗಡೆಯಾಗಿರುವ ಕೆ.ಜಿ.ಎಫ್​-2 ಚಿತ್ರದ ಟೀಸರ್ ಹೊಸ ದಾಖಲೆಯನ್ನು ಸೃಷ್ಟಿ ಮಾಡಿತ್ತು. ಅದರಂತೇ ಪ್ರೇಕ್ಷಕರು ‘ಕೆ.ಜಿ.ಎಫ್ -2’ ಚಿತ್ರದ ಮೇಲೆ ಬಾರಿ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ. ಮುಂದಿನ ವರ್ಷ ಏಪ್ರೀಲ್​ 14 ರಂದು ‘ಕೆ.ಜಿ.ಎಫ್ -2’ ಚಿತ್ರ ವಲ್ಡ್​ವೈಡ್​ ರಿಲೀಸ್​ ಆಗುತ್ತಿದ್ದು ಮತ್ತೊಮೆ ಯಾವ ಹೊಸ ದಾಖಲೆಯನ್ನು ಸೃಷ್ಟಿ ಮಾಡುತ್ತೆ ಅನ್ನೊದನ್ನ ಕಾದು ನೋಡಬೇಕು.

ಇನ್ನು ಈ ಬಗ್ಗೆ ಹೊಂಬಾಳೆ ಫಿಲಂಸ್​ ತನ್ನ ಯೂಟ್ಯೂಬ್ ಚಾನೆಲ್​ನಲ್ಲಿ ಕೆ.ಜಿ.ಎಫ್​ ಚಿತ್ರದ ಸವಿ ನೆನಪಿನ ಕೆಲವು ಮೇಕೆಂಗ್​ ತುಣುಕುಗಳನ್ನು ಹಂಚಿಕೊಂಡಿದ್ದಾರೆ. ಮುಂದಿನ ವರ್ಷ ಏಪ್ರೀಲ್​ 14 ರಂದು ‘ಕೆ.ಜಿ.ಎಫ್ -2’ ಚಿತ್ರ ವಲ್ಡ್​ವೈಡ್​ ರಿಲೀಸ್​ ಆಗುತ್ತಿದ್ದು ಮತ್ತೊಮೆ ಯಾವ ಹೊಸ ದಾಖಲೆಯನ್ನು ಸೃಷ್ಟಿ ಮಾಡುತ್ತೆ ಅನ್ನೊದನ್ನ ಕಾದು ನೋಡಬೇಕು.

See also  'ಗೊತ್ತಿಲ್ಲದೇ ನಡೆದ ತಪ್ಪಿಗಾಗಿ ಕೊನೆವರೆಗೂ ಕ್ಷಮೆ ಕೇಳುತ್ತೇನೆ’ : ಪ್ರೇಮ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

12792
NewsKannada

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು